ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್ ಬೆದರಿಕೆ ಮೇಲ್

By
1 Min Read

ಬೆಂಗಳೂರು: ಹುಸಿ ಬಾಂಬ್ ಮೇಲ್ ನ (Threat Mail) ಗುಮ್ಮ ಮತ್ತೆ ಸದ್ದು ಮಾಡಿದೆ. ಇಷ್ಟು ದಿನ ಸ್ಕೂಲ್ ಗಳನ್ನ ಟಾರ್ಗೆಟ್ ಮಾಡಿಕೊಂಡಿದ್ದ ದುಷ್ಕರ್ಮಿಗಳು ಇಂದು ಮ್ಯೂಸಿಯಂಗಳನ್ನ ಟಾರ್ಗೆಟ್ ಮಾಡಿ ಬಾಂಬ್ ಮೇಲ್ ಕಳಿಸಿದ್ದಾರೆ.

ಕಸ್ತೂರಬಾ ರಸ್ತೆಯಲ್ಲಿರೊ ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂಗೆ (M. Visvesvaraya Museum) ಪ್ರತಿ ದಿನ ಶಾಲಾ ಮಕ್ಕಳು ಸೇರಿದಂತೆ ಸಾವಿರಾರು ಜನ ಭೇಟಿ ಕೊಡ್ತಾರೆ. ಆದರೆ ಇವತ್ತು ಮ್ಯೂಸಿಯಂ ಓಪನ್ ಮಾಡಿದಾಗ ಭಯದ ವಾತಾವರಣ ಸೃಷ್ಟಿಯಾಗಿಬಿಟ್ಟಿತ್ತು. ಬೆಳಗ್ಗೆ 9 ಗಂಟೆಗೆ ಅಧಿಕಾರಿಗಳು ಎಂದಿನಂತೆ ಇ-ಮೇಲ್ ಪರಿಶೀಲಿಸಿದ್ದಾರೆ. ಅದ್ರಲ್ಲಿನ ಒಂದು ಇ-ಮೇಲ್ ದಿಗಿಲು ಹುಟ್ಟಿಸಿತ್ತು. Morgue999lol ಎಂಬ ಇ-ಮೇಲ್ ಐಡಿಯಿಂದ ವಿಶ್ವೇಶ್ವರಯ್ಯ ಮ್ಯೂಸಿಯಂ ಗೆ ಬಾಂಬ್ ಇಟ್ಟಿರೋದಾಗಿ ಉಲ್ಲೇಖವಾಗಿತ್ತು.

ಮ್ಯೂಸಿಯಂ ಒಳಗೆ ವಿವಿಧ ಸ್ಫೋಟಕ ವಸ್ತುಗಳನ್ನು ಇಟ್ಟಿದ್ದೇವೆ. ಅದನ್ನು ಗೌಪ್ಯ ಸ್ಥಳದಲ್ಲಿ ಇರಿಸಿದ್ದು, ಬೆಳಗ್ಗೆ ಸ್ಫೋಟಗೊಳ್ಳಲಿದೆ. ಮ್ಯೂಸಿಯಂ ನಲ್ಲಿರುವ ಅಷ್ಟು ಜನ ಸಾವನ್ನಪ್ಪಲ್ಲಿದ್ದಾರೆ. ನಾವು ಟೆರರಿಸರ್ಸ್ 111 ಎಂಬ ಸಂಘಟನೆಗೆ ಸೇರಿದವರು. ನಮ್ಮ ಗ್ರೂಪ್ ಹೆಸರನ್ನ ಮಾಧ್ಯಮದವರಿಗೆ ನೀಡಿ ಅಂತಾ ಮೇಲ್ ಕಳಿಸಲಾಗಿತ್ತು. ಇದನ್ನೂ ಓದಿ: ತುಂಡಾದ ಭಾರತದಲ್ಲೂ ಹಿಂದೂಗಳು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ ಕಾಂಗ್ರೆಸ್: ಸಿ.ಟಿ.ರವಿ ಕಿಡಿ

ಮೇಲ್ ನೋಡಿದ್ದೇ ತಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ, ಶ್ವಾನ ದಳ, ಬಾಂಬ್ ನಿಶ್ಕ್ರಿಯ ದಳದ ತಂಡ ಪರಿಶೀಲನೆ ನಡೆಸಿದ್ದು, ಯಾವುದೇ ಸ್ಫೋಟಕ ವಸ್ತು ಕಂಡು ಬಂದಿರೋದಿಲ್ಲ. ನಂತರ ಇದೊಂದು ಹುಸಿ ಬಾಂಬ್ ಕರೆ ಅನ್ನೋದು ಖಾತ್ರಿ ಆಗ್ತಿದ್ದಂತೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಮೇಲ್ ಸಿಸಿ ಅಪ್ಲೈ ಮಾಡಿ ಹತ್ತಾರು ಮ್ಯೂಸಿಯಂ ಗಳಿಗೆ ಇದೇ ರೀತಿಯಾದಂತಹ ಬೆದರಿಕೆ ಮೇಲ್ ಗಳನ್ನ ಕಳಿಸಲಾಗಿದೆ.

ಸದ್ಯ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐಪಿ ಅಡ್ರಸ್ ಹುಡುಕಾಟ ನಡೆಸ್ತಿದ್ದಾರೆ. ಶಾಲೆಗಳಿಗೆ ಬಾಂಬ್ ಮೇಲ್ ಕಳಿಸಿದ್ದವರೇ ಇನ್ನೂ ಪತ್ತೆಯಾಗಿಲ್ಲ. ಇನ್ನು ಮ್ಯೂಸಿಯಂ ಗಳಿಗೆ ಬಾಂಬ್ ಬೆದರಿಕೆ ಕಳಿಸಿದವರನ್ನ ನಮ್ಮ ಪೊಲೋಸ್ರು ಪತ್ತೆ ಹಚ್ತಾರಾ ಕಾದು ನೋಡಬೇಕಿದೆ.

 

Share This Article