Bomb Threatː ಬೆಂಗಳೂರಿನ ITBT ಕಂಪನಿಗೆ ಬಾಂಬ್ ಬೆದರಿಕೆ ಕರೆ..!

Public TV
1 Min Read

ಬೆಂಗಳೂರು: ಸಿಲಿಕಾನ್‌ ಸಿಟಿಯ ಪ್ರತಿಷ್ಟಿತ ITBT ಕಂಪನಿಗೆ ಬಾಂಬ್‌ ಬೆದರಿಕೆ ಕರೆ ಬಂದಿದ್ದು ಆತಂಕ ಸೃಷ್ಟಿಸಿದೆ.

ಹೌದು. ಬೆಂಗಳೂರಿನ ಇಕೋ ಸ್ಪೇಸ್‌ನ IBDO ಅನ್ನೋ ಕಂಪನಿಗೆ ಬಾಂಬ್‌ ಹಾಕುವುದಾಗಿ ಬೆದರಿಕೆ ಕರೆ ಬಂದಿದೆ.

ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿದ್ದು, ನಿಮ್ಮ ಕಂಪನಿಯಲ್ಲಿ ಬಾಂಬ್‌ ಇಟ್ಟಿದ್ದೀವಿ, ಸ್ವಲ್ಪ ಸಮಯದಲ್ಲೇ ಬ್ಲಾಸ್ಟ್‌ ಆಗುತ್ತೆ ಅಂತಾ ಹೆದರಿಸಿದ್ದಾನೆ.

ಕೂಡಲೇ ಕಂಪನಿಯಿಂದ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬೆಳ್ಳಂದೂರು ಪೊಲೀಸರು, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯದಳ ಸ್ಥಳಕ್ಕೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ಐಎಸ್‌ಡಿ ಅಧಿಕಾರಿಗಳ ತಂಡವೂ ಸ್ಥಳಕ್ಕೆ ಧಾವಿಸಿದ್ದು, ತಪಾಸಣೆ ನಡೆಸಲಾಗಿದೆ. ಇದನ್ನೂ ಓದಿ: ಖ್ಯಾತ ಕಥೆಗಾರ ಟಿ.ಕೆ. ದಯಾನಂದ್ ಬರೆದ ಕಥೆಯೇ ‘ಟೋಬಿ’ ಸಿನಿಮಾ

ಹಳೆ ಉದ್ಯೋಗಿಯಿಂದಲೇ ಬೆದರಿಕೆ ಕರೆ: ಬೆಂಗಳೂರಿನ ಇಕೋ ಸ್ಪೇಸ್‌ನ IBDO ಅನ್ನೋ ಕಂಪನಿಗೆ ಬಾಂಬ್‌ ಬೆದರಿಕೆ ಕರೆ ಬಂದಿದ್ದು ಕಂಪನಿಯ ಹಳೆ ಉದ್ಯೋಗಿಯಿಂದಲೇ ಅನ್ನೋದು ಗೊತ್ತಾಗಿದೆ. ಕೆಲವೇ ದಿನಗಳ ಹಿಂದೆ ಕೆಲಸ ಬಿಟ್ಟಿದ್ದ ವ್ಯಕ್ತಿಯಿಂದ ಹುಸಿ ಬಾಂಬ್‌ ಕರೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಪೊಲೀಸರು ಕಂಪೆನಿಯ ಮಾಜಿ ಉದ್ಯೋಗಿಗಾಗಿ ಹುಡುಕಾಟ ನಡೆಸಿದ್ದಾರೆ.

Share This Article