15 ಕೆಜಿ ತೂಕ ಇಳಿಸಿದ್ಯಾಕೆ ಬಾಬಿ ಡಿಯೋಲ್..!?

Public TV
1 Min Read

ಬಾಲಿವುಡ್‌ನ ಅಮೇಜಿಂಗ್ ಆ್ಯಕ್ಟರ್ ಬಾಬಿ ಡಿಯೋಲ್ (Bobby Deol) ಸಾಲು ಸಾಲು ಸಿನಿಮಾದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ. ಅನಿಮಲ್ ಸಿನಿಮಾ ನಂತರ ಬಾಬಿ ಡಿಯೋಲ್ ಭಾರತೀಯ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸೌತ್‌ನ ಬಹುಕೋಟಿ ಬಜೆಟ್ ಸಿನಿಮಾದಲ್ಲಿ ಬಾಬಿ ಡಿಯೋಲ್ ಖಳನಾಯಕನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ತಮ್ಮ ಮುಂದಿನ ಸಿನಿಮಾಗಾಗಿ ಬಾಬಿ ಡಿಯೋಲ್ ಹಿಂದೆಂದೂ ಕಾಣಿಸಿಕೊಳ್ಳದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೊಸ ಸಿನಿಮಾದ ಹೊಸ ಪಾತ್ರಕ್ಕಾಗಿ ಬಾಬಿ ಡಿಯೋಲ್ 15 ಕೆಜಿ ತೂಕವನ್ನ ಇಳಿಸಿದ್ದಾರೆ. ಲಾಂಗ್ ಹೇರ್‌ಸ್ಟೈಲ್ ಪೆಪ್ಪರ್ ಸಾಲ್ಟ್ ಶೇವ್ ಲುಕ್‌ನಲ್ಲಿ ಮಸ್ತ್ ಆಗಿ ಕಾಣಿಸಿಕೊಳ್ತಿರುವ ಬಾಬಿ ಡಿಯೋಲ್ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅನಿಮಲ್, ಕಂಗುವ ಹಾಗೂ ಹೌಸ್‌ಫುಲ್-5 ಸಿನಿಮಾಗಳ ಮೂಲಕ ಪ್ರೇಕ್ಷಕರ ಪಾಲಿಗೆ ಅಚ್ಚುಮೆಚ್ಚಾಗಿದ್ದಾರೆ.

ಬಾಬಿ ಡಿಯೋಲ್ ಇತ್ತೀಚಿನ ಸಿನಿಮಾಗಳಲ್ಲಿ ಫುಲ್ ಫ್ಲೆಡ್ಜ್ ಹೀರೋ ಆಗಿ ಕಾಣಿಸಿಕೊಳ್ಳದೇ ಇದ್ದರೂ ವಿಭಿನ್ನ ಪಾತ್ರಗಳ ಮೂಲಕ ಮೆಚ್ಚಿಕೊಳ್ಳುತ್ತಿದ್ದಾರೆ. ಅಂದಹಾಗೆ ಬಾಬಿ ಡಿಯೋಲ್ ಸಾಕಷ್ಟು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನಿರ್ದೇಶನದ ವೆಬ್ ಸಿರೀಸ್‌ನಲ್ಲಿ ನಟಿಸುತ್ತಿದ್ದಾರೆ. ಇನ್ನು ಆಲಿಯಾ ಭಟ್ ನಟನೆಯ ಆಲ್ಫಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಬಾಬಿ ಡಿಯೋಲ್ ಈಗ 15 ಕೆಜಿ ತೂಕ ಇಳಿಸಿರುವ ಕಾರಣಕ್ಕೆ ಸಖತ್ ಸುದ್ದಿಯಾಗ್ತಿದ್ದಾರೆ. ಯಾವ ಸಿನಿಮಾಗೆ ಈ ಟ್ರಾನ್ಸ್ಫರ್ಮೇಷನ್ ಅನ್ನೋದು ಸದ್ಯದ ಕ್ಯೂರಿಯಾಸಿಟಿ.

Share This Article