ಅಮೆರಿಕಾದಲ್ಲಿ ಅವಳಿ ಮಕ್ಕಳಿಗೆ ಕೇಶ ಮುಂಡನ ಮಾಡಿಸಿದ ಪ್ರೀತಿ ಜಿಂಟಾ

Public TV
1 Min Read

ಬಾಲಿವುಡ್ (Bollywood) ಬ್ಯೂಟಿ ಪ್ರೀತಿ ಜಿಂಟಾ (Preity Zinta) ಅವರು ಉದ್ಯಮಿ ಜೀನ್ ಜೊತೆ ಮದುವೆಯಾಗಿ ಅಮೆರಿಕಾದಲ್ಲಿ ಸೆಟಪ್ ಆಗಿರೋದು ಗೊತ್ತೆಯಿದೆ. ಹಿಂದೂ ಸಾಂಪ್ರದಾಯದ ಪ್ರಕಾರ ಕೇಶ ಮುಂಡನ ಶಾಸ್ತ್ರ ಮಾಡಿಸಿದ್ದಾರೆ. ಈ ಕುರಿತ ಫೋಟೋವನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:‘ದಸರಾ’ ನಂತರ ಮತ್ತೆ ಜೊತೆಯಾದ ಸತೀಶ್ ನೀನಾಸಂ ಮತ್ತು ಶರ್ಮಿಳಾ

ದಿಲ್ ಸೇ, ಸೋಲ್ಡ್ಜರ್, ಕೊಯಿ ಮಿಲ್ ಗಯಾ, ಸಂಘರ್ಷ, ಹೀರೋಸ್, ಸೇರಿದಂತೆ ಸಾಕಷ್ಟು ಸಿನಿಮಾ 90ರ ದಶಕದ ಪಡ್ಡೆಹುಡುಗರ ಕನಸಿನ ರಾಣಿ ಪ್ರೀತಿ ಜಿಂಟಾ ಅವರು ಬೇಡಿಕೆಯಿರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಮೆರಿಕಾದ ಉದ್ಯಮಿ ಜೀನ್ ಗುಡ್ನಫ್ 2016ರಲ್ಲಿ ಮದುವೆಯಾದರು. ಬಾಡಿಕೆ ತಾಯ್ತನದ ಮೂಲಕ ನಟಿ ಅವಳಿ ಮಕ್ಕಳನ್ನ ಬರಮಾಡಿಕೊಂಡರು.

ಅಮೆರಿಕಾದ (America) ಲಾಸ್ ಏಂಜಲೀಸ್‌ನಲ್ಲಿ ಸೆಟಲ್ ಆಗಿರುವ ಪ್ರೀತಿ, ಇತ್ತೀಚಿಗೆ ಮಕ್ಕಳಾದ ಜೈ- ಗಿಯಾಗೆ ಹಿಂದೂ ಸಂಸ್ಕೃತಿಯಂತೆ ಕೇಶ ಮುಂಡನ ಶಾಸ್ತ್ರ ಮಾಡಿಸಿದ್ದಾರೆ. ನನ್ನ ಮಕ್ಕಳಾದ ಜೈ-ಗಿಯಾರ ಕೇಶ ಮುಂಡನ ಕಾರ್ಯಕ್ರಮ ಕಳೆದ ವಾರವಷ್ಟೇ ನಡೆಯಿತು. ಹಿಂದೂಗಳಿಗೆ ಮಕ್ಕಳ ಕೂದಲನ್ನು ಮುಂಡನ ಮಾಡುವುದು ಅವರ ಹಿಂದಿನ ಜನ್ಮಗಳ ಶುದ್ದೀಕರಣ ಮಾಡುವುದಕ್ಕೆ, ಹಿಂದಿನ ಜನ್ಮದಿಂದ ಸ್ವಾತಂತ್ರ್ಯದ ಸಂಕೇತವೆಂದು ಹೇಳಲಾಗುತ್ತದೆ ಎಂದು ನಟಿ ಪ್ರೀತಿ ಬರೆದುಕೊಂಡಿದ್ದಾರೆ.

ಸದ್ಯ ಪ್ರೀತಿ ಜಿಂಟಾ ಅವರ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿದೇಶದ ಹುಡುಗನನ್ನು ಮದುವೆಯಾದರು ಕೂಡ ಹಿಂದೂ ಸಂಸ್ಕೃತಿಯನ್ನ ಮರೆತಿಲ್ಲ ಎಂದು ಕೊಂಡಾಡಿದ್ದಾರೆ. ಇನ್ನೂ ಅಮೆರಿಕಾ ಮತ್ತು ಭಾರತ 2 ಕಡೆ ಪ್ರೀತಿಗೆ ಮನೆಯಿದೆ. ಎರಡು ಕಡೆ ನಟಿ ವಾಸವಿರುತ್ತಾರೆ. ವರ್ಷದಲ್ಲಿ ಕೆಲ ತಿಂಗಳುಗಳ ಕಾಲ ಭಾರತದಲ್ಲೇ ಇರುತ್ತಾರೆ. ಮದುವೆ- ಮಕ್ಕಳ ಆರೈಕೆ ಅಂತಾ ಬ್ಯುಸಿಯಿರುವ ನಟಿ ಪ್ರೀತಿ ಜಿಂಟಾ ಮತ್ತೆ ನಟನೆಗೆ ಕಂಬ್ಯಾಕ್‌ ಆಗುತ್ತಾರಾ ಕಾಯಬೇಕಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್