ಸೊಂಟ ಉಳುಕಿಸಿಕೊಂಡ ರಾಖಿ ಸಾವಂತ್

Public TV
2 Min Read

ಚಂಡೀಗಢ: ಮಹಿಳಾ ಕುಸ್ತಿಪಟು ಚಾಲೆಂಜ್ ಸ್ವೀಕರಿಸಿ ಬಾಲಿವುಡ್ ಹಾಟ್ ಬೆಡಗಿ ರಾಖಿ ಸಾವಂತ್ ಸೊಂಟವನ್ನ ಉಳುಕಿಸಿಕೊಂಡಿರುವ ಘಟನೆ ಹರಿಯಾಣದ ಪಂಚಕುಲ ತಾಊ ದೇವಿಲಾಲ್ ಕ್ರೀಡಾಂಗಣದಲ್ಲಿ ನಡೆದಿದೆ.

ರಾಖಿ ಸಾವಂತ್ ಭಾನುವಾರ ನಡೆದ ಪಂಚಕುಲದಲ್ಲಿ ನಡೆದ ಸಿಡಬ್ಲ್ಯೂಇ ಕುಸ್ತಿ ಚಾಂಪಿಯನ್ ಶಿಪ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ರೋಚಕ ಕುಸ್ತಿಯನ್ನು ವೀಕ್ಷಿಸಲು ಗ್ರೇಟ್ ಕಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ವೇಳೆ ಅಖಾಡಕ್ಕೆ ಧುಮುಕಿದ ಮಹಿಳಾ ಕುಸ್ತಿಪಟು ರೋಬೆಲ್, ಪಂಚಕುಲದಲ್ಲಿ ನನ್ನನ್ನು ಎದುರಿಸುವ ಯಾರದರೂ ಮಹಿಳೆ ಇದ್ದರೆ ಬನ್ನಿ ಎಂದು ಬಹಿರಂಗ ಸವಾಲು ಹಾಕಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ವೀಕ್ಷಕರು ರೋಬೆಲ್ ಸಹವಾಸವೇ ಬೇಡ ಎಂದು ದೂರ ಉಳಿದಿದ್ದರು.

ಅತಿಥಿಯಾಗಿ ಬಂದಿದ್ದ ರಾಖಿ ಸಾವಂತ್ ದಿಢೀರ್ ಅಂತಾ ಅಖಾಡಕ್ಕೆ ಧುಮುಕಿದ್ದಾರೆ. ಕುಸ್ತಿ ಆಡುವ ಮೊದಲು ರಾಖಿ ನೀನು ಡ್ಯಾನ್ಸ್ ಮಾಡಬೇಕೆಂದು ಚಾಲೆಂಜ್ ಹಾಕಿದರು. ರಾಖಿ ಚಾಲೆಂಜ್ ಸ್ವೀಕರಿಸಿದ ರೋಬೆಲ್ ವೇದಿಕೆಯಲ್ಲಿ ಹಾಕಿದ ಹಾಡಿಗೆ ಹೆಜ್ಜೆಯನ್ನು ಹಾಕಿದರು. ಇತ್ತ ಹಾಡು ಕೊನೆಗೊಳ್ಳುತ್ತಿದ್ದಂತೆ ರೋಬೆಲ್ ಎದುರು ನಿಂತಿದ್ದ ರಾಖಿಯನ್ನು ಭುಜದೆ ಮೇಲೆ ಎತ್ತಿ ನೆಲಕ್ಕೆ ಅಪ್ಪಳಿಸಿದರು.

ನೆಲಕ್ಕೆ ಬಿದ್ದ ರಾಖಿ ಸಾವಂತ್ ಒಂದೆರೆಡು ನಿಮಿಷ ನರಳಾಡಿದ್ದಾರೆ. ಆದ್ರೆ ಮೇಲಕ್ಕೆಳಲಾಗದೇ ಕೊನೆಗೆ ಕಾರ್ಯಕ್ರಮ ಆಯೋಜಕರನ್ನು ಸಹಾಯಕ್ಕೆ ಕರೆದಿದ್ದಾರೆ. ಕೂಡಲೇ ಆಯೋಜಕರು ರಾಖಿಯನ್ನು ಹೊರಕ್ಕೆ ಕರೆದುಕೊಂಡು ಬಂದಿದ್ದಾರೆ. ಅಖಾಡದಿಂದ ಹೊರ ಬಂದ ನಂತರ ರಾಖಿ ಹೆಜ್ಜೆ ಇಡಲು ಅಶಕ್ತರಾಗಿದ್ದರು. ಕೊನೆಗೆ ಆಯೋಜಕರು ಇತರೆ ಮಹಿಳಾ ಕುಸ್ತಿಪಟು ಮತ್ತು ಪೊಲೀಸ್ ಸಿಬ್ಬಂದಿ ಸಹಾಯದಿಂದ ಹೆಗಲ ಮೇಲೆ ಕೈ ಹಾಕಿಕೊಂಡು ಕಾರಿನವರೆಗೂ ತಲುಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ದಿ ಗ್ರೇಟ್ ಕಲಿ, ರೋಬೆಲ್ ಎತ್ತರದಿಂದ ರಾಖಿಯನ್ನು ಅಪ್ಪಳಿಸಿದ್ದರಿಂದ ಸೊಂಟದ ಭಾಗದಲ್ಲಿ ನೋವು ಕಾಣಿಸಿಕೊಂಡಿದೆ. ಬೆನ್ನುಮೂಳೆ ಭಾಗದಲ್ಲಿ ನೋವುಂಟಾಗಿದ್ದು, ವೈದ್ಯರು ವಿಶ್ರಾಂತಿ ಸಲಹೆ ನೀಡಿದ್ದಾರೆಂದು ತಿಳಿಸಿದರು.

ಸೊಂಟ ಮುರಿದುಕೊಂಡು ಸುಮಾರು 5-8 ನಿಮಿಷಗಳ ಕಾಲ ಮೇಲೇಳು ಆಗದ ರಾಖಿ ಸಾವಂತ್‍ರನ್ನ ಕಾರ್ಯಕ್ರಮದ ಆಯೋಜಕರು ಕೆಲವು ಮಹಿಳಾ ಆಟಗಾರ್ತಿಯರ ಸಹಾಯದಿಂದ ರಾಖಿಯನ್ನ ಗಿರಾಕ್ಪುರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಖಿ ರಿಂಗ್ ಒಳಗೆ ಬಿದ್ದು ನರಳುತ್ತಿದ್ದಾಗ, ಅಲ್ಲಿದ್ದ ಕೆಲವು ಆಟಗಾರ್ತಿಯರು ಬಾಲಿವುಡ್ ನ ದಬಾಂಗ್ ಹಾಡಿಗೆ ನೃತ್ಯ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *