ಬೆಂಗಳೂರು| ಪಾದಚಾರಿ ಜೊತೆ ಕಿರಿಕ್ – ಬಿಎಂಟಿಸಿ ಕಂಡಕ್ಟರ್ ಹೇಳಿದ್ದೇನು?

Public TV
1 Min Read

– ರೋಡ್‌ರೇಜ್ ಆರೋಪ ತಳ್ಳಿಹಾಕಿದ ಕಂಡಕ್ಟರ್

ಬೆಂಗಳೂರು: ಇಲ್ಲಿನ ಯಶವಂತಪುರ ಸಿಗ್ನಲ್ ಬಳಿ ಪಾದಚಾರಿ ಜೊತೆ ಕಿರಿಕ್‌ಗೆ ಸಂಬಂಧಿಸಿದಂತೆ ಬಿಎಂಟಿಸಿ ಕಂಡಕ್ಟರ್ ಸ್ಪಷ್ಟನೆ ನೀಡಿದ್ದಾರೆ. ರೇಡ್ ರೇಜ್ ಆರೋಪವನ್ನು ತಳ್ಳಿಹಾಕಿದ್ದಾರೆ.

ಯಶವಂತಪುರ ಸಿಗ್ನಲ್ ಬಳಿ ನನಗೆ, ಬಿಎಂಟಿಸಿ ಕಂಡಕ್ಟರ್ ಸೈಡ್‌ಗೆ ಹೋಗಿ ಎಂದು ಬಸ್‌ನಿಂದಲೇ ಕೂಗಿ ಹೇಳಿದ್ದರು. ಜೊತೆಗೆ ಬಸ್ ನಿಲ್ಲಿಸಿ ಕಂಡಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪಾದಚಾರಿ ಆರೋಪಿಸಿದ್ದ. ಪಾದಚಾರಿ ಹಾಗೂ ಕಂಡಕ್ಟರ್ ನಡುವೆ ಮಾತಿಗೆ ಮಾತು ಬೆಳೆದು ಕತ್ತಿನ ಪಟ್ಟಿ ಹಿಡಿದು ಕಂಡಕ್ಟರ್ ರಸ್ತೆಯಲ್ಲೇ ಎಳೆದಾಡಿದ್ದಾರೆ.

ತಮ್ಮ ಮೇಲಿನ ಆರೋಪ ನಿರಾಕರಿಸಿರುವ ಕಂಡಕ್ಟರ್, ಪಾದಚಾರಿಯೇ ಅವಾಚ್ಯ ಶಬ್ದಗಳಿಂದ ನಿಂದಿಸಿದ. ಹೀಗಾಗಿ ನಾನು ಬಸ್‌ನಿಂದ ಕೆಳಗೆ ಬಂದು ಪ್ರಶ್ನೆ ಮಾಡಿದೆ. ಬಸ್‌ಗಳು ಸಂಚರಿಸುವ ಆ ಜಾಗದಲ್ಲಿ ಪಾದಚಾರಿಗಳು ಓಡಾಡುವಂತಿಲ್ಲ ಎಂದು ಬೋರ್ಡ್ ಕೂಡ ಇದೆ. ಆದರೂ, ಅವರು ಫೋನ್‌ನಲ್ಲಿ ಮಾತನಾಡಿಕೊಂಡು ಆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು. ಸೈಡ್‌ಗೆ ಹೋಗ್ರಿ ಎಂದು ಹೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಕಂಡಕ್ಟರ್ ತಿಳಿಸಿದ್ದಾರೆ.

ಬಿಎಂಟಿಸಿ ಕಂಡಕ್ಟರ್ ತಮ್ಮ ಮೇಲಿನ ರೋಡ್‌ರೇಜ್ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ಪಾದಚಾರಿಗಳು ಸಂಚರಿಸುವಂತಿಲ್ಲ ಎಂದು ಬೋರ್ಡ್ ಇರುವ ಜಾಗದಲ್ಲಿ ಅವರು ಓಡಾಡಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆಯೇ ತಿರುಗಿಬಿದ್ದರು ಎಂದು ಕಂಡಕ್ಟರ್ ಆರೋಪ ಮಾಡಿದ್ದಾರೆ.

Share This Article