ದಕ್ಷಿಣ ಸಿನಿಮಾಗಳತ್ತ ಮುಖ ಮಾಡಿದ ‘ಬ್ಯಾಡ್ ಬಾಯ್’ ನಟಿ ಅಮ್ರೀನ್ ಖುರೇಷಿ

Public TV
1 Min Read

ಬಾಲಿವುಡ್‌ನ ‘ಬ್ಯಾಡ್ ಬಾಯ್’ (Bad Boy) ಸಿನಿಮಾದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಾಯಕಿ ಅಮ್ರೀನ್ ಖುರೇಷಿ (Amrin Qureshi) ಅವರು ದಕ್ಷಿಣದ ಸಿನಿಮಾದತ್ತ ಮುಖ ಮಾಡಿದ್ದಾರೆ. ಮಾಡಿದ್ದು ಒಂದೇ ಸಿನಿಮಾ ಆಗಿದ್ರು, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬಂಪರ್ ಸಿನಿಮಾ ಆಫರ್ಸ್ ಬಾಚಿಕೊಂಡಿದ್ದಾರೆ. ಖ್ಯಾತ ನಿರ್ಮಾಪಕ ಸಾಜಿದ್‌ ಖುರೇಷಿ ಪುತ್ರಿ ಭರ್ಜರಿ ಅವಕಾಶ ಸಿಗುತ್ತಿದೆ.

ಅಮ್ರಿನ್ ಖುರೇಷಿಗೆ ‘ಬ್ಯಾಡ್ ಬಾಯ್’ ಮೊದಲ ಸಿನಿಮಾ. ಮೊದಲ ಚಿತ್ರದಲ್ಲಿಯೇ ಗಮನ ಸೆಳೆದ ಅಮ್ರಿನ್ ಖುರೇಷಿ ಅವರನ್ನು ಆಮೇಲೆ ನಾಲ್ಕು ದೊಡ್ಡ ನಿರ್ಮಾಣ ಸಂಸ್ಥೆಗಳು ಸಂಪರ್ಕಿಸಿವೆ. ಅದರಲ್ಲಿ ತೆಲುಗು ಮತ್ತು ತಮಿಳು ನಿರ್ಮಾಣ ಸಂಸ್ಥೆಗಳಾದ ಸ್ಟುಡಿಯೊ ಗ್ರೀನ್, ಪ್ರಿನ್ಸ್ ಪಿಕ್ಚರ್ ಸಹ ಸೇರಿವೆ. ಇವುಗಳ ಮುಂದಿನ ಬಿಗ್ ಬಜೆಟ್ ಸಿನಿಮಾಗೆ ಅಮ್ರಿನ್ ಖುರೇಷಿ ನಾಯಕಿಯಾಗಿದ್ದಾರೆ. ಅದರಲ್ಲಿ ನಟ ಸೂರ್ಯ ನಾಯಕರಾಗಿರುವ ಸಿನಿಮಾ ಸಹ ಇದೆ. ಇದನ್ನೂ ಓದಿ:ಕಪಿಲ್ ಶರ್ಮಾ ಶೋನಲ್ಲಿ ಸುಮೋನಾ ಚಕ್ರವರ್ತಿಗೆ ಅವಮಾನ

ದಕ್ಷಿಣ ಭಾರತದ ಉತ್ತಮ ನಿರ್ಮಾಣ ಸಂಸ್ಥೆಗಳು ದೊಡ್ಡ ದೊಡ್ಡ ಸಿನಿಮಾಗಳಿಗೆ ನನ್ನನ್ನು ಆಯ್ಕೆ ಮಾಡಿರುವುದು ನನಗೆ ಖುಷಿ ತಂದಿದೆ. ನಾನು ನಟಿಸಲಿರುವ ಸಿನಿಮಾಗಳಲ್ಲಿ ನನ್ನ ಪಾತ್ರ ಬಹಳ ಚೆನ್ನಾಗಿದೆ. ಅದರಲ್ಲಿ ಕೆಲವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿವೆ. ಇದೇ ರೀತಿಯ ಉತ್ತಮ ಪಾತ್ರಗಳು ಯಾವುದೇ ಭಾಷೆಯಲ್ಲಿ ಸಿಕ್ಕರೂ ನಾನು ಒಪ್ಪಿಕೊಳ್ಳುತ್ತೇನೆ. ಪಾತ್ರ ಚೆನ್ನಾಗಿದ್ದರೆ, ಯಾವ ಭಾಷೆಯಾದರೂ ಓಕೆ ಎಂದು ನಟಿ ಅಮ್ರೀನ್ ಹೇಳಿದ್ದಾರೆ.

ಬಾಲಿವುಡ್‌ನಲ್ಲಿ ಈಗಾಗಲೇ ಇಬ್ಬರು ನಿರ್ದೇಶಕರ ಜತೆಗೆ ಮಾತುಕತೆಯಾಗಿದ್ದು, ಅದರಲ್ಲಿ ವಿಶಾಲ್ ರಾಣಾ ಎಂಬವರ ಸಿನಿಮಾ ಸದ್ಯದಲ್ಲೇ ಅನೌನ್ಸ್ ಆಗಲಿದೆ. ಇದರ ಜೊತೆ ಕನ್ನಡ ಸಿನಿಮಾ ಕೂಡ ಮಾಡುತ್ತೇನೆ. ಈ ಬಗ್ಗೆ ಸದ್ಯದಲ್ಲೇ ಅಪ್‌ಡೇಟ್ ಕೊಡುತ್ತೇನೆ ಎಂದಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್