ಬೆಂಗಳೂರಿನ ಮೂರು ಹೋಟೆಲ್‌ಗಳಿಗೆ ಬಾಂಬ್‌ ಬೆದರಿಕೆ

Public TV
1 Min Read

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಬಾಂಬ್ ಬೆದರಿಕೆ ಇಮೇಲ್ ಮುಂದುವರಿದಿದೆ. ಮತ್ತೆ ನಗರದ ಮೂರು ಹೋಟೆಲ್ ಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ.

ಎಲೆಕ್ಟ್ರಾನಿಕ್ ಸಿಟಿಯ ಬಳಿಯ ಒಟೇರಾ ಹೋಟೆಲ್ ಸೇರಿ ಮೂರು ಹೋಟೆಲ್ ಗೆ ಮೇಲ್ (Bomb Threat Email) ಬಂದಿದೆ. ನಸುಕಿನ ಜಾವ 2 ಗಂಟೆ ಸುಮಾರಿಗೆ ಇಮೇಲ್‌ ಬಂದಿದ್ದು, ಇಂದು ಬೆಳಗ್ಗೆ ಹೋಟೆಲ್ ಸಿಬ್ಬಂದಿ ಇಮೇಲ್ ಚೆಕ್ ಮಾಡುವಾಗ ಬೆಳಕಿಗೆ ಬಂದಿದೆ. ಕೂಡಲೇ ಗಾಬರಿಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಒಟೇರಾ ಹೋಟೆಲ್ ಗೆ ಬಾಂಬ್ ಸ್ಕ್ವಾಡ್ ಮತ್ತು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಇದೊಂದು ಹುಸಿಬಾಂಬ್‌ ಬೆದರಿಕೆ ಅನ್ನೋದು ಬಯಲಾಗಿದೆ.

ಈ ಹಿಂದೆ ಹಲವು ಶಾಲೆಗಳಿಗೆ ಬಾಂಬ್‌ ಬೆದರಿಕೆಯ ಇಮೇಲ್‌ ಕಳುಹಿಸಲಾಗಿತ್ತು. ಈ ವೇಳೆಯೂ ಗಾಬರಿಗೊಂಡಿದ್ದ ಶಾಲಾ ಆಡಳಿತ ಮಂಡಳಿಗಳು ಮಕ್ಕಳನ್ನು ಮನೆಗೆ ಕಳುಹಿಸಿದ್ದವು. ಇತ್ತ ಪೊಲೀಸರು ಹಾಗೂ ಬಾಂಬ್ ಸ್ಕ್ವಾಡ್ ಬಂದು ಪರಿಶೀಲನೆ ನಡೆಸಿದಾಗ ಹುಸಿಬಾಂಬ್‌ ಕರೆ ಎಂದು ಬಯಲಾಗಿತ್ತು.

Share This Article