ವೈಲೆನ್ಸ್.. ವೈಲೆನ್ಸ್ ಡೈಲಾಗ್ ಹೊಡೆದು ರಾಕಿಭಾಯ್ ನೆನೆದ ಶಿಲ್ಪಾ ಶೆಟ್ಟಿ

Public TV
1 Min Read

ನ್ಯಾಷನಲ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್-2’ ಚಿತ್ರವು ವಿಶ್ವದಾದ್ಯಂತ ಭಾರೀ ಜನ ಮನ್ನಣೆ ಗಳಿಸಿದೆ. ಸಿನಿಮಾರಂಗದಲ್ಲಿಯೇ ಅಚ್ಚಳಿಯದ ಇತಿಹಾಸ ಸೃಷ್ಟಿಸುತ್ತಿರುವ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲೂ ಸಖತ್ ಸದ್ದು ಮಾಡಿದೆ. ರೀಲಿಸ್ ಆದ 2 ವಾರದಲ್ಲಿ ಅಂದಾಜು 800 ಕೋಟಿಗೂ ಅಧಿಕ ಹಣ ಗಳಿಸಿದೆ ಎಂದು ಬಾಕ್ಸ್ ಆಫೀಸ್ ವಿಮರ್ಶಕರು ವರದಿ ಮಾಡಿದ್ದಾರೆ. ಬಾಕ್ಸ್ ಆಫಿಸ್ ಅಷ್ಟೇ ಅಲ್ಲದೇ ಚಿತ್ರದಲ್ಲಿರುವ ರಾಕಿಭಾಯ್ ಡೈಲಾಗ್‍ಗಳಿಗೆ ಹಲವು ಬಾಲಿವುಡ್ ತಾರೆಯರು ಕೂಡಾ ಫಿದಾ ಆಗಿದ್ದಾರೆ.

ಚಿತ್ರದ ಡೈಲಾಗ್‍ಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದೂ, ಅದರಲ್ಲೂ ರಾಕಿಭಾಯ್ ಯಶ್ ಅವರ ವೈಲೆನ್ಸ್ ವೈಲೆನ್ಸ್.. ಡೈಲಾಗಂತೂ ಇನ್‍ಸ್ಟಾಗ್ರಾಮ್‍ನ ರಿಲ್ಸ್‌ಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದೆ. ಬಾಲಿವುಡ್‍ನ ಬಳಕುವ ಬಳ್ಳಿ ಶಿಲ್ಪಾ ಶೆಟ್ಟಿ ಕೂಡಾ ಕೆಜಿಎಫ್-2 ಚಿತ್ರವನ್ನು ನೋಡಿ ನಮ್ಮ ರಾಕಿಭಾಯ್ ವೈಲೆನ್ಸ್ ವೈಲೆನ್ಸ್.. ಡೈಲಾಗ್ ಹೊಡೆದು ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹಚ್ಚಿದ್ದಾರೆ.

ಮುಂಬೈನ ಚಿತ್ರಮಂದಿರವೊಂದರಲ್ಲಿ ಫ್ಯಾಮಿಲಿಯೊಂದಿಗೆ ಕುಳಿತುಕೊಂಡು ಚಿತ್ರವನ್ನು ವೀಕ್ಷಿಸಿ, ಚಿತ್ರಮಂದಿರದಿಂದ ಹೊರಬರುತ್ತಿದ್ದ ಶಿಲ್ಪಾಗೆ ಕೆಜಿಎಫ್-2ರಲ್ಲಿ ನಿಮಗೆ ಬಹಳ ಇಷ್ಟವಾದ ಡೈಲಾಗ್ ಯಾವುದು ಎಂದು ಮಾಧ್ಯಮದವರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ರಾಕಿಭಾಯ್‍ನ ಸ್ಟೈಲ್‍ನಲ್ಲಿಯೇ ವೈಲೆನ್ಸ್ ವೈಲೆನ್ಸ್ ಡೈಲಾಗ್ ಹೇಳಿ ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹಚ್ಚಿದ್ದಾರೆ.

 

View this post on Instagram

 

A post shared by Viral Bhayani (@viralbhayani)

ಸದ್ಯ ವೀಡಿಯೋ 60,000ಕ್ಕೂ ಹೆಚ್ಚು ವಿವ್ಸ್ ಪಡೆದುಕೊಂಡು ನೆಟ್ಟಿಗರ ಮನಗೆದ್ದಿದೆ. ಕನ್ನಡತಿಯ ಬಾಯಲ್ಲಿ ನಮ್ಮ ಕನ್ನಡದ ಹೆಮ್ಮೆ ಕೆಜಿಎಫ್ ಚಾಪ್ಟರ್ 2ನ ಡೈಲಾಗ್ ಕೇಳಿ ಕರ್ನಾಟಕದ ಫ್ಯಾನ್ಸ್ ಖುಷ್ ಆಗಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *