ನಟಿ ಶಿವಲೀಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ `ದೃಶ್ಯಂ 2′ ನಿರ್ದೇಶಕ

Public TV
1 Min Read

ಬಾಲಿವುಡ್‌ನ (Bollywood) ಲವ್ ಬರ್ಡ್ಸ್ ಕಿಯಾರಾ-ಸಿದ್ಧಾರ್ಥ್ ಹಸೆಮಣೆ ಏರಿದ ಬೆನ್ನಲ್ಲೇ ಮತ್ತೊಂದು ಸ್ಟಾರ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ನಟಿ ಶಿವಲೀಕಾ ಒಬೆರಾಯ್ (Shivaleeka Oberai) ಜೊತೆ `ದೃಶ್ಯಂ 2′ ನಿರ್ದೇಶಕ ಅಭಿಷೇಕ್ ಪಾಠಕ್ (Abhishek Pathak) ವೈವಾಹಿಕ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ.

 

View this post on Instagram

 

A post shared by ABHISHEK PATHAK (@abhishekpathakk)

ಹಿಂದಿ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟಿ ಶಿವಲೀಕಾ ಮತ್ತು ನಿರ್ದೇಶಕ ಅಭಿಷೇಕ್ ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಇದೀಗ ಮದುವೆಯೆಂಬ ಮುದ್ರೆ ಒತ್ತಿದ್ದಾರೆ.

 

View this post on Instagram

 

A post shared by Shivaleeka Oberoi (@shivaleekaoberoi)

ಗೋವಾದಲ್ಲಿ (Goa) ಖಾಸಗಿ ರೆಸಾರ್ಟ್‌ವೊಂದರಲ್ಲಿ (ಫೆ.9)ರಂದು ಗುರುಹಿರಿಯರ ಸಮ್ಮುಖದಲ್ಲಿ ಅಭಿಷೇಕ್ ಪಾಠಕ್- ನಟಿ ಶಿವಲೀಕಾ ಮದುವೆಯಾಗಿದ್ದಾರೆ. ಬಿಳಿ ಬಣ್ಣದ ಶೆರ್ವಾನಿಯಲ್ಲಿ ಅಭಿಷೇಕ್ ಮಿಂಚಿದ್ದರೆ, ಕೆಂಪು ಬಣ್ಣದ ಲೆಹೆಂಗಾದಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಮದುವೆಗೆ ನವಜೋಡಿಗಳ ಡ್ರೆಸ್ ಡಿಸೈನ್ ಮನೀಷ್ ಮಲ್ಹೋತ್ರಾ (Manish Malhotra) ಅವರ ಡಿಸೈನ್‌ನಲ್ಲಿ ಮೂಡಿಬಂದಿದೆ. ಮದುವೆ ಫೋಟೋ ಹಂಚಿಕೊಂಡಿರುವ ಈ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ: ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಬಾಲಕನ ಆಸೆ ಈಡೇರಿಸಿದ ನಟ ರಾಮ್ ಚರಣ್

ಇನ್ನೂ ನಿರ್ದೇಶಕ ಅಭಿಷೇಕ್ ಪಾಠಕ್ ಅವರು `ಬೂಂದ್’, `ಉಜ್ದಾ ಚಮನ್’, `ದೃಶ್ಯಂ 2′ ಸಿನಿಮಾಗಳನ್ನ ನಿರ್ದೇಶಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *