ಅನಂತ್ ಅಂಬಾನಿ ತೂಕದ ಬಗ್ಗೆ ಟೀಕೆ ಮಾಡಿದ ರಾಖಿ ಸಾವಂತ್

Public TV
1 Min Read

ದಾ ವಿವಾದಗಳ ಮೂಲಕ ಸುದ್ದಿಯಾಗುವ ನಟಿ ರಾಖಿ ಸಾವಂತ್ (Rakhi Sawant) ಇದೀಗ ಮುಖೇಶ್ ಅಂಬಾನಿ (Mukesh Ambani) ಪುತ್ರ ಅನಂತ್ ಅಂಬಾನಿ (Anant Ambani) ತೂಕದ ವಿಚಾರವಾಗಿ ಟೀಕೆ ಮಾಡಿದ್ದಾರೆ. ಅದಷ್ಟೇ ಅಲ್ಲ, ಮುಖೇಶ್ ಅಂಬಾನಿಗೆ ಬಿಗ್ ಆಫರ್ ಕೂಡ ಕೊಟ್ಟಿದ್ದಾರೆ.

ಅನಂತ್ ಅಂಬಾನಿ ತೂಕದ ಮೇಲೆ ರಾಖಿ ಸಾವಂತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಡಿಯರ್ ಅಂಬಾನಿ ಅವರೇ ನಿಮ್ಮ ಮಗ ಅನಂತ್ ಅಂಬಾನಿ ಚೆನ್ನಾಗಿ ತೂಕ ಬೆಳೆಸಿಕೊಂಡಿದ್ದಾರೆ. ಆತನನ್ನು ನನ್ನ ಬಳಿ 5 ದಿನ ಕಳುಹಿಸಿ. ಸಣ್ಣಗೆ ಮಾಡಿ ಕಳುಹಿಸುತ್ತೇನೆ ಅಂತ ಹೇಳಿದ್ದಾರೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿ ಪರಿಣಿತಿ ಚೋಪ್ರಾ?

ಅಲ್ಲದೆ, ಸುಮ್ಮನೆ ಕಳುಹಿಸಿಬೇಡಿ, ಸ್ವಲ್ಪ ಹಣ ಕೊಟ್ಟು ನನ್ನನ್ನು ಕೊಂಡುಕೊಳ್ಳಿ, ಆತನೊಂದಿಗೆ ಕಸರತ್ತುಗಳನ್ನು ಮಾಡುವುದಲ್ಲದೆ, ತೃಪ್ತಿ ಮಾಡಿ ಕಳುಹಿಸುತ್ತೇನೆ. ಅನಂತ್ ಅಂಬಾನಿಯನ್ನು ಜೀರೋ ಸೈಜ್ ಮಾಡಿ ನಿಮ್ಮ ಬಳಿ ಕಳುಹಿಸುವ ಜವಾಬ್ದಾರಿ ನನ್ನದು ಅಂತ ಮುಖೇಶ್ ಅಂಬಾನಿಗೆ ರಾಖಿ ಆಫರ್ ನೀಡಿದ್ದಾರೆ. ಈ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.

ರಾಖಿ ಈ ಹೇಳಿಕೆ ನೀಡುತ್ತಿದ್ದಂತೆ ನಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೆಲ ಆರೋಗ್ಯ ಸಮಸ್ಯೆಯಿಂದ ಅನಂತ್ ಹಾಗೇ ಆಗಿದ್ದಾರೆ. ಒಬ್ಬರಿಗೆ ಬಾಡಿ ಶೇಮಿಂಗ್ ಮಾಡುವುದು ಎಷ್ಟು ಸರಿ ಎಂದು ರಾಖಿಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ.

Share This Article