ಕೇರಳದಲ್ಲಿರುವ RSS ಕಚೇರಿ ಮೇಲೆ ಬಾಂಬ್ ದಾಳಿ

Public TV
2 Min Read

ತಿರುವನಂತಪುರಂ: ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‍ಎಸ್) ಕಚೇರಿಯ ಮೇಲೆ ಇಂದು ಮುಂಜಾನೆ ಬಾಂಬ್ ದಾಳಿ ನಡೆದಿದೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ದಾಳಿ ವೇಳೆ ಕಟ್ಟಡದ ಕಿಟಕಿ ಗಾಜುಗಳು ಒಡೆದು ಹೋಗಿದೆ. ನಂತರ ಕೂಡಲೇ ಸ್ಥಳಕ್ಕೆ ಆಗಮಿಸಿದ ಪಯ್ಯನ್ನೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ನಿಷೇಧಿತ ಪ್ಲಾಸ್ಟಿಕ್ ಜಪ್ತಿ – 5.97 ಲಕ್ಷ ರೂ. ದಂಡ ವಸೂಲಿ

10 ವರ್ಷಗಳ ಹಿಂದೆ ಹತ್ಯೆಗೀಡಾದ ಕಾರ್ಯಕರ್ತನ ಸವಿನೆನಪಿಗಾಗಿ ಆರ್‌ಎಸ್‍ಎಸ್ ಬಲಿದಾನ ಯಾತ್ರೆ ನಡೆಸಲು ಮುಂದಾಗಿತ್ತು. ಹೀಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲು ಸಂಸ್ಥೆ ಯೋಜಿಸಿತ್ತು. ಇದನ್ನೂ ಓದಿ:  ಎಲ್ಲ ಉಕ್ರೇನ್ ಪ್ರಜೆಗಳಿಗೆ ವೇಗವಾಗಿ ರಷ್ಯಾದ ಪೌರತ್ವ ಕೊಡಲು ಮುಂದಾದ ಪುಟಿನ್

ಈ ನಡುವೆ ಮಧ್ಯರಾತ್ರಿ 1.30ರ ಸುಮಾರಿಗೆ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪಯ್ಯನ್ನೂರಿನಲ್ಲಿರುವ ರಾಷ್ಟ್ರ ಭವನ ಎಂಬ ಆರ್‌ಎಸ್‍ಎಸ್ ಕಚೇರಿಯ ಮೇಲೆ ಸ್ಥಳೀಯವಾಗಿ ತಯಾರಿಸಿದ ಬಾಂಬ್ ಎಸೆದಿದ್ದಾರೆ. ಈ ಪ್ರದೇಶವು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಹಿಂಸಾತ್ಮಕ ಘರ್ಷಣೆಯ ಇತಿಹಾಸವನ್ನು ಹೊಂದಿದೆ. 2010-2016ರ ನಡುವೆ ಈ ಪ್ರದೇಶದಲ್ಲಿ ಆರ್‌ಎಸ್‍ಎಸ್ ಕಾರ್ಯಕರ್ತರ ಮೇಲೆ ಹಲವಾರು ದಾಳಿಗಳು ನಡೆದಿವೆ.

ಈ ದಾಳಿಯ ಹಿಂದೆ ಸಿಪಿಎಂ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಘಟನೆಯ ವೇಳೆ ಆರ್‌ಎಸ್‍ಎಸ್ ಕಚೇರಿಯಲ್ಲಿ ಬೆರಳೆಣಿಕೆಯಷ್ಟು ಜನರಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸದ್ಯ ಪೊಲೀಸರು ಬೆಳಗ್ಗೆ 6 ಗಂಟೆಗೆ ಸ್ಥಳಕ್ಕೆ ಆಗಮಿಸಿದ್ದು, ಘಟನೆ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಲಭ್ಯತೆಯ ಕೊರತೆಯಿಂದಾಗಿ ಕೃತ್ಯದ ಹಿಂದಿರುವ ವ್ಯಕ್ತಿಗಳ ಗುರುತು ಪತ್ತೆ ಹಚ್ಚುವುದು ಕಷ್ಟಕರವಾಗಿದೆ.

ಈ ಪ್ರದೇಶವು ವಸತಿ ವಲಯವಾಗಿದ್ದು, ಸ್ಫೋಟದ ಸದ್ದು ಕೇಳಿದ ನಿವಾಸಿಗಳು ಮನೆಯಿಂದ ಹೊರಗೆ ಬಂದಿದ್ದಾರೆ. ಈ ಹಿಂದೆಯೂ ಈ ಪ್ರದೇಶದಲ್ಲಿ ಪೆಟ್ರೋಲ್ ಬಾಂಬ್ ದಾಳಿ ನಡೆದ ಉದಾಹರಣೆಗಳಿದೆ. ಸೋಮವಾರ ಈ ಪ್ರದೇಶದಲ್ಲಿ ಬಿಜೆಪಿ ಮತ್ತು ಆರ್‌ಎಸ್‍ಎಸ್ ನಡುವೆ ಮಾತಿನ ಚಕಮಕಿ ನಡೆದಿತ್ತು.

 

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *