20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಸೋನು ಸೂದ್: ಆದಾಯ ತೆರಿಗೆ ಇಲಾಖೆ

Public TV
2 Min Read

ಮುಂಬೈ: ಬಾಲಿವುಡ್ ನಟ ಸೋನು ಸೂದ್ 20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಸತತ ಮೂರು ದಿನಗಳ ಕಾಲ ಸೋನು ಅವರ ಮನೆ, ಕಚೇರಿಗಳ ಮೇಲೆ ಸಮೀಕ್ಷೆ ನಡೆಸಿದ ಐಟಿ ಅಧಿಕಾರಿಗಳು, ನಟನಿಗೆ ಸಂಬಂಧಿಸಿದ ನಾನ್ ಪ್ರಾಫಿಟ್ ಸಂಸ್ಥೆಯು, 2.1 ಕೋಟಿಗಳನ್ನು ವಿದೇಶಿ ಮೂಲಗಳಿಂದ ಸಂಗ್ರಹಿಸಿದೆ ಎಂದಿದೆ. ಇದು ಸರ್ಕಾರದ ವಿದೇಶಿ ಹಣ ಸ್ವೀಕಾರದ ಕಾನೂನಿಗೆ ವಿರುದ್ಧವಾಗಿದೆ ಎಂದು ಇಲಾಖೆ ತಿಳಿಸಿದೆ.

ಮನೆಯ ಮೇಲಿನ ಸಮೀಕ್ಷೆಯ ವೇಳೆ ಅವರು ತಮ್ಮ ಸಹವರ್ತಿಗಳೊಂದಿಗೆ ಕೂಡಿ ತೆರಿಗೆ ವಂಚನೆ ನಡೆಸಿದ್ದರ ಕುರಿತು ಸಾಕ್ಷ್ಯಗಳು ಪತ್ತೆಯಾಗಿವೆ. ಇದರಲ್ಲಿ ಮುಖ್ಯವಾಗಿ ಲೆಕ್ಕವಿಲ್ಲದ ಆದಾಯವನ್ನು ನಕಲಿ ಸಂಸ್ಥೆಗಳ ಮೂಲಕ ಸಾಗಿಸಲಾಗಿದೆ ಎಂದು ಸಿಬಿಡಿಟಿ ಮಾಹಿತಿ ನೀಡಿದೆ. ಐಟಿ ಇಲಾಖೆಯು ಸೋನು ಸೂದ್ ಹಾಗೂ ಲಕ್ನೋ ಮೂಲದ ಸಂಸ್ಥೆಯೊಂದರ ಮೇಲೆ ಸಮೀಕ್ಷೆ ನಡೆಸಿತ್ತು.ಇದಕ್ಕೆ ಸಂಬಂಧಪಟ್ಟಂತೆ, ಮುಂಬೈ, ಲಕ್ನೋ, ಕಾನ್ಪುರ, ಜೈಪುರ, ದೆಹಲಿ, ಗುರುಗ್ರಾಮಗಳಲ್ಲಿ ಶೋಧ ನಡೆಸಲಾಗಿತ್ತು ಎಂದು ಕೇಂದ್ರ ಆದಾಯ ತೆರಿಗೆ ಮಂಡಳಿ ತಿಳಿಸಿದೆ.

ನಟನ ವಿರುದ್ಧದ ಆರೋಪಗಳು:

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಕಷ್ಟಪಡುತ್ತಿರುವವರಿಗೆ ಸಹಾಯ ಮಾಡಿದ ಪ್ರಯತ್ನಗಳು ಭಾರೀ ಪ್ರಶಂಸೆಯನ್ನುಗಳಿಸಿತ್ತು. ಆದರೆ ಕಳೆದ ವರ್ಷ ಜುಲೈನಲ್ಲಿ ಕೋವಿಡ್ ಮೊದಲ ಅಲೆಯಲ್ಲಿ ಸ್ಥಾಪಿಸಲಾದ ಅವರ ಲಾಭರಹಿತ ಸೂದ್ ಚಾರಿಟಿ ಫೌಂಡೇಶನ್ 18 ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹಿಸಿದೆ. ಈ ವರ್ಷದ ಏಪ್ರಿಲ್ ವರೆಗೆ, ಅದರಲ್ಲಿ 1.9 ಕೋಟಿ ಪರಿಹಾರ ಕಾರ್ಯಕ್ಕಾಗಿ ಖರ್ಚು ಮಾಡಿದೆ. ಉಳಿದ 17 ಕೋಟಿ ಹಣ ಲಾಭರಹಿತ ಬ್ಯಾಂಕ್ ಖಾತೆಯಲ್ಲಿ ಬಳಕೆಯಾಗದೆ ಉಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋನು ಸೂದ್ ಅವರ ಕಂಪನಿ ಮತ್ತು ಲಕ್ನೋ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯ ನಡುವಿನ ಇತ್ತೀಚಿನ ಒಪ್ಪಂದದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಒಪ್ಪಂದದ ಆಧಾರದ ಮೇಲೆ ತೆರಿಗೆ ವಂಚನೆಯ ಆರೋಪದ ಕುರಿತು ಸಮೀಕ್ಷೆ ನಡೆಸಲಾಗಿದೆ.

ಲಕ್ನೋದ ಸಂಸ್ಥೆಯಲ್ಲಿ ಸೋನು ಸೂದ್ ಅಕ್ರಮ ಹಣವನ್ನು ಹೂಡಿದ್ದಾರೆ. ಈ ಕುರಿತು ಸಾಕ್ಷಾಧಾರಗಳು ಲಭ್ಯವಾಗಿವೆ. ಜೊತೆಗೆ ಲಕ್ನೋದ ಕಂಪೆನಿಯು 65 ಕೋಟಿಗೂ ಅಧಿಕ ಬೋಗಸ್ ಕಾಂಟ್ರಾಕ್ಟ್ ಪಡೆದಿದೆ. ಹೆಚ್ಚಿನ ತನಿಖೆ ನಡೆದಿದೆ ಎಂದು ಮಾಹಿತಿ ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *