ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಾನಾ ಕಾಯಿಲೆಗಳಿಗೆ ತುತ್ತಾಗಿರುವ ಸಲ್ಮಾನ್ ಗೆ ಸಮಸ್ಯೆ ಉಲ್ಭಣಿಸಿದ್ದಲ್ಲಿ ಸ್ಟ್ರೋಕ್ ಕೂಡ ಆಗಬಹುದು ಅನ್ನುವ ಆತಂಕದಲ್ಲಿದ್ದಾರೆ ನಟ. ಈ ಮಾಹಿತಿಯನ್ನು ಸ್ವತಃ ಸಲ್ಮಾನ್ ಖಾನ್ ಅವರೇ ಹೇಳಿಕೊಂಡಿದ್ದಾರೆ.
ಕಪಿಲ್ ಶೋದಲ್ಲಿ ಅನಾರೋಗ್ಯದ ಕುರಿತು ಮಾತಾಡಿರುವ ಸಲ್ಮಾನ್ ಖಾನ್, ತಾವು ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಒಂದೊಂದು ಸಲ ಮೆದುಳಿನ ರಕ್ತನಾಳದಲ್ಲಿ ಊತ ಕಾಣಿಸಿಕೊಳ್ಳುತ್ತದೆಯಂತೆ. ಇದು ಅತಿಯಾದರೆ, ನರ ಛಿದ್ರಗೊಂಡು ಪ್ರಾಣಕ್ಕೆ ಅಪಾಯ ತರುವುದು ಅನ್ನೋದು ಸಲ್ಮಾನ್ ಖಾನ್ ಮಾತು. ಹಾಗಾಗಿ ಪದೇ ಪದೇ ಅವರು ಸ್ಟ್ರೋಕ್‌ನ ಆತಂಕಕ್ಕೆ ಒಳಗಾಗುತ್ತಿದ್ದಾರಂತೆ.
ಈ ಶೋನಲ್ಲಿ ಕೇವಲ ಕಾಯಿಲೆಗಳ ಬಗ್ಗೆ ಮಾತ್ರವಲ್ಲ, ಮದ್ವೆಯ ಬಗ್ಗೆಯೂ ಮಾತಾಡಿದ್ದಾರೆ. ಇವತ್ತಿನ ವಿಚ್ಛೇದನಗಳನ್ನು ನೋಡಿದರೆ, ಮದುವೆ ಭಯ ಆಗುತ್ತದೆ ಅಂದಿದ್ದಾರೆ. ಸಿಲ್ಲಿ ಕಾರಣಕ್ಕೆ ದಂಪತಿಗಳು ದೂರವಾಗುತ್ತಿದ್ದಾರೆ. ಆಸ್ತಿ, ಹಣದಾಸೆಗೂ ಡಿವೋರ್ಸ್ ಗಳು ನಡೆಯುತ್ತಿವೆ ಅಂತಾನೂ ಸಲ್ಮಾನ್ ನೇರವಾಗಿ ಮಾತಾಡಿದ್ದಾರೆ.