‘ಸಿಂಧೂರ’ ಆಯ್ತು, ಈಗ ಭಗವದ್ಗೀತೆ ಶ್ಲೋಕ- ಭಾರತೀಯ ಸಂಸ್ಕೃತಿ ಪ್ರದರ್ಶಿಸಿದ ಐಶ್ವರ್ಯಾ ರೈ!

Public TV
2 Min Read

ಬಾಲಿವುಡ್ ಬೆಡಗಿ ಐಶ್ವರ್ಯಾ ರೈ (Aishwarya Rai) ಅವರು ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (78th Cannes Film Festival) ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ಹಣೆಗೆ ಸಿಂಧೂರವಿಟ್ಟು ಸೀರೆಯಲ್ಲಿ ಮಿಂಚಿದ್ದರು. ಬಳಿಕ ಭಗವದ್ಗೀತೆ ಶ್ಲೋಕವಿರುವ ಗೌನ್‌ನಲ್ಲಿ ನಟಿ ಕಂಗೊಳಿಸಿದ್ದಾರೆ. ಇದನ್ನೂ ಓದಿ:ಕಾನ್ ಚಿತ್ರೋತ್ಸವದಲ್ಲಿ ಪ್ರಣಿತಾ ಧರಿಸಿದ್ದ ವಾಚ್ ಬೆಲೆ ಕೇಳಿ ಫ್ಯಾನ್ಸ್ ಶಾಕ್!

ಕಾನ್ ಚಲನಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಎರಡನೇ ದಿನ ರೆಡ್ ಕಾರ್ಪೆಟ್‌ನಲ್ಲಿ ನಟಿ ಹೆಜ್ಜೆ ಹಾಕಿದ್ದಾರೆ. ವಿಶೇಷವಾಗಿ ನಟಿಯು ಧರಿಸಿರುವ ಉಡುಗೆಯಲ್ಲಿ ಭಗವದ್ಗೀತೆಯ ಶ್ಲೋಕ ಎಲ್ಲರ ಗಮನ ಸೆಳೆದಿದೆ. ಕಪ್ಪು ಗೌನ್ ಜೊತೆ ಧರಿಸಿದ ಶಾಲಿನ ಮೇಲೆ ಶ್ಲೋಕ ಬರೆಯಲಾಗಿದೆ. ಭಾರತೀಯ ಸಂಸ್ಕೃತಿಯನ್ನು ನಟಿ ಪ್ರತಿನಿಧಿಸಿರುವ ರೀತಿ ಕಂಡು ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಕಾನ್ 2025: ಸಿಂಧೂರ ಹಣೆಗಿಟ್ಟು ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ

ಮೊನ್ನೆ ಬಿಳಿ ಬಣ್ಣದ ಸೀರೆಯಲ್ಲಿ ನಟಿ ಕಂಗೊಳಿಸಿದ್ದರು. ಹಣೆಗೆ ಸಿಂಧೂರವಿಟ್ಟು ಸಾಂಪ್ರದಾಯಿಕ ಲುಕ್‌ನಲ್ಲಿ ಐಶ್ವರ್ಯಾ ರೈ ಮಿಂಚಿದ್ದರು. ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುವಾಗ ನಗುತ್ತಾ ಕೈ ಮುಗಿದು ನಟಿ ನಮಸ್ಕರಿಸಿದ್ದರು.

78ನೇ ಕಾನ್ ಫಿಲ್ಮ್ ಫೆಸ್ಟಿವಲ್ ಮೇ 13ರಿಂದ ಆರಂಭಗೊಂಡಿದ್ದು, 24ರವರೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಫಿಲ್ಮ್ ಫೆಸ್ಟಿವಲ್ ಟೀಮ್ ಅಳೆದು ತೂಗಿ ಕೆಲವೇ ಕೆಲವು ತಾರೆಯರಿಗೆ ಮಾತ್ರ ಆಮಂತ್ರಣ ನೀಡುತ್ತಾರೆ. ದೇಶ ವಿದೇಶದ ಕಲಾವಿದರಿಗೆ ಆಹ್ವಾನಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಕುಡ್ಲದ ಬೆಡಗಿ ಐಶ್ವರ್ಯಾ ರೈ ಕೂಡ ಭಾಗಿಯಾಗಿದ್ದಾರೆ.

ಐಶ್ವರ್ಯಾ ರೈ ಭಾಗಿಯಾಗ್ತಿರೋದು ಇದೇ ಮೊದಲೇನಲ್ಲ. ಕಳೆದ ವರ್ಷ ಕೂಡ ನಟಿ ಭಾಗಿಯಾಗಿದ್ದರು. ಮಗಳು ಆರಾಧ್ಯ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಅಮ್ಮನ ರೆಡ್ ಕಾರ್ಪೆಟ್‌ನಲ್ಲಿ ವಾಕ್ ನೋಡಿ ಖುಷಿಪಟ್ಟಿದ್ದರು.

ಈ ಸಿನಿಮಾ ಹಬ್ಬದಲ್ಲಿ ಪ್ರಣಿತಾ ಸುಭಾಷ್, ಜಾನ್ವಿ ಕಪೂರ್, ಆದಿತಿ ರಾವ್ ಹೈದರಿ, ಕನ್ನಡದ ನಟಿ ದಿಶಾ ಮದನ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

ಬಾಲಿವುಡ್ ಚಿತ್ರರಂಗದ ಸೌಂದರ್ಯದ ಗಣಿ ಐಶ್ವರ್ಯಾ ರೈ ಅವರು ಕಳೆದ ವರ್ಷ ತೆರೆಕಂಡ ‘ಪೊನ್ನಿಯನ್ ಸೆಲ್ವನ್ 2’ರಲ್ಲಿ ನಟಿಸಿದ್ದರು. ಇದನ್ನು ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನ ಮಾಡಿದ್ದರು.

Share This Article