20 ಕೋಟಿ ಮೌಲ್ಯದ ಪ್ಲ್ಯಾಟ್ ಖರೀದಿಸಿದ ಅಥಿಯಾ ಶೆಟ್ಟಿ ದಂಪತಿ

Public TV
1 Min Read

ಬಾಲಿವುಡ್ ನಟಿ ಅಥಿಯಾ ಶೆಟ್ಟಿ (Athiya Shetty) ಮತ್ತು ಕ್ರಿಕೆಟಿಗ ಕೆ.ಎಲ್ ರಾಹುಲ್ (K.L Rahul) ದಂಪತಿ ಇದೀಗ ಮುಂಬೈನ ಪಾಲಿ ಹಿಲ್‌ನಲ್ಲಿ 20 ಕೋಟಿ ರೂ. ಮೌಲ್ಯದ ಪ್ಲ್ಯಾಟ್‌ವೊಂದನ್ನು ಖರೀದಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿಯಂತೆ ಅಥಿಯಾ ಶೆಟ್ಟಿ ಮತ್ತು ಕೆ.ಎಲ್ ರಾಹುಲ್‌ಗೂ ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಇದೆ. ಇನ್ನೂ ಕಳೆದ ವರ್ಷ ಮದುವೆಯಾದ ಈ ಜೋಡಿ ಈಗ ಮುಂಬೈ ಮಹಾನಗರಿಯಲ್ಲಿ ದುಬಾರಿ ಅಪಾರ್ಟ್‌ಮೆಂಟ್‌ಯೊಂದನ್ನು ಖರೀದಿಸಿದ್ದಾರೆ. ಇದನ್ನೂ ಓದಿ:ನ್ಯಾಯಾಂಗದ ಬಗ್ಗೆ ಗೌರವವಿದೆ, ಅಪರಾಧ ಸಾಬೀತಾದ್ರೆ ಯಾರೇ ಆಗಿದ್ರೂ ಶಿಕ್ಷೆ ಆಗಲಿ: ಅನು ಪ್ರಭಾಕರ್

ಕೆ.ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಅವರ ಹೊಸ ಮನೆಗೆ 20 ಕೋಟಿ ರೂ. ಮೌಲ್ಯದಾಗಿದೆ. ಸಂಧು ಪ್ಯಾಲೇಸ್ ಕಟ್ಟಡ ನೆಲ ಪ್ಲಸ್ 18 ಮಹಡಿಗಳ ಕಟ್ಟಡದ 2ನೇ ಮಹಡಿಯಿದ್ದು, ಒಟ್ಟು 3,350 ಚದರ ಅಡಿ ಸ್ಥಳವನ್ನು ಹೊಂದಿದೆ. 1.20 ಕೋಟಿ ರೂ.ಗಳ ಸ್ಟ್ಯಾಂಪ್ ಡ್ಯೂಟಿ ಮತ್ತು 30,000 ರೂ.ಗಳ ನೋಂದಣಿ ಶುಲ್ಕ ಪಾವತಿಸಿದ್ದಾರೆ. ದಾಖಲೆಗಳ ಪ್ರಕಾರ, ಮನೆಯನ್ನು ಜುಲೈ 15ರಂದು ನೋಂದಾಯಿಸಲಾಗಿದೆ.

ಅಂದಹಾಗೆ, ಇತ್ತೀಚೆಗೆ ಕೆ.ಎಲ್‌ ರಾಹುಲ್‌ ಮತ್ತು ಅಥಿಯಾ ಶೆಟ್ಟಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.

Share This Article