ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಐಶ್ವರ್ಯಾ ರೈ

Public TV
1 Min Read

ನ್ಯಾಷನಲ್ ಸ್ಟಾರ್ ಯಶ್ (Yash) ಸದ್ಯ ‘ಟಾಕ್ಸಿಕ್’ (Toxic) ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಟಾಕ್ಸಿಕ್‌ ಟೀಮ್‌ನಿಂದ ಅಚ್ಚರಿಯ ಹೆಸರೊಂದು ಹೊರಬಿದ್ದಿದೆ. ಯಶ್ ಸಿನಿಮಾದಲ್ಲಿ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ (Aishwarya Rai) ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ತಡವಾದರೂ ಸರಿ ಅಂತ ಸಕಲ ಸಿದ್ಧತೆ ಮಾಡಿಕೊಂಡೆ ಯಶ್ ಅಖಾಡಕ್ಕೆ ಇಳಿಯುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾಗಾಗಿ ಬೆಂಗಳೂರಿನಲ್ಲಿ ಈಗಾಗಲೇ ಬೃಹತ್ ಸೆಟ್ ಹಾಕಿದ್ದಾರೆ. ಇನ್ನೇನು ಸದ್ಯದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆ. ಇದನ್ನೂ ಓದಿ:‘ಸಿಖಂದರ್‌’ ಸಲ್ಮಾನ್ ಖಾನ್‌ಗೆ ರಶ್ಮಿಕಾ ನಾಯಕಿ

ಇತ್ತೀಚೆಗೆ ಯಶ್ ಸಿನಿಮಾದಲ್ಲಿ ಕರೀನಾ ಕಪೂರ್ (Kareena Kapoor) ನಟಿಸುವ ಸುದ್ದಿ ಭಾರೀ ಚರ್ಚೆಯಾಗಿತ್ತು. ಯಶ್ ಸಹೋದರಿ ಪಾತ್ರಕ್ಕೆ ಅವರನ್ನು ಸಂಪರ್ಕಿಸಿದೆ ಎನ್ನಲಾಗಿತ್ತು. ಆದರೆ ಡೇಟ್ಸ್ ಸಮಸ್ಯೆಯಿಂದ ಕರೀನಾ ಹೊರನಡೆದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬೆನ್ನಲ್ಲೇ ನಯನತಾರಾ (Nayanathara) ಹೆಸರು ಚಾಲ್ತಿಗೆ ಬಂತು. ಇದರ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ಮೊದಲೇ ಐಶ್ವರ್ಯಾ ರೈ ಹೆಸರು ಚರ್ಚೆಗೆ ಗ್ರಾಸವಾಗಿದೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಸಹೋದರಿ ಪಾತ್ರಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ. ಹಾಗಾಗಿ ನಟನೆಯಲ್ಲಿ ಪಳಗಿರುವ ನಟಿಯರನ್ನೇ ಚಿತ್ರತಂಡ ಮಣೆ ಹಾಕ್ತಿದೆ. ಸದ್ಯ ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಅವರನ್ನು ಸಹೋದರಿ ಪಾತ್ರಕ್ಕೆ ಚಿತ್ರತಂಡ ಸಂಪರ್ಕಿಸಿದೆ. ನಯನತಾರಾ ಅಥವಾ ಐಶ್ವರ್ಯಾ ರೈ ಇಬ್ಬರಲ್ಲಿ ಒಬ್ಬರನ್ನು ಫೈನಲ್ ಮಾಡಲಿದೆ ಚಿತ್ರತಂಡ. ಹಾಗಾದ್ರೆ ಯಾರು ‘ಟಾಕ್ಸಿಕ್‌’ನಲ್ಲಿ ಕಾಣಿಸಿಕೊಳ್ತಾರೆ? ಎಂಬುದನ್ನು ಚಿತ್ರತಂಡ ಹೇಳುವವರೆಗೂ ಕಾದುನೋಡಬೇಕಿದೆ.

Share This Article