ಮಗನ ಆ ಮಾತು ಮದ್ಯಪಾನ ಬಿಡಲು ಪ್ರೇರಣೆ ನೀಡಿತ್ತು- ಬಾಬಿ ಡಿಯೋಲ್ ಭಾವುಕ

Public TV
1 Min Read

ಬಾಲಿವುಡ್ ನಟ ಬಾಬಿ ಡಿಯೋಲ್ (Bobby Deol) ‘ಕಾಫಿ ವಿತ್ ಕರಣ್-8’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದು, ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮದ್ಯದ ದಾಸನಾಗಿದ್ದ ಬಾಬಿ, ಮಗನ ಮಾತಿಂದ ಪ್ರೇರಣೆಗೊಂಡು ಹೊರಬಂದ ಬಗ್ಗೆ ಭಾವುಕರಾಗಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ‘ಟೈಗರ್ 3’ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ

ಬಾಬಿ ಮಾತಾನಾಡಿ, ನಾನು ಪೂರ್ತಿಯಾಗಿ ಸೋತಿದ್ದೆ, ಆ ಸೋಲು ನನ್ನನ್ನು ಪೂರ್ತಿಯಾಗಿ ಮದ್ಯದ ದಾಸನಾಗಿ ಮಾಡಿತ್ತು. ಯಾಕೆ ಯಾರು ನನಗೆ ಒಳ್ಳೆಯ ಸಿನಿಮಾ ಅವಕಾಶಗಳನ್ನ ನೀಡುತ್ತಿಲ್ಲ ಎಂದು ಒಳ್ಳೆಯ ದಿನಗಳ ಬಗ್ಗೆ ನಂಬಿಕೆ ಕಳೆದುಕೊಂಡಿದ್ದೆ. ಆಗ ನನ್ನ ಪತ್ನಿ ಕೆಲಸಕ್ಕೆ ಹೋಗುತ್ತಿದ್ದಳು. ನಾನು ಮನೆಯಲ್ಲಿ ಕೂರುತ್ತಿದ್ದೆ, ಆ ಸಮಯದಲ್ಲಿ ನನ್ನ ಕುಟುಂಬ ನನ್ನ ಜೊತೆಯಲ್ಲಿತ್ತು ಎಂದಿದ್ದಾರೆ.

ಜೀವನದ ಬಗ್ಗೆ ನನಗಿದ್ದ ನಿಲುವನ್ನ ನನ್ನ ಮಗ ಬದಲಾಯಿಸಿದ. ಅಮ್ಮಾ ನೀನು ಕೆಲಸಕ್ಕೆ ಹೋಗುತ್ತೀಯಾ? ಅಪ್ಪ ಮನೆಯಲ್ಲಿ ಕೂರುತ್ತಾರೆ ಎಂಬ ನನ್ನ ಮಗನ ಮಾತು ನನ್ನ ಮನಸ್ಸಿಗೆ ತಟ್ಟಿತ್ತು. ಆ ಸಂದರ್ಭದಿಂದ ಬದಲಾದೆ, ಬದಲಾಗಲು ಸಮಯ ತೆಗೆದುಕೊಂಡೆ ಎಂದು ಕಾಫಿ ವಿತ್‌ ಕರಣ್‌-8 ಕಾರ್ಯಕ್ರಮದಲ್ಲಿ  ನಟ ಬಾಬಿ ಮಾತನಾಡಿದ್ದಾರೆ.

1995ರಲ್ಲಿ ‘ಬರ್ಸಾತ್’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ರಣ್‌ಬೀರ್ ನಟನೆಯ ‘ಅನಿಮಲ್’ (Animal Film) ಚಿತ್ರದಲ್ಲಿ ಬಾಬಿ ಡಿಯೋಲ್ ವಿಲನ್ ಆಗಿ ನಟಿಸಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್