ಕಲಬುರಗಿ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ

Public TV
1 Min Read

ಕಲಬುರಗಿ: ಇಲ್ಲಿನ ಏರ್‌ಪೋರ್ಟ್ ಗೆ ಬಾಂಬ್ ಬೆದರಿಕೆ (Bomb Threat) ಹಾಕಿರುವ ಪ್ರಸಂಗವೊಂದು ನಡೆದಿದೆ.

ಏರ್‌ಪೋರ್ಟ್ ಮೇಲ್ ಐಡಿಗೆ ಅನಾಮಧೇಯ ವ್ಯಕ್ತಿಯಿಂದ ಮೇಲ್ ಬಂದಿದ್ದು, ಏರ್‌ಪೋರ್ಟ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ವಿಷಯ ಬಯಲಾಗುತ್ತಿದ್ದಂತೆಯೇ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ, ಪೊಲೀಸರು ದೌಡಾಯಿಸಿದ್ದಾರೆ.

ಬೆದರಿಕೆ ಮೇಲ್‍ನಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪ್ರಯಾಣಿಕರ ಬ್ಯಾಗ್‍ಗಳ ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೇ ಏರ್‌ಪೋರ್ಟ್ ನ ಇಂಚಿಂಚು ಸ್ಥಳ ಪರಿಶೀಲನೆ ಪೊಲೀಸರು ನಡೆಸಿದ್ದಾರೆ. ಇದನ್ನೂ ಓದಿ: ಸ್ಫೋಟಕ ಟ್ವಿಸ್ಟ್‌ – ಸೂರಜ್ ರೇವಣ್ಣ ಪರ ದೂರು ನೀಡಿದ್ದ ದೂರುದಾರನೇ ನಾಪತ್ತೆ‌!

ಕಂದಾಯ ಸಚಿವ ಕೃಷ್ಣೆಬೈರೇಗೌಡ ಸೇರಿ ಹಲವು ಪ್ರಯಾಣಿಕರಿದ್ದ ವಿಮಾನವು ಇಂದು ಬೆಳಗ್ಗೆ 9:20ಕ್ಕೆ ಬೆಂಗಳೂರಿನಿಂದ ಕಲಬುರಗಿ ಏರ್‌ಪೋರ್ಟ್ ಗೆ ಆಗಮಿಸಿದೆ. ಇತ್ತ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಏರ್‌ಪೋರ್ಟ್ ಸಿಬ್ಬಂದಿ 20 ನಿಮಿಷ ಪ್ಯಾಸೆಂಜರ್ ಗಳನ್ನ ಇಳಿಸಲಿಲ್ಲ. ಏರ್‌ಪೋರ್ಟ್ ತಪಾಸಣೆ ಬಳಿಕವೇ ಅಧಿಕಾರಿಗಳು ಪ್ರಯಾಣಿಕರನ್ನು ಕೆಳಗಿಳಿಸಿದರು.

ಹುಸಿ ಬಾಂಬ್ ಬೆದರಿಕೆ: ಏರ್‌ಪೋರ್ಟ್‌‌ನಲ್ಲಿ ತಪಾಸಣೆ ಕಾರ್ಯ ಮುಕ್ತಾಯವಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದಿಂದ ಎರಡು ಗಂಟೆಗಳ ಕಾಲ ತಪಾಸಣೆ ನಡೆಸಲಾಗಿದೆ. ಈ ವೇಳೆ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದಾಗಿ ಬಯಲಾಗಿದೆ. ಸದ್ಯ ಅನಾಮಧೇಯ ವ್ಯಕ್ತಿ ಮೆಲ್ ಬಗ್ಗೆ ತನಿಖೆ ನಡೆಸಲು ಏರ್‌ಪೋರ್ಟ್ ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ.

Share This Article