‘ಸೂರರೈ ಪೋಟ್ರು’ ರಿಮೇಕ್‌ನಲ್ಲಿ ಅಕ್ಷಯ್ ಕುಮಾರ್- ಜು.12ಕ್ಕೆ ಚಿತ್ರ ರಿಲೀಸ್

Public TV
1 Min Read

ರಾಷ್ಟ್ರ ಪ್ರಶಸ್ತಿ ಬಾಚಿದ ‘ಸೂರರೈ ಪೋಟ್ರು’ (Soorarai Pottru) ಸಿನಿಮಾ ಹಿಂದಿಯಲ್ಲಿ ರಿಮೇಕ್ ಆಗಿದೆ. ತಮಿಳು ನಟ ಸೂರ್ಯ (Suriya) ನಟಿಸಿದ್ದ ಪಾತ್ರವನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ನಟಿಸಿದ್ದಾರೆ. ಸುಧಾ ಕೊಂಗರ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಜುಲೈ 12ಕ್ಕೆ ರಿಲೀಸ್‌ಗೆ ಸಿದ್ಧವಾಗಿದೆ.

ಈ ಸಿನಿಮಾ ಕನ್ನಡಿಗ, ಏರ್ ಡೆಕ್ಕನ್ ಕಂಪನಿ ಸ್ಥಾಪಕ ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಅವರ ಜೀವನ ಕಥೆ ಆಧರಿಸಿದ ಚಿತ್ರವಾಗಿದೆ. ಅವರ ಜೀವನ ಸಾಧನೆಯನ್ನು ‘ಸೂರರೈ ಪೋಟ್ರು’ ಚಿತ್ರದ ಮೂಲಕ ಸುಧಾ ಕೊಂಗರ ತೋರಿಸಿದ್ದರು. ಸುಧಾ- ಸೂರ್ಯ ಕಾಂಬೋ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.

 

View this post on Instagram

 

A post shared by Akshay Kumar (@akshaykumar)

ಈಗ ಇದೇ ಕಥೆಯನ್ನು ಬಾಲಿವುಡ್‌ನಲ್ಲಿ ತೋರಿಸಲು ಅಕ್ಷಯ್ ಕುಮಾರ್ ಮತ್ತು ಸುಧಾ ಕೊಂಗರ ಸಜ್ಜಾಗಿದ್ದಾರೆ. ಚಿತ್ರಕ್ಕೆ ‘ಸರ್‌ಫಿರಾ’ ಎಂದು ಟೈಟಲ್ ಇಡಲಾಗಿದೆ. ಇದೇ ಜುಲೈ 12ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ಈ ಕುರಿತು ನಿರ್ದೇಶಕಿ ಸುಧಾ ಕೊಂಗರ ಸಾಮಾಜಿಕ ಜಾಲತಾಣದಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

‘ಸರ್‌ಫಿರಾ’ (Sarfira) ಚಿತ್ರದಲ್ಲಿ ಅಕ್ಷಯ್ ಕುಮಾರ್ (Akshay Kumar) ಜೊತೆ ಪರೇಶ್ ರಾವಲ್, ರಾಧಿಕಾ ಮದನ್ (Radhika Madan) ಹಾಗೂ ಸೀಮಾ ಬಿಸ್ವಾಸ್ ಸೇರಿದಂತೆ ಹಲವರು ನಟಿಸಿದ್ದಾರೆ.

Share This Article