2ನೇ ಮಗುವಿನ ನಿರೀಕ್ಷೆಯಲ್ಲಿ ಅರ್ಜುನ್ ರಾಮ್‌ಪಾಲ್- ಗೇಬ್ರಿಯೆಲ್ಲಾ ಜೋಡಿ

Public TV
1 Min Read

ಬಾಲಿವುಡ್ (Bollywood) ನಟ ಅರ್ಜುನ್ ರಾಮ್‌ಪಾಲ್ – ಗೇಬ್ರಿಯೆಲ್ಲಾ ಜೋಡಿ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. 2ನೇ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನ ಬೇಬಿ ಬಂಪ್ ಫೋಟೋ ಹಂಚಿಕೊಳ್ಳುವ ಮೂಲಕ ಅರ್ಜುನ್ ಗರ್ಲ್‌ಫ್ರೆಂಡ್ ಗೇಬ್ರಿಯೆಲ್ಲಾ (Gabriella) ಅಪ್‌ಡೇಟ್ ನೀಡಿದ್ದಾರೆ. ಇದನ್ನೂ ಓದಿ:ಅವಾರ್ಡ್ ಕಾರ್ಯಕ್ರಮಕ್ಕೆ ವಿಭಿನ್ನ ಕಾಸ್ಟ್ಯೂಮ್ ನಲ್ಲಿ ಬಂದ ಜಾಕ್ವೆಲಿನ್

ದಿಲ್ ಕಾ ರಿಶ್ತಾ, ಹೌಸ್‌ಫುಲ್, ಓಂ ಶಾಂತಿ ಓಂ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಅರ್ಜುನ್ ರಾಮ್ ಪಾಲ್ (Arjun Rampal) ಬಾಲಿವುಡ್ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಮಾಡೆಲ್, ನಟಿ ಗೇಬ್ರಿಯೆಲ್ಲಾ – ಅರ್ಜುನ್ 2018ರಿಂದ ಲಿವಿನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಈ ಜೋಡಿಗೆ ಈಗಾಗಲೇ ಒಂದು ಮಗುವಿದೆ.

ನಟ ಅರ್ಜುನ್ ರಾಮ್‌ಪಾಲ್- ಗರ್ಲ್‌ಫ್ರೆಂಡ್ ಗೇಬ್ರಿಯೆಲ್ಲಾ ಜೋಡಿ ಇದೀಗ 2ನೇ ಮಗುವಿನ ಬರುವಿಕೆಯ ಖುಷಿಯಲ್ಲಿದ್ದಾರೆ. ನಟಿ ಗೇಬ್ರಿಯೆಲ್ಲಾ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಲೈಟ್ ಬಣ್ಣದ ಗೌನ್ ನಟಿ ಹಾಟ್ ಪೋಸ್ ನೀಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ತನ್ನ ಬೇಬಿ ಬಂಪ್ ಲುಕ್ ತೋರಿಸಿದ್ದಾರೆ.

ಅರ್ಜುನ್ ರಾಮ್‌ಪಾಲ್ ಈ ಹಿಂದೆ ಮದುವೆಯಾಗಿತ್ತು. ಅರ್ಜುನ್- ಮೆಹರ್ ದಂಪತಿಗೆ ಇಬ್ಬರೂ ಹೆಣ್ಣು ಮಕ್ಕಳಿದ್ದಾರೆ. 2019ರಲ್ಲಿ ಅರ್ಜುನ್ ಮೊದಲ ಪತ್ನಿಗೆ ಡಿವೋರ್ಸ್ ನೀಡಿ, ಗರ್ಲ್‌ಫ್ರೆಂಡ್ ಗೇಬ್ರಿಯೆಲ್ಲಾ ಜೊತೆ ಎಂಗೇಜ್ ಆಗಿದ್ದಾರೆ.

Share This Article