ಬಾಲಿವುಡ್ ಬೆಡಗಿ ಮೀರಾ ಚೋಪ್ರಾ ವೆಡ್ಡಿಂಗ್ ಕಾರ್ಡ್ ವೈರಲ್: ಏನೆಲ್ಲ ವಿಶೇಷ

Public TV
1 Min Read

ನ್ನಡದ ಅರ್ಜುನ್ ಸಿನಿಮಾದಲ್ಲಿ ನಟಿಸಿದ್ದ, ಬಾಲಿವುಡ್ ನಟಿ ಮೀರಾ ಚೋಪ್ರಾ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ಈ ನಟಿಯ ಮದುವೆಗೆ ಒಟ್ಟು ಆರು ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಲಾಗಿದೆ. ಅಷ್ಟೂ ಕಾರ್ಡ್ ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಮುಂಬೈ ಬೆಡಗಿ, ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸಹೋದರಿ ಮೀರಾ ಚೋಪ್ರಾ (Meera Chopra) ಉದ್ಯಮಿ ರಕ್ಷಿತ್ (Rakshit) ಎನ್ನುವವರ ಜೊತೆ ಮದುವೆ ಆಗುತ್ತಿದ್ದಾರೆ. ಇದೇ ಮಾರ್ಚ್ 11 ಮತ್ತು 12ರಂದು ಮದುವೆ ಸಮಾರಂಭ ನಡೆಯಲಿದೆ. ಜೈಪುರ ಮತ್ತು ದೆಹಲಿ ಹೆದ್ದಾರಿ ಬಳಿಯಿರುವ ಐಷಾರಾಮಿ ರೆಸಾರ್ಟ್‌ವೊಂದರಲ್ಲಿ ಮೀರಾ ಮದುವೆ (Wedding) ನಡೆಯಲಿದೆ. ಅದಕ್ಕಾಗಿ ಸಕಲ ಸಿದ್ಧತೆ ಕೂಡ ನಡೆಯುತ್ತಿದೆ.

ಮೀರಾ ಚೋಪ್ರಾ ಮೂಲತಃ ಮುಂಬೈ ಹುಡುಗಿ ಆಗಿದ್ರೂ ಅವರಿಗೆ ಕನ್ನಡಕ್ಕೆ ನಂಟಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ನಾಯಕಿ ನಟಿಸಿ ಸೈ ಎನಿಸಿಕೊಂಡಿದ್ದರು. ಕನ್ನಡಿಗರಿಗೆ ಅರ್ಜುನ್ ಚಿತ್ರದ ನಟಿ ಅಂದರೆ ಅವರು ಎಂಬುದು ನೆನಪಾಗುತ್ತಾರೆ.

ಸಹೋದರಿ ಸಂಬಂಧಿ ಪ್ರಿಯಾಂಕಾರಂತೆ ಅವರಿಗೆ ಮೀರಾ ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಸಿಗಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಇದ್ದರೂ ಕೂಡ ಸಿನಿಮಾರಂಗ ಅವರ ಕೈಹಿಡಿಯಲಿಲ್ಲ.

 

‘1920 ಲಂಡನ್’, ‘ಸೆಕ್ಷನ್ 375’, ‘ಕಾಮಾತಿಪುರ’ ಎಂಬ ಹಿಂದಿ ಸಿನಿಮಾಗಳಲ್ಲಿ ಮೀರಾ ಚೋಪ್ರಾ ನಟಿಸಿದ್ದಾರೆ. ‘ಸಫೇದ್’ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ.

Share This Article