ಸಲ್ಮಾನ್ ಖಾನ್‌ರನ್ನ ಮಗುವಿನ ಮುಗ್ಧತೆಗೆ ಹೋಲಿಸಿದ ಸುಧಾ ಮೂರ್ತಿ

Public TV
2 Min Read

ನ್ಫೋಸಿಸ್ (Infosys) ಸಂಸ್ಥಾಪಕ ಎನ್.ಆರ್ ನಾರಾಯಣ್ ಮೂರ್ತಿ (N.R Narayanmurthy) ಅವರ ಪತ್ನಿ ಸುಧಾ ಮೂರ್ತಿ ಅವರು ಕೂಡ ಜನರಿಗೆ ಪರಿಚಿತರು. ಪತಿ ನಾರಾಯಣ್‌ಗೆ ಬಹುದೊಡ್ಡ ಶಕ್ತಿ ಎಂದೇ ಹೇಳಬಹುದು. ಅದೆಷ್ಟೇ ಕೋಟಿ ಕೋಟಿ ಹಣವಿದ್ದರೂ ಕೂಡ ಎಂದೂ ಜಂಭ ತೋರಿಸಿದವರಲ್ಲ. ಇದೀಗ ‘ದಿ ಕಪಿಲ್ ಶರ್ಮಾ’ (The Kapil Sharma) ಶೋಗೆ ಅತಿಥಿಯಾಗಿ ಆಗಮಿಸಿದ್ದಾರೆ. ಈ ವೇಳೆ ಸಲ್ಮಾನ್ ಖಾನ್ (Salman Khan) ಬಗ್ಗೆ ಸುಧಾಮೂರ್ತಿ ಮಾತನಾಡಿದ್ದಾರೆ.

ಜನಪ್ರಿಯ ‘ದಿ ಕಪಿಲ್ ಶರ್ಮಾ’ ಶೋಗೆ ಅನೇಕ ಸೆಲೆಬ್ರಿಟಿಗಳು ಈ ಶೋಗೆ ಬಂದು ಹೋಗಿದ್ದಾರೆ. ಸುಧಾ ಮೂರ್ತಿ ಕೂಡ ಈ ಕಾರ್ಯಕ್ರಮಕ್ಕೆ ಇದೀಗ ಆಗಮಿಸಿದ್ದರು. ಈ ವೇದಿಕೆ ಏರುವಾಗ ಅವರು ಸೀರೆ ಧರಿಸಿ ಸಿಂಪಲ್ ಆಗಿ ಬಂದಿದ್ದರು. ಅವರ ಸರಳತೆ ಎಲ್ಲರಿಗೂ ಇಷ್ಟ ಆಗಿದೆ. ಅವರನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ‘ದಿ ಕಪಿಲ್ ಶರ್ಮಾ’ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಬಗ್ಗೆ ಸುಧಾ ಮೂರ್ತಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಏಜೆಂಟ್’ ಸಿನಿಮಾ ಸೋಲಿನ ಬೆನ್ನಲ್ಲೇ ಪತ್ರ ಬರೆದ ಅಖಿಲ್ ಅಕ್ಕಿನೇನಿ

2015ರಲ್ಲಿ ತೆರೆಗೆ ಬಂದ ‘ಬಜರಂಗಿ ಭಾಯಿಜಾನ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಬಜರಂಗಿ ಭಕ್ತನಾಗಿ ಕಾಣಿಸಿಕೊಂಡರೆ ಹರ್ಷಾಲಿ ಮಲ್ಹೋತ್ರಾ ಅವರು ಮುನ್ನಿ ಆಗಿ ಗಮನ ಸೆಳೆದರು. ಈ ಸಿನಿಮಾಗೆ ಸಲ್ಮಾನ್ ಖಾನ್ ಮಾತ್ರ ಸೂಕ್ತ ಎಂದು ಸುಧಾಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ನಿರೂಪಕ ಕಪಿಲ್ ಮುಂದೆ ಸುಧಾ ಮೂರ್ತಿ ಮನಬಿಚ್ಚಿ ಮಾತನಾಡಿದ್ದಾರೆ.

ಮಗುವಿನ ಮುಗ್ಧತೆಯನ್ನು ಸಲ್ಮಾನ್ ಖಾನ್ ಮಾತ್ರ ತೆರೆಯ ಮೇಲೆ ತರಬಲ್ಲರು. ಅವರು `ಬಜರಂಗಿ ಭಾಯಿಜಾನ್’ ಸಿನಿಮಾ ಮಾಡಲು ಯೋಗ್ಯ ಹೀರೋ ಎಂದಿದ್ದಾರೆ. ಸುಧಾ ಮೂರ್ತಿ ಅವರ ಪ್ರತಿಕ್ರಿಯೆ, ಸಲ್ಮಾನ್ ಖಾನ್ ಅಭಿಮಾನಿಗಳ ಫ್ಯಾನ್ ಪೇಜ್‌ಗಳಲ್ಲಿ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋ ಸಲ್ಲು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

Share This Article