ವಿಶ್ವದ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್‌ ಖಾನ್‌- ರಾಜಮೌಳಿ

Public TV
2 Min Read

ಮೆರಿಕದ ಟೈಮ್ಸ್ ಮ್ಯಾಗ್‌ಜಿನ್ 2023ರ ವಿಶ್ವದ ಟಾಪ್ 100 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ರಿಲೀಸ್ ಮಾಡಿದೆ. ಅದರಲ್ಲಿ ‘ಆರ್‌ಆರ್‌ಆರ್’ ಖ್ಯಾತಿಯ ನಿರ್ದೇಶಕ ರಾಜಮೌಳಿ (Rajamouli) ಮತ್ತು ಬಿಟೌನ್ ಸೂಪರ್ ಸ್ಟಾರ್ ಶಾರುಖ್ ಖಾನ್ (Sharukh Khan) ಅವರು ಸೇರಿಕೊಂಡಿದ್ದಾರೆ. ಇದನ್ನೂ ಓದಿ:Saregamapa 19 Grand Finale: ಯಾರ ಪಾಲಾಗಲಿದ್ದಾಳೆ ವಿಜಯಲಕ್ಷ್ಮಿ

ರಾಜಮೌಳಿ- ಶಾರುಖ್ ಖಾನ್ ತಮ್ಮ ಕ್ಷೇತ್ರದಲ್ಲಿ ಸಕ್ಸಸ್ ಕಂಡಿದ್ದಾರೆ. ಕಳೆದ ವರ್ಷ ರಿಲೀಸ್ ಆದ RRR ಚಿತ್ರದಿಂದ ರಾಜಮೌಳಿ ಗೆದ್ದು ಬೀಗಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದೆ. ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಈ ವರ್ಷದ ಆರಂಭದಲ್ಲಿ ರಿಲೀಸ್ ಆಗಿ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಮೆರಿಕದ ಪ್ರತಿಷ್ಠಿತ ಟೈಮ್ ಮ್ಯಾಗಜಿನ್ (Times Magazine) 2023ನೇ ಸಾಲಿನ ಪ್ರಭಾವಿಗಳ ಪಟ್ಟಿಯಲ್ಲಿ ರಾಜಮೌಳಿ- ಶಾರುಖ್ ಖಾನ್ ಹೆಸರು ಇದೆ. ಇದರಿಂದ ಭಾರತ ಹೆಮ್ಮೆ ಪಡುವಂತೆ ಆಗಿದೆ.

RRR ಸಿನಿಮಾ ರಿಲೀಸ್ ಆಗಿ ಸುಮಾರು ಒಂದು ವರ್ಷದ ಬಳಿಕ ಚಿತ್ರದ ‘ನಾಟು ನಾಟು’ ಹಾಡಿಗೆ ಆಸ್ಕರ್ ಸಿಕ್ಕಿತು. ಈ ಮೂಲಕ ರಾಜಮೌಳಿ ಹೆಸರು ವಿಶ್ವಾದ್ಯಂತ ಹಬ್ಬಿತು. ಶಾರುಖ್ ಖಾನ್ ಅವರ ‘ಪಠಾಣ್’ (Pathaan) ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಸದ್ದು ಮಾಡಿತು. ಸತತ ಸೋಲು ಕಂಡಿದ್ದ ಶಾರುಖ್ ಅವರು ಈ ಚಿತ್ರದಿಂದ ಗೆದ್ದರು. ಶಾರುಖ್ ಖ್ಯಾತಿ ಹೆಚ್ಚಿತು. ಈಗ ಅವರ ಮುಂದಿನ ಚಿತ್ರ ಜವಾನ್, ಡಂಕಿ ಬಗ್ಗೆಯೂ ನಿರೀಕ್ಷೆ ಇದೆ. ಈ ಎಲ್ಲಾ ಕಾರಣದಿಂದ ಪ್ರಭಾವಿಗಳ ಸಾಲಿನಲ್ಲಿ ಅವರು ಸ್ಥಾನ ಪಡೆದಿದ್ದಾರೆ.

ಸೋಷಿಯಲ್ ಮೀಡಿಯಾ ಖ್ಯಾತಿ, ಚಿತ್ರರಂಗಕ್ಕೆ ಅವರ ಕೊಡುಗೆ, ಅವರ ಟ್ಯಾಲೆಂಟ್, ಕಠಿಣ ಪರಿಶ್ರಮ ಮೊದಲಾದ ವಿಚಾರಗಳನ್ನು ಪರಿಗಣಿಸಲಾಗುತ್ತದೆ. ಸದ್ಯ ರಾಜಮೌಳಿ- ಶಾರುಖ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

Share This Article