ಬ್ರೇಕ್ ಫೇಲ್ ಆಗಿ ಡಾಬಾ, ಬೀಡಾ ಅಂಗಡಿಗೆ ಗುದ್ದಿದ ಬಿಎಂಟಿಸಿ ಬಸ್!

Public TV
0 Min Read

ಬೆಂಗಳೂರು: ಬಿಎಂಟಿಸಿ (BMTC) ಎಲೆಕ್ಟ್ರಿಕಲ್ ಬಸ್ ಬ್ರೇಕ್ ಫೇಲ್ ಆಗಿ ಬೀಡಾ ಅಂಗಡಿ ಹಾಗೂ ಡಾಬಾ ಗೋಡೆಗೆ ಡಿಕ್ಕಿಯಾದ (Accident) ಘಟನೆ ನಾಗದೇವನಹಳ್ಳಿ ರಸ್ತೆಯಲ್ಲಿ ನಡೆದಿದೆ.

ಬೆಳಗ್ಗೆ 6:27ರ ಸುಮಾರಿಗೆ ಬಸ್ ಶಿರ್ಕೆ ಸರ್ಕಲ್‌ನಿಂದ ನಾಗರಭಾವಿ ಕಡೆ ಹೊರಟಿತ್ತು. ಈ ಸಮಯದಲ್ಲಿ ಬಸ್ ಅಪಘಾತ ನಡೆದಿದೆ. ಅಪಘಾತದ ವೇಳೆ ರಸ್ತೆಯಲ್ಲಿ ಯಾರು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಅವಘಡದಿಂದ ಬಸ್‌ನಲ್ಲಿದ್ದ ಮೂವರು ಪ್ರಯಾಣಿಕರು ಕೆಲ ಸಮಯ ಆತಂಕಕ್ಕೆ ಒಳಗಾಗಿದ್ದರು.

ಅಪಘಾತದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಎದೆ ನಡುಗಿಸುವಂತಿದೆ.

Share This Article