ಯಶ್ ಕಾಲ್ ಮಾಡಿ ಕೆಜಿಎಫ್- 3ಗೆ ರೆಡಿಯಾಗಿ ಅಂದ್ರು- ನಟಿ ರವೀನಾ ಟಂಡನ್

Public TV
2 Min Read

ಕೆಜಿಎಫ್, ಕೆಜಿಎಫ್ 2 (KGF 2) ಸಿನಿಮಾಗಳು ಗಲ್ಲಾಪೆಟ್ಟಿಗೆಯನ್ನ ಶೇಕ್ ಮಾಡಿತ್ತು. ಸಾವಿರಾರು ಕೋಟಿ ಕಲೆಕ್ಷನ್ ಮಾಡುವ ಮೂಲಕ ಹಿಸ್ಟರಿ ಕ್ರಿಯೆಟ್ ಮಾಡಿತ್ತು. ಇತ್ತೀಚಿಗಷ್ಟೇ ಹೊಂಬಾಳೆ ಫಿಲ್ಮ್ಸ್(Hombale Films) ‘ಕೆಜಿಎಫ್ 3’ (KGF 3) ಮಾಡುವ ಬಗ್ಗೆ ಸುಳಿವು ನೀಡಿತ್ತು. ಈ ಬೆನ್ನಲ್ಲೇ ‘ಕೆಜಿಎಫ್ 3’ಗೆ ರೆಡಿಯಾಗಿ ಎಂದು ಯಶ್ ಹೇಳಿರುವುದನ್ನು ರವೀನಾ ಟಂಡನ್ (Raveena Tandon) ರಿವೀಲ್ ಮಾಡಿದ್ದಾರೆ.

‘ಕೆಜಿಎಫ್’ ಪಾರ್ಟ್ 2 ಸಿನಿಮಾ ಏ.14ಕ್ಕೆ ರಿಲೀಸ್ ಆಗಿ ಒಂದು ವರ್ಷವಾಗಿದೆ. ಇದೇ ಖುಷಿಯಲ್ಲಿ ಕೆಜಿಎಫ್ 3 ಬರುವ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ. ಮತ್ತೆ ರಾಕಿ ಭಾಯ್ ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ. ಈಗ ಕೆಜಿಎಫ್-3 ಚರ್ಚೆಯ ನಡುವೆಯೇ ನಟಿ ರಮಿಕಾ ಸೇನ್ ಖ್ಯಾತಿಯ ರವೀನಾ ಟಂಡನ್ ಅಚ್ಚರಿಯ ಮಾಹಿತಿ ರಿವೀಲ್ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್- ಪ್ರಶಾಂತ್ ನೀಲ್ ಕರೆ ಮಾಡಿ ಹೇಳಿದ್ದೇನು ಎನ್ನುವುದನ್ನು ರವೀನಾ ಬಹಿರಂಗ ಪಡಿಸಿದ್ದಾರೆ. ಇದನ್ನೂ ಓದಿ:ಹಾಲಿವುಡ್ ‘ಸಿಟಾಡೆಲ್’ ಪ್ರೀಮಿಯರ್‌ನಲ್ಲಿ ಸಮಂತಾ

ಸಂದರ್ಶನದಲ್ಲಿ ಮಾತನಾಡಿದ ರವೀನಾ, ಕೆಜಿಎಫ್ 2 ಮೊದಲ ವಾರ್ಷಿಕೋತ್ಸವದ ದಿನ ಮೊದಲು ವಿಶ್ ಮಾಡಿದ್ದು, ಯಶ್ ಪತ್ನಿ ರಾಧಿಕಾ ಪಂಡಿತ್ ಎಂದು ಹೇಳಿದ್ದಾರೆ. ಏಪ್ರಿಲ್ 14ರ ಬೆಳಗ್ಗೆಯೇ ಯಶ್ ಪತ್ನಿ ರಾಧಿಕಾ ಪಂಡಿತ್ (Radhika Pandit) ವಿಶ್ ಮಾಡಿದ್ದರು ಎಂದು ಬಹಿರಂಗ ಪಡಿಸಿದ್ದಾರೆ. ಅದೇ ದಿನ ಸಂಜೆ ಯಶ್ ಫೋನ್ ಮಾಡಿದ ವಿಚಾರವನ್ನು ಹಂಚಿಕೊಂಡಿದ್ದಾರೆ.

ಆ ದಿನ ಸಂಜೆ (ಏ.14) ಯಶ್ ನನಗೆ ಫೋನ್ ಮಾಡಿದ್ದರು. ನಾವಿಬ್ಬರೂ ವಾರ್ಷಿಕೋತ್ಸವಕ್ಕೆ ಒಬ್ಬರಿಗೊಬ್ಬರು ವಿಶ್ ಮಾಡಿಕೊಂಡೆವು. ಆಗ ಯಶ್ ಕೆಜಿಎಫ್ 3ಗೆ ರೆಡಿಯಾಗಬೇಕು ಅಂತ ಹೇಳಿದರು. ಆಗ ಮೊದಲ ಸೀನ್‌ನಲ್ಲೇ ನನ್ನನ್ನು ಸಾಯಿಸಬೇಡಿ ಅಂತ ಹೇಳಿದೆ. ಹೀಗೆ ಜೋಕ್ ಮಾಡಿಕೊಂಡೆ ನಕ್ಕೆವು. ಹಾಗೇ ಪ್ರಶಾಂತ್ ಕೂಡ ಫೋನ್ ಮಾಡಿದ್ದರು. ಆದರೆ, ಕೆಜಿಎಫ್ -3 ಯಾವಾಗ ಬರುತ್ತೆ ಅನ್ನೋದು ನಮಗೆ ಗೊತ್ತಿಲ್ಲ. ನಾವೆಲ್ಲರೂ ಬೇಗ ಬರಲಿ ಅಂತ ಕಾಯುತ್ತಿದ್ದೇವೆ. ಪ್ರಶಾಂತ್ ನೀಲ್ (Prashanth Neel) ಫೋನ್ ಮಾಡಿ ಪ್ರತಿ ದೃಶ್ಯದಲ್ಲೂ ಅದ್ಭುತವಾಗಿ ಮಾಡಿದ್ದೀರಿ ಎಂದು ಹೇಳಿದ್ದರು. ಪ್ರಶಾಂತ್ ನೀಲ್ ಕೂಡ ಆದಷ್ಟು ಬೇಗ ಮಾಡೋಣ ಅಂತ ಹೇಳಿದರು ಎಂದು ರವೀನಾ ಟಂಡನ್ ಹೇಳಿದ್ದಾರೆ.

Share This Article