ಎಲೆಕ್ಷನ್ ರಿಸಲ್ಟ್ ದಿನವೇ ರಾಘವ್ ಚಡ್ಡಾ- ಪರಿಣಿತಿ ಚೋಪ್ರಾ ಎಂಗೇಜ್‌ಮೆಂಟ್

Public TV
1 Min Read

ಥಿಯಾ ಶೆಟ್ಟಿ- ರಾಹುಲ್, ಸಿದ್- ಕಿಯಾರಾ ಬಳಿಕ ರಾಜಕಾರಣಿ ರಾಘವ್ ಚಡ್ಡಾ- ಪರಿಣಿತಿ ಚೋಪ್ರಾ (Parineeti Chopra) ಜೋಡಿ ಮದುವೆ ವಿಚಾರ ಚಾಲ್ತಿಯಲ್ಲಿದೆ. ಇದೀಗ ರಾಘವ್ – ಪರಿಣಿತಿ ಎಂಗೇಜ್‌ಮೆಂಟ್‌ಗೆ ಸಕಲ ಸಿದ್ಧತೆ ನಡೆಯುತ್ತಿದೆ.

ಬಾಲಿವುಡ್ (Bollywood) ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav Chadha) ಇತ್ತೀಚಿಗೆ ರೆಸ್ಟೋರೆಂಟ್‌ವೊಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಮತ್ತೆ ಹಲವು ಸ್ಥಳಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಇಬ್ಬರ ಮದುವೆ ಸುದ್ದಿ ಸದ್ದು ಮಾಡಲು ಶುರುವಾಗಿತ್ತು.  ಹಾಗಾಗಿ ಮದುವೆ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಇದನ್ನೂ ಓದಿ:ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ

ಇದೀಗ ಪರಿಣಿತಿ-ರಾಘವ್ ಎಂಗೇಜ್‌ಮೆಂಟ್ (Engagement) ಡೇಟ್ ಫಿಕ್ಸ್ ಆಗಿದೆ. ಎಲೆಕ್ಷನ್ ರಿಸಲ್ಟ್ (Election Result) ದಿನ ಮೇ 13ರಂದು ಈ ಜೋಡಿ ಗುರುಹಿರಿಯರ ಸಮ್ಮುಖದಲ್ಲಿ ಅಧಿಕೃತವಾಗಿ ಎಂಗೇಜ್ ಆಗಲಿದ್ದಾರೆ. ದೆಹಲಿಯಲ್ಲಿ ಎಂಗೇಜ್‌ಮೆಂಟ್ ಸಮಾರಂಭ ನಡೆಯಲಿದೆ. ಪ್ರಿಯಾಂಕಾ ಚೋಪ್ರಾ, ನಿಕ್ ಸೇರಿದಂತೆ ಆಪ್ತರಷ್ಟೇ ಪರಿಣಿತಿ ನಿಶ್ಚಿತಾರ್ಥ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.

ಈ ವರ್ಷದ ಅಂತ್ಯದೊಳಗೆ ರಾಜಕಾರಣಿ ರಾಘವ್- ಪರಿಣಿತಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ ನಿಶ್ಚಿತಾರ್ಥದ ತಯಾರಿ ನಡೆಯುತ್ತಿದೆ.

Share This Article