ಘಾಟಿ ಇಶಾ ಫೌಂಡೇಷನ್ ಹೆಸರಲ್ಲಿ ನೂತನ ಪ್ರವಾಸ ಮಾರ್ಗ ಪರಿಚಯಿಸಿದ BMTC

Public TV
2 Min Read

ಬೆಂಗಳೂರು: ಈಗಾಗಲೇ ಅತ್ಯಂತ ಜನಪ್ರಿಯವಾಗಿರುವ ಬೆಂಗಳೂರು (Bengaluru) ಹಾಗೂ ಇಶಾ ಫೌಂಡೇಷನ್ (Isha Foundation) ವಿಶೇಷ ಟೂರ್ ಜೊತೆಗೆ ಇದೀಗ ಪ್ರಯಾಣಿಕರ ಒತ್ತಾಸೆಯ ಮೇರೆಗೆ ಘಾಟಿ ಇಶಾ ಫೌಂಡೇಷನ್ ಹೆಸರಲ್ಲಿ BMTC ನೂತನ ಪ್ರವಾಸ ಮಾರ್ಗವನ್ನು ಪರಿಚಯಿಸಿದೆ.

ಹೌದು, ಪ್ರಯಾಣಿಕರ ಆದ್ಯತೆಯ ಮೇರೆಗೆ ಘಾಟಿ ಇಶಾ ಫೌಂಡೇಷನ್ ಪ್ರವಾಸದ ಹೊಸ ಪ್ಯಾಕೇಜ್‌ನ್ನು ಹೊರತಂದಿದೆ. ಈ ಪ್ಯಾಕೇಜ್ ಮೂಲಭೂತ ಸೌಲಭ್ಯಗಳೊಂದಿಗೆ ಪ್ರಮುಖ ದೇವಾಲಯಗಳ ದರ್ಶನ ಪಡೆಯುವ ಅವಕಾಶವನ್ನು ಒದಗಿಸುತ್ತದೆ. ಬೆಂಗಳೂರು ನಗರವು ಐತಿಹಾಸಿಕ ಮಹತ್ವದ ಹಲವು ದೇವಾಲಯಗಳನ್ನು ಹೊಂದಿದ್ದು, ಭಕ್ತರ ಹಾಗೂ ಪ್ರವಾಸಿಗರ ಮಹತ್ವದ ಆರಾಧ್ಯ ಕೇಂದ್ರವಾಗಿದೆ. ಈ ದೇವಾಲಯಗಳು ಪ್ರಾಚೀನ ಶಿಲ್ಪಕಲೆಯ ಪ್ರತಿಬಿಂಬವಾಗಿದ್ದು, ಭಕ್ತಿ, ಶ್ರದ್ಧೆ ಮತ್ತು ಸಂಸ್ಕೃತಿಯ ಆಗರವಾಗಿದೆ.ಇದನ್ನೂ ಓದಿ: ಉಡುಪಿ | ಹೆಂಡತಿ ಹೆಚ್ಚು ಮೊಬೈಲ್ ಬಳಸ್ತಾಳೆ ಅಂತ ಕಡಿದು ಕೊಂದ ಪತಿ!

ಬೆಂಗಳೂರಿನ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಬೆಂ.ಮ.ಸಾ.ಸಂಸ್ಥೆಯು ಹೆಚ್ಚುವರಿ ಸೇರ್ಪಡೆಯಾಗಿ ಘಾಟಿ ಇಶಾ ಫೌಂಡೇಷನ್ ಎಂಬ ಹೆಸರಿನಡಿಯಲ್ಲಿ ಜೂ.21ರಿಂದ ಜಾರಿಗೆ ಬರಲಿದೆ. ವಾರಾಂತ್ಯ ದಿನಗಳಾದ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜೆ ದಿನಗಳಂದು ಹವಾನಿಯಂತ್ರಿತ ಬಸ್ಸಿನೊಂದಿಗೆ ಪ್ರವಾಸಿಗರಿಗೆ ಸಾರಿಗೆ ಸೌಲಭ್ಯವನ್ನು ಪ್ರಾರಂಭಿಸಲಾಗುತ್ತಿದೆ.

ಘಾಟಿ ಇಶಾ ಫೌಂಡೇಷನ್ ಪ್ಯಾಕೇಜ್‌ನ ವಾಹನವು ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗುತ್ತದೆ. ಪ್ರವಾಸದ ಅವಧಿಯಲ್ಲಿ ನೆಲದಾಂಜನೇಯ ಸ್ವಾಮಿ ದೇವಸ್ಥಾನ, ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ಜ್ಞಾನತೀರ್ಥ ಲಿಂಗ (ಮುದ್ದೇನಹಳ್ಳಿ), ಶ್ರೀ ದಕ್ಷಿಣ ಕಾಶಿ ಪಂಚನಂದಿ ಕ್ಷೇತ್ರ ಪಾಪಾಘ್ನಿ ಮಠ (ಸ್ಕಂದಗಿರಿ), ಕಲ್ಯಾಣಿ (ಕಾರಂಜಿ) ಬಳಿಕ (ಊಟ ವಿರಾಮ) ಮತ್ತು ಇಶಾ ಫೌಂಡೇಷನ್. ಸದರಿ ವಾಹನವು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಂಜೆ 7ಗಂಟೆಗೆ ಹಿಂದಿರುಗುತ್ತದೆ. ಒಟ್ಟು ಪ್ರಯಾಣ ದರ (ಟೋಲ್+ಜಿಎಸ್ಟಿ ಸೇರಿ) (ಪ್ರತಿ ಆಸನಕ್ಕೆ) 600 ರೂ. ನಿಗದಿಪಡಿಸಲಾದೆ.

ಜೂ.21ರಿಂದ ಬನಶಂಕರಿ ಟಿಟಿಎಂಸಿಯಿಂದ 1A ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ 1ಬB ಬಸ್‌ಗಳು ಬೆಳಿಗ್ಗೆ 11 ಗಂಟೆಗೆ ಹೊರಟು ಭೋಗ ನಂದೀಶ್ವರ ದೇವಸ್ಥಾನ, ಕಣಿವೆ ಬಸವಣ್ಣ ದೇವಸ್ಥಾನ, ಸರ್.ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ ಮತ್ತು ಸಮಾಧಿ ಮುದ್ದೇನಹಳ್ಳಿ, ರಂಗಸ್ಥಳ ರಂಗನಾಥ ಸ್ವಾಮಿ ದೇವಸ್ಥಾನ ಮತ್ತು ಇಶಾ ಫೌಂಡೇಷನ್ ನೋಡಲು ಅವಕಾಶ ನೀಡಲಿವೆ. ಸದರಿ ಬಸ್‌ಗಳು ರಾತ್ರಿ 10 ಗಂಟೆಗೆ ನೀವು ಹತ್ತಿದ ಟಿಟಿಎಂಸಿಗೆ ಹಿಂದುರಗಲಿವೆ. ಬನಶಂಕರಿ ಟಿಟಿಎಂಸಿಯಿಂದ ಪ್ರಯಾಣಿಸುವವರಿಗೆ ಪ್ರತಿ ಆಸನಕ್ಕೆ 700 ರೂ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್ ಪ್ರಯಾಣಿಸುವವರಿಗೆ ಪ್ರತಿ ಆಸನಕ್ಕೆ 700 ರೂ. ನಿಗದಿಪಡಿಸಲಾಗಿದೆ.

ಮೇಲ್ಕಂಡ ಎಲ್ಲಾ ಸ್ಥಳಗಳನ್ನು ಒಂದೇ ದಿನದಲ್ಲಿ ಒಂದೇ ಬಸ್ಸಿನ ಮೂಲಕ ಸಂದರ್ಶಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ www.mybmtc.com & www.ksrtc.in ಸಂಪರ್ಕಿಸುವುದು. ಬೆ.ಮ.ಸಾ.ಸಂಸ್ಥೆ ವತಿಯಿಂದ ಪರಿಚಯಿಸಿರುವ ಬೆಂಗಳೂರು ದರ್ಶಿನಿ ರೌಂಡ್ಸ್ ಇದು ಬೆಂಗಳೂರಿನ ಪ್ರಮುಖ ಪ್ರವಾಸಿ ಸ್ಥಳಗಳ ದರ್ಶಿನಿಯಾಗಿದ್ದು, ಬೆಂಗಳೂರು-ಇಶಾ ಫೌಂಡೇಶನ್ ವಿಶೇಷ ಪ್ಯಾಕೇಜ್ ಟೂರ್‌ನ್ನು ಯಶಸ್ವಿಯಾಗಿ ಒಂದು ವರ್ಷ ಪೂರ್ಣಗೊಳಿಸಿದೆ. ಈವರೆಗೆ 50,000ಕ್ಕೂ ಹೆಚ್ಚಿನ ಪ್ರಯಾಣಿಕರು ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿದ್ದಾರೆ.ಇದನ್ನೂ ಓದಿ: ಟ್ರಂಪ್‌ಗೆ ಎಚ್ಚರಿಕೆ ಕೊಟ್ಟು ಆತಂಕ ಹೊರಹಾಕಿದ ಮುನೀರ್‌

Share This Article