ಹಾಸನ: ಜಿಲ್ಲಾಧಿಕಾರಿಗೆ ಕಚೇರಿಗೆ ಬಾಂಬ್ ಬೆದರಿಕೆ (Bomb Threat) ಮೇಲ್ ಬಂದಿದೆ. ಇ-ಮೇಲ್ ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕಾಗುತ್ತದೆ. ಯಾರು ಆತಂಕಪಡುವುದು ಬೇಡ ಎಂದ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಪ್ರತಿಕ್ರಿಯಿಸಿದ್ದಾರೆ.
ಸೋಮವಾರ (ಡಿ.15) ಹಾಸನ ಕಲೆಕ್ಟರ್ ಅಂಡ್ ಸ್ಟಾಫ್ ಎಂದು ಮೇಲ್ ಬಂದಿದೆ. ಆರ್ಮಾ ಅಶ್ದಿನ್ ಶೇಖರ್ ಹೆಸರಿನಲ್ಲಿ ಮೇಲ್ ಬಂದಿದ್ದು, ಪಾಕಿಸ್ತಾನ ಐಎಸ್‌ಐ ಸೆಲ್ ಎಕ್ಸ್-ಎಲ್‌ಎಲ್‌ಟಿಐ ಕೇಡರ್‌ನಿಂದ ಬ್ಲಾಸ್ಟ್ ಆಯ್ಕೆ ಮಾಡಲಾಗುತ್ತಿದೆ ಎಂದು ಬರೆಯಲಾಗಿದೆ. ಇದನ್ನೂ ಓದಿ: 3 ಬೈಕ್‌ಗಳ ನಡ್ವೆ ಸರಣಿ ಅಪಘಾತ – ಮೂವರು ಯುವಕರ ಕೈ-ಕಾಲು ಮುರಿತ
ಮೇಲ್ ಬಂದ ತಕ್ಷಣವೇ ಹಾಸನ ಉಪವಿಭಾಗಾಧಿಕಾರಿ ಪೋಲಿಸರಿಗೆ ದೂರು ನೀಡಿದ್ದು, ದೂರಿನನ್ವಯ ಎಫ್‌ಐಆರ್ ದಾಖಲಾಗಿದೆ. ಜಿಲ್ಲಾಧಿಕಾರಿ ಕಚೇರಿಗೆ ಜಿಲ್ಲಾ ಪೊಲೀಸರ ತಂಡ, ಶ್ವಾನದಳ ದೌಡಾಯಿಸಿದ್ದು, ಕಟ್ಟಡದ ಮೂಲೆ, ಮೂಲೆಯಲ್ಲಿಯೂ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾತನಾಡಿ, ಯಾವುದೇ ಗಂಭೀರ ವಿಷಯ ಇಲ್ಲ. ಇ-ಮೇಲ್ ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕಾಗಿದ್ದು, ಯಾರು ಆತಂಕ ಪಡುವುದು ಬೇಡ ಎಂದಿದ್ದಾರೆ.ಇದನ್ನೂ ಓದಿ: 2023-24ನೇ ಸಾಲಿನ ಕರ್ನಾಟಕ ಬಾಲವಿಕಾಸ ಅಕಾಡೆಮಿ ಪ್ರಶಸ್ತಿಗೆ ಅನುಪ್ರಿಯಾ ಕುಲಕರ್ಣಿ ಆಯ್ಕೆ

