ಉದ್ಯಮಿ ಜೊತೆ ಎಂಗೇಜ್ ಆದ ಬಾಲಿವುಡ್ ಗಾಯಕಿ ಪ್ರಕೃತಿ

Public TV
1 Min Read

ಬಾಲಿವುಡ್‌ನ ಖ್ಯಾತ ಗಾಯಕಿ ಪ್ರಕೃತಿ ಕಾಕರ್ (Prakriti Kakar) ಅವರು ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಉದ್ಯಮಿ ವಿನಯ್ ಆನಂದ್ ಜೊತೆ ಗಾಯಕಿ ಎಂಗೇಜ್ ಆಗಿದ್ದಾರೆ. ಲಂಡನ್‌ನಲ್ಲಿ ಗಾಯಕಿಗೆ ವಿನಯ್ ಆನಂದ್ (Vinay Anand) ಪ್ರಪೋಸ್ ಮಾಡಿರುವ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ ದಾಳಿಗೆ ಮುನೀರ್‌, ಪಾಕ್‌ ಸೇನೆ, ಇಸ್ಲಾಮಿಕ್ ಉಗ್ರರು ಕಾರಣ – ಪಾಕ್‌ ನಟಿ ಕೆಂಡಾಮಂಡಲ

ಉದ್ಯಮಿ ಜೊತೆ ಗಾಯಕಿ ಪ್ರಕೃತಿ ಎಂಗೇಜ್ ಆಗಿದ್ದಾರೆ. ಪ್ರಕೃತಿ ಮುಂದೆ ಮಂಡಿಯೂರಿ ವಿನಯ್ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದ್ದಾರೆ. ಗಾಯಕಿ ಖುಷಿಯಿಂದ ಒಪ್ಪಿಗೆ ನೀಡಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ಧರ್ಮ, ರಾಗಿಣಿ ನಟನೆಯ ‘ಸಿಂಧೂರಿ’ ಚಿತ್ರಕ್ಕೆ ಅದ್ಧೂರಿ ಚಾಲನೆ

ಎಲ್ಲಾ ಪ್ರೇಮಕಥೆಗಳು ಸುಂದರವಾಗಿವೆ. ಆದರೆ ನಮ್ಮದು ನನ್ನ ನೆಚ್ಚಿನ ಲವ್ ಸ್ಟೋರಿ ಎಂದು ಗಾಯಕಿ ರೊಮ್ಯಾಂಟಿಕ್ ಆಗಿ ಬರೆದುಕೊಂಡಿದ್ದಾರೆ. ಸದ್ಯ ಈ ಹೊಸ ಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

ಸ್ತ್ರೀ, ಗಣಪತ್, ನಶಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪ್ರಕೃತಿ ಹಾಡಿದ್ದಾರೆ. ಪ್ರಕೃತಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗ ಹೊಂದಿದ್ದಾರೆ.

Share This Article