ಕಾನ್ಸ್ ಚಿತ್ರೋತ್ಸವ ಮುಗಿದ ನಂತರ ಐಶ್ವರ್ಯಾ ರೈ ಕೈಗೆ ಶಸ್ತ್ರ ಚಿಕಿತ್ಸೆ

Public TV
1 Min Read

ಕಾನ್ಸ್ ಫಿಲ್ಮ್ ಫೆಸ್ಟಿವಲ್ (Cannes Film Festival) ಈವೆಂಟ್ ಅದ್ಧೂರಿಯಾಗಿ ನಡೆಯುತ್ತಿದೆ. ವಿವಿಧ ದೇಶದ ಕಲಾವಿದರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ. ಈ ಬಾರಿ ಐಶ್ವರ್ಯಾ ರೈ ಕೈಗೆ ಬ್ಯಾಂಡೇಜ್ ಕಟ್ಟಿಕೊಂಡೆ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಸಿಕ್ಕಿರುವ ಮಾಹಿತಿ ಏನೆಂದರೆ, ಕಾನ್ಸ್ ಫೆಸ್ಟಿವಲ್ ಮುಗಿದ ನಂತರ ಭಾರತಕ್ಕೆ ವಾಪಸ್ ಆಗುತ್ತಿದ್ದಂತೆ ನಟಿ ಸರ್ಜರಿಗೆ ಒಳಗಾಗಲಿದ್ದಾರೆ. ಇದನ್ನೂ ಓದಿ:ಪ್ರಭಾಸ್‌ ಜೀವನದ ಸ್ಪೆಷಲ್‌ ವ್ಯಕ್ತಿ ಕೀರ್ತಿ ಸುರೇಶ್?‌

ಕೆಲ ದಿನಗಳ ಹಿಂದೆ ಐಶ್ವರ್ಯಾಗೆ ಅವರ ಮಣಿಕಟ್ಟಿಗೆ ಪೆಟ್ಟಾಗಿತ್ತು. ನೋವು ಇರುವುದರಿಂದ ಯಾವುದೇ ಕಾರ್ಯಕ್ರಮಕ್ಕೂ ತೆರಳುವುದು ಬೇಡ ಎಂದು ಆಪ್ತರು ಸಲಹೆ ನೀಡಿದ್ದರು. ಆದರೆ ಅದಕ್ಕೆ ನಟಿ ಒಪ್ಪಲಿಲ್ಲ. ಎಂದಿನಂತೆ ಈ ವರ್ಷವು ಕೂಡ ನಟಿ ಆಗಮಿಸಿದ್ದಾರೆ. ಸದ್ಯ ಕಾನ್ಸ್ ಚಿತ್ರೋತ್ಸವಕ್ಕೆ ಮಗಳ ಜೊತೆ ನಟಿ ಹಾಜರಿ ಹಾಕಿದ್ದಾರೆ. ಹಾಗಾಗಿ ಮುಂದಿನ ವಾರ ಅವರು ಶಸ್ತ್ರಚಿಕಿತ್ಸೆಗೆ ನಟಿ ಒಳಗಾಗಲಿದ್ದಾರೆ ಎನ್ನಲಾಗಿದೆ.

ಮೊದಲ ದಿನ ಐಶ್ವರ್ಯಾ ಫಲ್ಗುಣಿ ಶೇನ್ ಪೀಕಾಕ್ ಗೌನ್ ಧರಿಸಿದ್ದರು. ವಿಶೇಷ ಏನೆಂದರೆ, ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಅವರು ರೆಡ್ ಕಾರ್ಪೆಟ್‌ನಲ್ಲಿ ಪೋಸ್ ನೀಡಿದ್ದರು. ಐಶ್ವರ್ಯಾ ರೈ ಅವರು ಎರಡನೇ ಬಾರಿ ಬೆಳ್ಳಿ ಮತ್ತು ನೀಲಿ ಮಿಶ್ರಿತ ಗೌನ್ ಧರಿಸಿದ್ದರು. ಫಲ್ಗುಣಿ ಮತ್ತು ಶೇನ್ ಪೀಕಾಕ್ ವಿನ್ಯಾಸಗೊಳಿಸಿದ ಸ್ಕರ್ಟ್ ಇದಾಗಿತ್ತು.

Share This Article