ಕೋಲ್ಕತ್ತಾ ಸೇರಿ ದೇಶದ 4 ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ

Public TV
1 Min Read

ನವದೆಹಲಿ: ಕೋಲ್ಕತ್ತಾ ಸೇರಿ ದೇಶದ ಪ್ರಮುಖ ನಾಲ್ಕು ವಿಮಾನ ನಿಲ್ದಾಣಗಳಲ್ಲಿ (Airport Threat) ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಲಾಗಿದ್ದು, ಎಲ್ಲೆಡೆ ಗೊಂದಲದ ವಾತಾವರಣ ನಿರ್ಮಾಣ ಆಗಿದೆ.

ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಏಪ್ರಿಲ್ 26 ರಂದು ಇಮೇಲ್ ಬಂದಿದ್ದು, ಅದರಲ್ಲಿ ಸಂಕೀರ್ಣದ ವಿವಿಧ ಸ್ಥಳಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಹೇಳಲಾಗಿದೆ. ಇಮೇಲ್ ಸ್ವೀಕರಿಸಿದ ನಂತರ ವಿಮಾನ ನಿಲ್ದಾಣದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತೈವಾನ್‌ನಲ್ಲಿ ಮತ್ತೆ ನಡುಗಿದ ಭೂಮಿ- ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲು

ಇಮೇಲ್‌ನಲ್ಲೆ ಏನಿದೆ?: ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಮೇಲ್ ಕಳುಹಿಸುವವರ ತಂಡವು ರಾಮೇಶ್ವರಂ ಕೆಫೆಯಲ್ಲಿ ಇಟ್ಟಿದ್ದ ಬಾಂಬ್‌ಗಿಂತಲೂ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಇರಿಸಲಾದ ಬಾಂಬ್ ದೊಡ್ಡದಾಗಿದೆ. ಒಟ್ಟು ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಬಾಂಬ್‌ಗಳನ್ನು ಇಡಲಾಗಿದೆ. ಅಲ್ಲದೇ ಈ ಎಲ್ಲಾ ಬಾಂಬ್‌ಗಳು ಮಧ್ಯಾಹ್ನ 12.55 ಕ್ಕೆ ಸ್ಫೋಟಗೊಳ್ಳುತ್ತವೆ ಎಂದು ಮೇಲ್‌ನಲ್ಲಿ ತಿಳಿಸಲಾಗಿದೆ.

ಹುಸಿ ಬೆದರಿಕೆ: ಶುಕ್ರವಾರ ಬೆಳಗ್ಗೆ 11.40ರ ಸುಮಾರಿಗೆ ಕೋಲ್ಕತ್ತಾ ವಿಮಾನ ನಿಲ್ದಾಣದ ವ್ಯವಸ್ಥಾಪಕರಿಗೆ ಈ ಮೇಲ್ ಬಂದಿದೆ. ಸದ್ಯ ಮಧ್ಯಾಹ್ನ 12.55ಕ್ಕೆ ಬಾಂಬ್ ಸ್ಫೋಟದ ಬೆದರಿಕೆ ಇರುವ ಇಮೇಲ್ ಸುಳ್ಳು. ಅಲ್ಲದೇ ಇಮೇಲ್‌ನ ಮೂಲವನ್ನು ಹುಡುಕುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article