ಐದು ವಿವಾದಿತ ಲಿಪ್‍ಲಾಕ್ ಸೀನ್- ಮಗಳನ್ನೇ ಕಿಸ್ ಮಾಡಿ ಸುದ್ದಿಯಾಗಿದ್ದ ಖ್ಯಾತ ನಿರ್ದೇಶಕ

Public TV
2 Min Read

ಮುಂಬೈ: ಬಾಲಿವುಡ್ ಚಿತ್ರಗಳಲ್ಲಿ ಲಿಪ್‍ಲಾಕ್ ಸೀನ್‍ನಲ್ಲಿ ಹಲವಾರು ಸೆಲೆಬ್ರಿಟಿಗಳು ವಿವಾದಕ್ಕೆ ಸಿಲುಕಿದ್ದಾರೆ. ಹಲವಾರು ಕಲಾವಿದರು ಕಿಸ್ಸಿಂಗ್ ಸೀನ್‍ನಿಂದ ಸುದ್ದಿ ಆಗಿದ್ದಲ್ಲದೇ ವಿವಾದಕ್ಕೂ ಸಿಲುಕಿದ್ದಾರೆ. ಕಿಸ್ ಮಾಡಿ ವಿವಾದಕ್ಕೆ ಸಿಲುಕಿದ ಬಾಲಿವುಡ್ ತಾರೆಯರ ಬಗ್ಗೆ ಮಾಹಿತಿ;

1. ದೀಪಿಕಾ ಪಡುಕೋಣೆ- ಸಿದ್ಧಾರ್ಥ್ ಮಲ್ಯ:
ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ಉದ್ಯಮಿ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಮಲ್ಯ 2013ರಲ್ಲಿ ಇಬ್ಬರು ಒಬ್ಬರನ್ನೊಬ್ಬರು ಕಿಸ್ ಮಾಡಿದ್ದಕ್ಕೆ ವಿವಾದಕ್ಕೆ ಸಿಲುಕಿದ್ದರು. ಆ ವೇಳೆ ಐಪಿಎಲ್ ನಡೆಯುತ್ತಿದ್ದು, ರಾಯಲ್ ಚಾಲೆಂಜೆರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯುತ್ತಿತ್ತು. ದೀಪಿಕಾ ಹಾಗೂ ಸಿದ್ಧಾರ್ಥ್ ಇಬ್ಬರು ಒಟ್ಟಿಗೆ ಮ್ಯಾಚ್ ವೀಕ್ಷಿಸುತ್ತಿದ್ದರು. ಆಗ ಆರ್ ಸಿಬಿ ತಂಡ ಪಂದ್ಯದಲ್ಲಿ ಗೆಲುವು ಕಂಡಿತ್ತು. ಈ ವೇಳೆ ಸಿದ್ಧಾರ್ಥ್ ದೀಪಿಕಾರನ್ನು ಹಿಡಿದು ಕಿಸ್ ಮಾಡಿದ್ದರು.

2. ಮಹೇಶ್ ಭಟ್- ಪೂಜಾ ಭಟ್:
ನಿರ್ದೇಶಕ ಹಾಗೂ ನಿರ್ಮಾಪಕರಾದ ಮಹೇಶ್ ಭಟ್ ತಮ್ಮ ಜೀವನದಲ್ಲಿ ಯಾವಾಗಲೂ ವಿವಾದದಲ್ಲೇ ಸಿಲುಕಿದ ವ್ಯಕ್ತಿ. ಮಹೇಶ್ ಭಟ್ ಒಮ್ಮೆ ತಮ್ಮ ಮಗಳು ಪೂಜಾ ಭಟ್ ಜೊತೆ ಲಿಪ್‍ಲಾಕ್ ಮಾಡಿ ವಿವಾದಕ್ಕೆ ಸಿಲುಕಿದ್ದರು. ಸ್ಟಾರ್ ದಷ್ಟ್ ಮ್ಯಾಗಜೀನ್‍ಗಾಗಿ ಮಹೇಶ್ ಹಾಗೂ ಪೂಜಾ ಲಿಪ್ ಲಾಕ್ ಸೀನ್ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋ ಮ್ಯಾಗಜೀನ್ ಕವರ್ ಪೇಜ್‍ನಲ್ಲಿ ಹಾಕಲಾಗಿತ್ತು. ಆಗ ಈ ಫೋಟೋ ಸಾಕಷ್ಟು ವಿವಾದ ಆಗಿತ್ತು. ಫೋಟೋ ಅಲ್ಲದೇ ಮಹೇಶ್ ಅವರ ಹೇಳಿಕೆಯೂ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಪೂಜಾ ನನ್ನ ಮಗಳು ಆಗಿಲ್ಲದಿದ್ದರೆ ನಾನು ಆಕೆಯನ್ನೇ ಮದುವೆಯಾಗುತ್ತಿದ್ದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಾಕಷ್ಟು ಜನ ವಿರೋಧ ವ್ಯಕ್ತಪಡಿಸಿದ್ದರು.

3. ರಾಖಿ ಸಾವಂತ್- ಮೀಕಾ ಸಿಂಗ್:
2007ರಲ್ಲಿ ರಾಖಿ ಸಾವಂತ್ ಅವರು ಮೀಕಾ ಸಿಂಗ್ ಅವರ ಬರ್ತ್ ಡೇ ಪಾರ್ಟಿಗೆ ಹೋಗಿದ್ದರು. ಈ ವೇಳೆ ಮೀಕಾ, ರಾಖಿ ಸಾವಂತ್‍ನನ್ನು ಬಲವಂತವಾಗಿ ಎಳೆದು ಕಿಸ್ ಮಾಡಿದ್ದಾರೆ. ಈ ಕಿಸ್ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಅಲ್ಲದೇ ರಾಖಿ ಸಾವಂತ್, ಮೀಕಾ ಅವರ ಮೇಲೆ ರೊಚ್ಚಿಗೆದಿದ್ದರು. ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟೀಲೆರಿತ್ತು.

4. ಬಿಪಾಶಾ ಬಸು- ಕ್ರಿಸ್ಟಿಯಾನೋ ರೋನಲ್ಡೋ:
ಫುಟ್ ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಲ್ಡೋ ಅವರು ಬಾಲಿವುಡ್ ಬೆಡಗಿ ಬಿಪಾಶಾ ಬಸುಗೆ ಸಾರ್ವಜನಿಕವಾಗಿ ಕಿಸ್ ಮಾಡಿದ್ದರು. ಭಾರತೀಯ ಮಾಧ್ಯಮಗಳಲ್ಲೂ ಈ ವಿವಾದ ಸಾಕಷ್ಟು ಸದ್ದು ಮಾಡಿತ್ತು. ಕ್ರಿಸ್ಟಿಯಾನೋ ಹಾಗೂ ಬಿಪಾಶಾ ಅವರ ಕಿಸ್ ವಿವಾದದ ಕಾರಣದಿಂದಾಗಿ ಜಾನ್ ಅಬ್ರಹಾಂ ನಟಿ ಬಿಪಾಶಾ ಜೊತೆ ಬ್ರೇಕಪ್ ಮಾಡಿಕೊಂಡಿದ್ದರು.

5. ಲೀನಾ ಚಂದ್ರವರ್ಕರ್ – ರಾಮ್ ಜೇಟ್ಮಲಾನಿ: 2015ರಲ್ಲಿ ದೇಶದ ಖ್ಯಾತ ವಕೀಲ ರಾಮ್ ಜೇಟ್ಮಲಾನಿ ಅವರು ಒಂದು ಅವಾರ್ಡ್ ಕಾರ್ಯಕ್ರಮದಲ್ಲಿ ಎಲ್ಲರ ಸಮ್ಮುಖದಲ್ಲಿ ಖ್ಯಾತ ನಟಿ ಲೀನಾ ಅವರಿಗೆ ಸಖತ್ ಜೋಶ್‍ಯಿಂದ ಕಿಸ್ ಮಾಡಿದ್ದರು. ಈ ಕಿಸ್ ಕೂಡ ಸಾಕಷ್ಟು ವಿವಾದ ಸೃಷ್ಟಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *