ಪತಿ ಝಹೀರ್ ಕಡೆಯಿಂದ ಸೋನಾಕ್ಷಿ ಸಿನ್ಹಾಗೆ ದುಬಾರಿ ಕಾರ್ ಗಿಫ್ಟ್

Public TV
1 Min Read

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಸದ್ಯ ಝಹೀರ್ (Zaheer Iqbal) ಜೊತೆಗಿನ ಮದುವೆ ಸಂಭ್ರಮದಲ್ಲಿದ್ದಾರೆ. ಜೂನ್ 23ರಂದು ಸಿಂಪಲ್ ಆಗಿ ಮದುವೆಯಾಗಿದ್ದಾರೆ. ಈ ಬೆನ್ನಲ್ಲೇ ನಟಿಗೆ ಪತಿ ಝಹೀರ್ ದುಬಾರಿ ಕಾರ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇಬ್ಬರೂ ಬೇರೆ ಬೇರೆ ಧರ್ಮವಾಗಿರುವ ಕಾರಣ ಕಾನೂನಾತ್ಮಕವಾಗಿ ವಿವಾಹ ನೋಂದಣಿ ಮಾಡಿಸುವ ಮೂಲಕ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಬಳಿಕ ಬಾಲಿವುಡ್ ಸ್ಟಾರ್ಸ್‌ಗೆ ಅದ್ಧೂರಿ ಆರತಕ್ಷತೆ ಕೂಡ ಆಯೋಜಿಸಿದ್ದಾರೆ.

ಇದೀಗ ಪತ್ನಿ ಸೋನಾಕ್ಷಿಗೆ BMW i7 ಕಾರನ್ನು ಉಡುಗೊರೆಯಾಗಿ ನೀಡಿದ್ದು, 2 ಕೋಟಿ ರೂ.ಗಿಂತ ಅಧಿಕ ಮೌಲ್ಯದಾಗಿದೆ. ಪತಿಯ ಗಿಫ್ಟ್‌ಗೆ ನಟಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

7 ವರ್ಷಗಳ ಹಿಂದೆ 23-06-2017ರಂದು ಪರಸ್ಪರ ನಾವು ಪರಿಶುದ್ಧ ಪ್ರೀತಿಯನ್ನು ಕಂಡೆವು ಮತ್ತು ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಧರಿಸಿದ್ದೇವು. ಈಗ ಅದೇ ಪ್ರೀತಿ ನಮಗೆ ಸವಾಲುಗಳನ್ನು ಎದುರಿಸಲು ದಾರಿ ತೋರಿಸಿದೆ. ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ ಎಂದು ಸೋನಾಕ್ಷಿ ಮತ್ತು ಝಹೀರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಎರಡು ಕುಟುಂಬದ ಮತ್ತು ದೇವರ ಹಾರೈಕೆಯಿಂದ ನಾವು ಇಂದು ಸತಿ- ಪತಿ ಆಗಿದ್ದೇವೆ ಎಂದು ಕೂಡ ಬರೆದುಕೊಂಡಿದ್ದಾರೆ. ಮಗಳ ಮದುವೆಯ ವೇಳೆ, ಸೋನಾಕ್ಷಿ ಜೊತೆಯೇ ನಿಂತು ತಂದೆ ಶತ್ರುಘ್ನ ಸಂಭ್ರಮಿಸಿದ್ದಾರೆ.

Share This Article