ನಿಜವಾಗ್ಲೂ ಪಠಾಣ್‌ ಸ್ಟಾರ್‌ಗೆ ಆಕ್ಸಿಡೆಂಟ್‌ ಆಗಿತ್ತಾ- ಶಾರುಖ್ ಹೆಲ್ತ್ ಅಪ್‌ಡೇಟ್‌ನಲ್ಲೇನಿದೆ?

Public TV
2 Min Read

ಬಾಲಿವುಡ್ (Bollywood) ಕಿಂಗ್ ಖಾನ್ ಶಾರುಖ್ (Sharukh Khan), ಅವರ ಅಭಿಮಾನಿಗಳು ಬೆಚ್ಚಿ ಬೀಳುವ ಸುದ್ದಿವೊಂದು ಹರಿದಾಡಿತ್ತು. ಶೂಟಿಂಗ್ ವೇಳೆ ಅವರ ಮೂಗಿಗೆ ಬಲವಾದ ಪೆಟ್ಟು ಬಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೆ, ಇದು ಫೇಕ್ ನ್ಯೂಸ್ ಎಂಬುದು ಸಾಬೀತಾಗಿದೆ. ಶಾರುಖ್ ಖಾನ್ ಅವರು ಫಿಟ್ & ಫೈನ್ ಆಗಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಅವರು ಶಾರುಖ್ ಎಂಟ್ರಿ ಕೊಟ್ಟಾಗ ಸರ್ಜರಿಗೆ ಒಳಗಾದ ಯಾವುದೇ ಗುರುತು ಅವರ ದೇಹದ ಮೇಲೆ ಇರಲಿಲ್ಲ. ಹೀಗಾಗಿ, ಆಕ್ಸಿಡೆಂಟ್ ಸುದ್ದಿ ಸುಳ್ಳಾ ಎನ್ನುವ ಪ್ರಶ್ನೆ ಮೂಡಿದೆ.

ಶಾರುಖ್ ಖಾನ್ ಸಿನಿಮಾ ಒಂದರ ಶೂಟಿಂಗ್‌ಗೆ ಲಾಸ್ ಏಂಜಲೀಸ್‌ಗೆ ತೆರಳಿದ್ದರು. ಶೂಟಿಂಗ್ ವೇಳೆ ಸಂಭವಿಸಿದ ಅವಘಡದಿಂದ ಶಾರುಖ್ ಮೂಗಿಗೆ ಬಲವಾದ ಏಟು ಬಿದ್ದಿದೆ ಎಂದು ಸುದ್ದಿ ಹಬ್ಬಿತ್ತು. ಕೂಡಲೇ ಶಾರುಖ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಸರ್ಜರಿ ಮಾಡಲಾಗಿದೆ ಎಂದು ಹೇಳಲಾಗಿತ್ತು. ಈಗ ಈ ಬಗ್ಗೆ ಅಪ್‌ಡೇಟ್ ಸಿಕ್ಕಿದೆ. ಶಾರುಖ್ ಆರೋಗ್ಯವಾಗಿದ್ದಾರೆ. ಇದನ್ನೂ ಓದಿ:‘ಕಾಂತಾರ’ ಹೀರೋ ಕಡೆಯಿಂದ ಫ್ಯಾನ್ಸ್‌ಗೆ ಸಿಹಿಸುದ್ದಿ- ರಿಷಬ್ ಬರ್ತ್‌ಡೇಗೆ ಬಿಗ್ ಸರ್ಪ್ರೈಸ್

ಜುಲೈ 4ರ ರಾತ್ರಿ ಶಾರುಖ್ ಖಾನ್ ಅವರು ಮುಂಬೈ ವಿಮಾನ ನಿಲ್ದಾಣದಿಂದ ಹೊರ ಬರುವಾಗ ಕಾಣಿಸಿಕೊಂಡಿದ್ದಾರೆ. ಅವರ ಮೂಗು ಸರಿಯಾಗಿಯೇ ಇದೆ. ಹೀಗಾಗಿ ಅವರಿಗೆ ಅಪಘಾತ ಆಗಿತ್ತು ಎಂಬ ಸುದ್ದಿ ಎಷ್ಟು ಸತ್ಯ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗುತ್ತಿದೆ. ಇನ್ನೂ ಕೆಲವರು ಮೂಗಿನ ಒಳಭಾಗದಲ್ಲಿ ಗಾಯ ಉಂಟಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಾರುಖ್ ಖಾನ್ (Sharukh Khan) ಅವರ ಮುಂಬರುವ ಸಿನಿಮಾ ಶೂಟಿಂಗ್‌ವೊಂದಕ್ಕಾಗಿ ನಟ ಭಾಗಿಯಾಗಿದ್ದರು. ಲಾಸ್ ಏಂಜಲೀಸ್‌ನಲ್ಲಿ ಶಾರುಖ್ ಚಿತ್ರೀಕರಣದಲ್ಲಿದ್ದಾಗ ಅವರ ಮೂಗಿಗೆ ಏಟಾಗಿ ರಕ್ತ ಸುರಿದಿದೆ. ಕೂಡಲೇ ನಟನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿತ್ತು. ಆಸ್ಪತ್ರೆಯಲ್ಲಿ ರಕ್ತ ನಿಲ್ಲಲು ಸರ್ಜರಿ ಕೂಡ ಮಾಡಿದ್ದಾರೆ. ಯಾವುದೇ ಹೆದರುವ ಅವಶ್ಯಕತೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಬ್ಯಾಂಡೇಜ್‌ವೊಂದನ್ನ ಮೂಗಿಗೆ ಸುತ್ತಿ ಕಳುಹಿಸಿದ್ದಾರೆ ಎಂದು ಹೇಳಲಾಗಿತ್ತು. ಈಗ ಕಿಂಗ್ ಖಾನ್ ಫಿಟ್ ಆಗಿರೋದನ್ನ ನೋಡಿ ಎಲ್ಲಾ ಊಹಾಪೋಹಗಳಿಗೂ ಬ್ರೇಕ್ ಬಿದ್ದಿದೆ. ನೆಚ್ಚಿನ ನಟ ಕ್ಷೇಮವಾಗಿರೋದನ್ನ ನೋಡಿ ಖುಷಿಪಟ್ಟಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್