ಪಾಕಿಸ್ತಾನದಲ್ಲಿ ಬಾಂಬ್ ಸ್ಫೋಟ – ಯೂನಿಯನ್ ಕೌನ್ಸಿಲ್ ಅಧ್ಯಕ್ಷ ಸೇರಿ 7 ಮಂದಿ ಸಾವು

Public TV
1 Min Read

ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಬಲೂಚಿಸ್ತಾನದಲ್ಲಿ (Balochistan) ಸೋಮವಾರ ತಡರಾತ್ರಿ ನೆಲಬಾಂಬು ಸ್ಫೋಟಗೊಂಡಿದ್ದು (Bomb Blast) ಘಟನೆಯಲ್ಲಿ ಯೂನಿಯನ್ ಕೌನ್ಸಿಲ್ (UC) ಅಧ್ಯಕ್ಷ ಸೇರಿದಂತೆ 7 ಜನರು ಸಾವನ್ನಪ್ಪಿದ್ದಾರೆ.

ಘಟನೆ ಬಲೂಚಿಸ್ತಾನದ ಪಂಜ್‌ಗುರ್ ಜಿಲ್ಲೆಯಲ್ಲಿ ನಡೆದಿದೆ. ಬಲ್ಗತಾರ್ ಯುಸಿ ಅಧ್ಯಕ್ಷ ಇಶ್ತಿಯಾಕ್ ಯಾಕೂಬ್ ಹಾಗೂ ಇತರರು ಮದುವೆ ಸಮಾರಂಭವೊಂದರಿಂದ ವಾಪಸಾಗುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ವಾಹನವನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಬಾಂಬ್ ಸ್ಫೋಟಿಸಿದ್ದಾರೆ. ದುಷ್ಕರ್ಮಿಗಳು ರಿಮೋಟ್ ಸ್ಫೋಟಕ ಸಾಧನವನ್ನು ವಾಹನದಲ್ಲಿ ಅಳವಡಿಸಿದ್ದರು ಎಂದು ಪಂಜ್‌ಗುರ್ ಡೆಪ್ಯುಟಿ ಕಮಿಷನರ್ ಅಮ್ಜದ್ ಸೊಮ್ರೊ ತಿಳಿಸಿದ್ದಾರೆ.

ವಾಹನ ಬಲ್ಗತಾರ್‌ನ ಚಕರ್ ಬಜಾರ್ ತಲುಪಿದಾಗ ಸ್ಫೋಟ ಸಂಭವಿಸಿದೆ. ಹತ್ಯೆಯಾದವರನ್ನು ಮೊಹಮ್ಮದ್ ಯಾಕೂಬ್, ಇಬ್ರಾಹಿಂ, ವಾಜಿದ್, ಫಿದಾ ಹುಸೇನ್, ಸರ್ಫರಾಜ್ ಮತ್ತು ಹೈದರ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬಲ್ಗತಾರ್ ಹಾಗೂ ಪಂಜ್‌ಗುರ್ ನಿವಾಸಿಗಳು. ಮೃತರಲ್ಲಿ ನಾಲ್ವರ ಗುರುತನ್ನು ತಕ್ಷಣಕ್ಕೆ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ಮೃತರ ಕುಟುಂಬಸ್ಥರು ಆಸ್ಪತ್ರೆ ತಲುಪಿದಾಗ ಮೃತದೇಹಗಳನ್ನು ಗುರುತಿಸಲಾಗಿದೆ. ಇದನ್ನೂ ಓದಿ: ಸ್ಪಂದನಾ ಮೃತದೇಹ ಇಂದು ತಡ ರಾತ್ರಿ ಬೆಂಗಳೂರಿಗೆ, ಅಂತಿಮ ದರ್ಶನಕ್ಕೆ ಅವಕಾಶ

ಕೇವಲ 1 ವಾರದ ಹಿಂದೆ ಖೈಬರ್ ಪಖ್ತುನ್ಖ್ವಾದ ಬಜೌರ್ ಜಿಲ್ಲೆಯಲ್ಲಿ ಜಮಿಯತ್ ಉಲೇಮಾ-ಎ-ಇಸ್ಲಾಂ-ಫಜಲ್ (ಜೆಯುಐ-ಎಫ್) ಕಾರ್ಯಕರ್ತರ ಸಮಾವೇಶದಲ್ಲಿ ಭಾರೀ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 62 ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಕಾಫಿನಾಡಿನ ಸಹನಾ ಮೊಸೆಸ್- ನಾಲ್ವರಿಗೆ ಪುನರ್ಜನ್ಮ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್