ಕಾರಿಗೆ ಬೊಲೆರೋ ಡಿಕ್ಕಿ – ಇಬ್ಬರು ಯುವಕರು ದುರ್ಮರಣ

1 Min Read

ನೆಲಮಂಗಲ: ಕಾರಿಗೆ (Car) ಬೊಲೆರೋ (Bolero) ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಮಾಗಡಿ ರಸ್ತೆಯ ಮಾಚೋಹಳ್ಳಿ ಬಳಿ ನಡೆದಿದೆ.

ಗಗನ್ (27), ದರ್ಶನ್ (26) ಮೃತ ದುರ್ದೈವಿಗಳು. ಚನ್ನರಾಯಪಟ್ಟಣದ ಮೂಲದ ಗಗನ್ ಮಾದನಾಯಕನಹಳ್ಳಿ ಖಾಸಗಿ ಬಾರ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ದರ್ಶನ್ ಕೂಡ ಕೋಳಿ ಸಪ್ಲೈ ಮಾಡುವ ವಾಹನದ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ. ಎಲೆಕ್ಟ್ರಾನಿಕ್ ಸಿಟಿ ಬಳಿ ಸ್ನೇಹಿತನ ರೂಂಗೆAದು ಮೂವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಬೊಲೆರೋ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಕೆಡಿಪಿ ಸಭೆ | ಖಂಡ್ರೆ ಎದುರೇ ಕೈ ಕೈ ಮಿಲಾಯಿಸಿಕೊಂಡ MLA, MLC

ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತೋರ್ವ ಯುವಕ ಹಿಂದೆ ಕುಳಿತಿದ್ದರಿಂದ ಸಾವಿನಿಂದ ಪಾರಾಗಿದ್ದಾನೆ. ಸದ್ಯ ಇಬ್ಬರ ಮೃತದೇಹವನ್ನು ಮಾದನಾಯಕನಹಳ್ಳಿ ಪೊಲೀಸರು ನೆಲಮಂಗಲ ಶವಾಗಾರಕ್ಕೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಎತ್ತಿನ ಬಂಡಿಯೊಂದಿಗೆ BTDA ಕಚೇರಿಗೆ ರೈತರ ಮುತ್ತಿಗೆ

Share This Article