ಲಿವ್ ಇನ್ ರಿಲೇಶನ್‍ಶಿಪ್ – ಮದುವೆ ಬಗ್ಗೆ ವಿದ್ಯಾ ಬಾಲನ್ ಹೇಳೋದೇನು?

Public TV
2 Min Read

ಬಾಲಿವುಡ್ ತಾರೆಯರು ಮದುವೆಯಾದ ನಂತರ ಅವರ ಮದುವೆ, ಫ್ಯಾಮಿಲಿ ವಿಷಯಕ್ಕಾಗಿ ಹೆಚ್ಚು ಸುದ್ದಿ ಆಗುತ್ತಾರೆ. ಆದರೆ ಬಾಲಿವುಡ್ ಬೋಲ್ಡ್ ನಟಿ ವಿದ್ಯಾ ಬಾಲನ್ ಮಾತ್ರ ಬಾಡಿಶೇಮಿಂಗ್, ಫಿಟ್‍ನೆಸ್ ವಿಷಯದಲ್ಲಿ ಹೆಚ್ಚು ಸುದ್ದಿ ಆಗಿದ್ದಾರೆ. ಸೋಶಿಯಲ್ ಮೀಡಿಯಾ ಹಾಗೂ ಸುದ್ದಿಗೋಷ್ಠಿಯಲ್ಲಿ ಇವರು ತಮ್ಮ ಕುಟುಂಬದ ಬಗ್ಗೆ ಮಾತನಾಡುವುದು ತೀರಾ ಕಡಿಮೆ. ಆದರೆ ಇದೇ ಮೊದಲ ಬಾರಿಗೆ ವಿದ್ಯಾ ಬಾಲನ್ ರಿಲೇಶನ್‍ಶಿಪ್ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.


ಮಹಿಳಾ ಪ್ರಧಾನ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ವಿದ್ಯಾ, ಬಾಲಿವುಡ್‌ನಲ್ಲಿ ಬೋಲ್ಡ್ ನಟನೆಯ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ. ಮದುವೆ ನಂತರವೂ ಸಿನಿಮಾರಂಗದಲ್ಲಿ ಮುಂದುವರಿದಿರುವ ಈ ನಟಿ, ಈಗಾಲೂ ತಮ್ಮ ಬೇಡಿಕೆ ಉಳಿಸಿಕೊಂಡಿದ್ದಾರೆ. ಫಿಟ್ನೆಸ್ ಬಗ್ಗೆಯೂ ಬೋಲ್ಡ್ ಆಗಿ ಮಾತನಾಡುವ ಇವರು, ಯಾವತ್ತೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿಲ್ಲ. ಆದರೆ ಇದೇ ಮೊದಲಬಾರಿ ಸುದ್ದಿಗಾರರ ಜೊತೆ ಅವರು ‘ಲಿವ್ ಇನ್ ರಿಲೇಶನ್‍ಶಿಪ್’ ಮತ್ತು ‘ಮದುವೆ’ ಎರಡರ ನಡುವಿನ ವ್ಯತ್ಯಾಸದ ಬಗ್ಗೆ ನಗುತ್ತಲೇ ಉತ್ತರಿಸಿದರು.  ಇದನ್ನೂ ಓದಿ: ತಲೆಕೂದಲು ಬೋಳಿಸಿಕೊಂಡ ಫೋಟೋ ಶೇರ್ ಮಾಡಿದ ಗರ್ಭಿಣಿ ಸಂಜನಾ

‘ನನ್ನ ದಾಂಪತ್ಯ ಜೀವನ ಸುಂದರವಾಗಿದೆ’ ಎನ್ನುತ್ತಾ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತ್ತೊಬ್ಬರ ಮಾತುಗಳನ್ನು ಆಲಿಸುವ ತಾಳ್ಮೆ ಸಿದ್ಧಾರ್ಥ್ ರಾಯ್ ಕಪೂರ್ ಅವರಷ್ಟು ಬೇರೆಯವರಲ್ಲಿ ನಾನು ನೋಡಿಲ್ಲ. ಅವರೆಷ್ಟು ತಾಳ್ಮೆಯಿಂದ ಕೇಳುತ್ತಾರೆಂದರೆ, ನಾನು ಅವರಿಗೆ ಯಾವುದಾದರೂ ಗೊಂದಲದ ವಿಷಯಗಳನ್ನು ವಿವರಿಸುತ್ತಾ ನನಗೇ ಅದರ ಸ್ಪಷ್ಟ ಚಿತ್ರಣ ಸಿಗುತ್ತೆ. ಅವರಿಂದ ಸಲಹೆಗಳೇ ಬೇಕಾಗುವುದಿಲ್ಲ ಎಂದು ವಿವರಿಸಿದರು.

‘ಸಿದ್ಧಾರ್ಥ್ ಅವರನ್ನು ನನ್ನ ಬಾಳಸಂಗತಿಯನ್ನಾಗಿ ಪಡೆಯಲು ಪುಣ್ಯ ಮಾಡಿದ್ದೆ. ಅವರು ನನ್ನ ಜೀವನದ ಕೆಟ್ಟ ದಿನಗಳಲ್ಲಿ ಬಂದು ಸಂತೋಷವನ್ನು ತಂದುಕೊಟ್ಟಿದ್ದಾರೆ. ಅವರು ನನ್ನನ್ನು ನಾನಿದ್ದಂತೆಯೇ ಸ್ವೀಕರಿಸಿದ್ದಾರೆ. ಮದುವೆಯಾಗಿ ಸುಮಾರು 10 ವರ್ಷಗಳಾಗುತ್ತಾ ಬಂದಿದೆ. ನಾನು ಮದುವೆ ಬಗ್ಗೆ ನನಗಿದ್ದ ಕೆಟ್ಟ ಅಭಿಪ್ರಾಯ ಸಿದ್ಧಾರ್ಥ್‍ರಿಂದಾಗಿ ಬದಲಾಗಿದೆ. ಮೊದಲಿಗೆ ಲಿವ್ ಇನ್ ರಿಲೇಶನ್‍ಶಿಪ್ ಅಥವಾ ಮದುವೆಯಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎಂದು ಭಾವಿಸಿದ್ದೆ. ಆದರೆ ಸಿದ್ಧಾರ್ಥ್‍ರಿಂದಾಗಿ ವೈವಾಹಿಕ ಬದುಕು ಅದ್ಭುತವಾಗಿದೆ’ ಎಂದು ಸಂತಸ ಹಂಚಿಕೊಂಡರು.  ಇದನ್ನೂ ಓದಿ: ‘ನನ್ನಮ್ಮ ಸೂಪರ್ ಸ್ಟಾರ್’ ಯಶಸ್ಸಿನ ಗರಿಯನ್ನ ಮುಡಿಗೇರಿಸಿಕೊಂಡ ಬಿಜ್ಲಿ ಪಟಾಕಿ ವಂಶಿಕಾ – ಯಶಸ್ವಿನಿ

2012ರಲ್ಲಿ ವಿದ್ಯಾ ಬಾಲನ್ ಹಾಗೂ ಸಿದ್ಧಾರ್ಥ್ ರಾಯ್ ಕಪೂರ್ ಡೇಟಿಂಗ್ ಮಾಡುತ್ತಿರುವುದಾಗಿ ಅನೌನ್ಸ್ ಮಾಡಿದ್ದರು. ಅದೇ ವರ್ಷ ಇವರಿಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೂ ಇವರಿಬ್ಬರ ಫೋಟೋಗಳು ಎಲ್ಲೂ ಹೆಚ್ಚು ಸಿಕ್ಕಿಲ್ಲ. ಇಬ್ಬರೂ ಕೂಡ ಕೆಲಸದ ಹೊರತಾದ ವೈಯಕ್ತಿಕ ಫೋಟೋಗಳನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಈ ಬಗ್ಗೆ ಮಾತನಾಡಿದ ವಿದ್ಯಾ ಬಾಲನ್, ನಾನು ಒಂದು ರೀತಿಯ ಖಾಸಗಿ ವ್ಯಕ್ತಿ. ಕೆಲಸದ ಹೊರತಾದ ಫೋಟೋಗಳನ್ನು ಹಂಚಿಕೊಳ್ಳುವುದು ಇಷ್ಟವಾಗುವುದಿಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *