ಬೆಂಗಳೂರು: ಬಿಎಂಟಿಸಿ ಬಸ್ (BMTC Bus) ಟೈರ್ ಸ್ಫೋಟಗೊಂಡು ಓರ್ವ ಗಾಯಗೊಂಡ ಘಟನೆ ನಗರದ ಸಿಂಗಸಂದ್ರದಲ್ಲಿ ನಡೆದಿದೆ.
ಬಸ್ ಇಂದು (ಡಿ.28) ಬೆಳಗ್ಗೆ ಅತ್ತಿಬೆಲೆಯಿಂದ ಮೆಜೆಸ್ಟಿಕ್ ಕಡೆ ಹೋರಟಿತ್ತು. ಈ ವೇಳೆ ಬಸ್‌ನ ಟೈರ್ ಸ್ಫೋಟಗೊಂಡಿದೆ. ಇದರಿಂದ ಬಸ್‌ನ ಟೈರ್ ಬಳಿಯ ಸೀಟ್‌ಗೂ ಹಾನಿಯಾಗಿದೆ. ಅಲ್ಲದೇ ಕೆಳಭಾಗದಲ್ಲಿ ಛಿದ್ರವಾಗಿ ಬಸ್ ತುಂಬ ಧೂಳು ಆವರಿಸಿದೆ. ಇದನ್ನೂ ಓದಿ: ಮಂಗಳೂರು| ಗೋಮಾಂಸ ಸಾಗಾಟ ಮಾಡುತ್ತಿದ್ದ ಬೈಕ್ ಸವಾರನ ಮೇಲೆ ನೈತಿಕ ಪೊಲೀಸ್‌ಗಿರಿ
ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದಂತಾಗಿದೆ. ಸ್ಫೋಟದಿಂದ ಉಂಟಾದ ಶಬ್ದದಿಂದ ಜನ ಕೆಲಕಾಲ ಕಂಗಾಲಾಗಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದನ್ನೂ ಓದಿ: ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಸರಗಳ್ಳತನ – ಆರೋಪಿಗಳು ಅರೆಸ್ಟ್

