ಆನೇಕಲ್: ರಸ್ತೆ ದಾಟುವಾಗ ಕಾರು ಡಿಕ್ಕಿಯಾಗಿ ಬಿಎಂಟಿಸಿ (BMTC) ಚಾಲಕ ಸಾವನ್ನಪ್ಪಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಜಿಗಣಿ ಬಳಿ ನಡೆದಿದೆ.
ರಾಯಚೂರು (Raichuru) ಮೂಲದ ಮಲ್ಲಿಕಾರ್ಜುನ ಮೃತ ದುರ್ದೈವಿ. ಗುತ್ತಿಗೆ ಆಧಾರದಲ್ಲಿ ಬಿಎಂಟಿಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.ಇದನ್ನೂ ಓದಿ: ಆಯುಧ ಪೂಜೆ ಹಬ್ಬಕ್ಕೂ ಸಾರಿಗೆ ಇಲಾಖೆಯಲ್ಲಿ ದುಡ್ಡಿಲ್ವಾ?- ಒಂದು ಬಸ್‌ಗೆ ಕೇವಲ 150 ರೂ. ಬಿಡುಗಡೆ
ಜಿಗಣಿ ಡಬಲ್ ರೋಡ್ ರಸ್ತೆಯ ಬಿಎಂಟಿಸಿ ಡಿಪೋಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ತಮಿಳುನಾಡು (Tamilnadu) ರಿಜಿಸ್ಟ್ರೇಷನ್ ನಂಬರ್ ಹೊಂದಿದ್ದ ಇನ್ನೋವಾ ಕಾರು ವೇಗವಾಗಿ ಬಂದು ಬಿಎಂಟಿಸಿ ಚಾಲಕನಿಗೆ ಡಿಕ್ಕಿಯಾಗಿ, ಬಳಿಕ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಮಲ್ಲಿಕಾರ್ಜುನ ಸಾವನ್ನಪ್ಪಿದ್ದಾರೆ.
ಸದ್ಯ ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದು, ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಬಿಕಿನಿ ಎಐ ಫೋಟೋ ವೈರಲ್ ಮಾಡಿದವ್ರಿಗೆ ಸಾಯಿಪಲ್ಲವಿ ಟಾಂಗ್