ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಚಿತ್ರದಲ್ಲಿ ಬಾಲಿವುಡ್ ನಟ ನಿಕಿತಿನ್ ಧೀರ್

Public TV
1 Min Read

ಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್’ (Martin Film) ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಇದೀಗ ಈ ಚಿತ್ರದ ಕುರಿತು ಇಂಟರೆಸ್ಟಿಂಗ್ ವಿಚಾರವೊಂದು ಹೊರಬಿದ್ದಿದೆ. ಧ್ರುವ ಸರ್ಜಾ ಜೊತೆ ಬಾಲಿವುಡ್ ನಟ ನಿಕಿತಿನ್ ಧೀರ್ (Nikitin Dheer) ತೆರೆಹಂಚಿಕೊಂಡಿದ್ದಾರೆ.

ಧ್ರುವ ಸರ್ಜಾ ಸಿನಿಮಾದಲ್ಲಿ ಸ್ಟಾರ್‌ ಕಲಾವಿದರ ದಂಡೇ ಇದೆ. ಪರಭಾಷಿಗರು ಕೂಡ ನಟಿಸಿದ್ದಾರೆ. ಹೀಗಿರುವಾಗ ಈ ನಡುವೆ ತಾಜಾ ಸಮಾಚಾರವೊಂದು ಸಿಕ್ಕಿದೆ. ಹಿಂದಿ ಸಿನಿಮಾದ ಖಡಕ್ ನಟ ನಿಕಿತಿನ್ ಅವರು ಧ್ರುವ ಜೊತೆ ಕೈಜೋಡಿಸಿದ್ದಾರೆ.

ನಿಕಿತಿನ್ ಧೀರ್ ‘ಮಾರ್ಟಿನ್’ ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆದರೆ ಪಾಸಿಟಿವ್ ರೋಲ್ ಅಥವಾ ನೆಗೆಟಿವ್ ಶೇಡ್ ಆಗಿರಬಹುದಾ ಎಂಬ ವಿಚಾರ ಲಭ್ಯವಾಗಿಲ್ಲ. ಆದರೆ ನಿಕಿತಿನ್ ಪಾತ್ರದ ಪೋಸ್ಟರ್ ಇದೀಗ ವೈರಲ್ ಆಗಿದ್ದು, ಅವರು ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.

ಹಿಂದಿ ‘ಮಹಾಭಾರತ’ದಲ್ಲಿ ಕರ್ಣನ ಪಾತ್ರಧಾರಿಯಾಗಿರುವ ಪಂಕಜ್ ಧೀರ್ ಅವರ ಪುತ್ರ ಈ ನಿಕಿತಿನ್. ಶಾರುಖ್‌ ಖಾನ್‌ ನಟನೆಯ ‌’ಚೆನ್ನೈ ಎಕ್ಸ್‌ಪ್ರೆಸ್’, ಸಲ್ಮಾನ್‌ ನಟನೆಯ ‘ದಬಾಂಗ್- 2’ ಸಿನಿಮಾ ಸೇರಿದಂತೆ ಹಲವು ತೆಲುಗು ಚಿತ್ರಗಳಲ್ಲಿ ನಿಕಿತಿನ್‌ ಧೀರ್  ನಟಿಸಿದ್ದಾರೆ.

ಅಂದಹಾಗೆ, ಎ.ಪಿ ಅರ್ಜುನ್ ನಿರ್ದೇಶನದ ‌’ಮಾರ್ಟಿನ್’ ಸಿನಿಮಾದಲ್ಲಿ ಧ್ರುವಗೆ ನಾಯಕಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದಾರೆ. ಇದೇ ಅಕ್ಟೋಬರ್ 11ಕ್ಕೆ ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

Share This Article