8ರ ಬಾಲಕನ ಕಿಡ್ನ್ಯಾಪ್‌ ಮಾಡಿ 80 ಲಕ್ಷಕ್ಕೆ ಬೇಡಿಕೆ – ಯುಪಿ ಉದ್ಯಮಿಯ ಮಗ ರಾಜಸ್ಥಾನದಲ್ಲಿ ಶವವಾಗಿ ಪತ್ತೆ

Public TV
1 Min Read

ಜೈಪುರ್‌: ಉತ್ತರ ಪ್ರದೇಶದ (Uttar Pradesh) ಉದ್ಯಮಿಯೊಬ್ಬರ 8 ವರ್ಷದ ಮಗನನ್ನು ಅಪಹರಿಸಿ 80 ಲಕ್ಷಕ್ಕೆ ಬೇಡಿಕೆ ಇಟ್ಟು, ಬಳಿಕ ಕೊಲೆ ಮಾಡಿ ರಾಜಸ್ಥಾನದ (Rajasthan) ಮಾನಿಯಾ ಗ್ರಾಮದಲ್ಲಿ ಹೂತು ಹಾಕಲಾಗಿದೆ.

ಸಾವಿಗೀಡಾದ ಬಾಲಕ, ಅಭಯ್ ಸಾರಿಗೆ ಸಂಸ್ಥೆಯ ಮಾಲೀಕ ವಿಜಯ್ ಪ್ರತಾಪ್ ಅವರ ಮಗನಾಗಿದ್ದು, 1ನೇ ತರಗತಿಯಲ್ಲಿ ಓದುತ್ತಿದ್ದ. ಆತ ಏಪ್ರಿಲ್‌ನಲ್ಲಿ ಆಗ್ರಾದ (Agra) ಶಾಲೆಯಲ್ಲಿ ಆಟ ಆಡುವಾಗ ನಾಪತ್ತೆಯಾಗಿದ್ದ. ಇದಾದ ಒಂದೆರಡು ದಿನದಲ್ಲಿ ಮನೆಗೆ ಒಂದು ಪತ್ರ ಬಂದಿತ್ತು. ಅದರಲ್ಲಿ ನಿಮ್ಮ ಮಗನನ್ನು ಅಪಹರಿಸಿದ್ದೇವೆ ಎಂದು 80 ಲಕ್ಷ ರೂ.ಗೆ ಬೇಡಿಕೆ ಇಡಲಾಗಿತ್ತು. ಇದನ್ನೂ ಓದಿ: ಅಹಮದಾಬಾದ್ ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆ

ಈಗ ಅಪಹರಣಕ್ಕೊಳಗಾದ ಬಾಲಕನ ಶವ ಪತ್ತೆಯಾಗಿದ್ದು, ರಾಜಸ್ಥಾನ ಪೊಲೀಸರು ಈ ಬಗ್ಗೆ ಆಗ್ರಾದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣದ ಹಿಂದಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ. ಎಲ್ಲಾ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಸಹಾಯಕ ಪೊಲೀಸ್ ಆಯುಕ್ತ ಅಮರದೀಪ್ ಲಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಇನ್ಸ್ಟಾದಲ್ಲಿ ಆಂಟಿಗೆ ಪ್ರೀತಿಸುವಂತೆ ಟಾರ್ಚರ್ – ಬುದ್ಧಿ ಹೇಳೋಕೆ ಬಂದವನ ಕತ್ತು ಕೊಯ್ದ ಪಾಗಲ್ ಪ್ರೇಮಿ!

ಉತ್ತರ ಪ್ರದೇಶದ ಪೊಲೀಸರು ಬಾಲಕನ ಮನೆಯ ಬಳಿಯ ದಿನಸಿ ಅಂಗಡಿಯ ಮಾಲೀಕನ ಮೇಲೆ ಅನುಮಾನ ವ್ಯಕ್ತಪಡಿಸಿ ವಶಕ್ಕೆ ಪಡೆದಿದ್ದರು. ಆತ ಮಗುವನ್ನು ಹತ್ಯೆ ಮಾಡಿ, ಹೂತು ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

Share This Article