ಹಳದಿ ಮಾರ್ಗದ ಮೆಟ್ರೋ ಬಳಿಯೇ ಬಂತು ಬಿಎಂಟಿಸಿ ಬಸ್‌ ನಿಲ್ದಾಣ!

1 Min Read

ಬೆಂಗಳೂರು: ಹಳದಿ ಮಾರ್ಗದ ಮೆಟ್ರೋ (Yellow Line Metro) ನಿಲ್ದಾಣಗಳ ಸಮೀಪವೇ ಪ್ರಯಾಣಿಕರ ಅನುಕೂಲಕ್ಕಾಗಿ ಇದೀಗ ಬಿಎಂಟಿಸಿ ಹೊಸ ಬಸ್ ನಿಲ್ದಾಣ(BMTC Bus Stand) ವ್ಯವಸ್ಥೆ ಮಾಡಿದೆ. ಇಷ್ಟೇ ಅಲ್ಲದೇ ಇರುವ ಬಸ್ ನಿಲ್ದಾಣಗಳನ್ನು ಮೆಟ್ರೋ ನಿಲ್ದಾಣದ ಸಮೀಪ ಸ್ಥಳಾಂತರ ಮಾಡಲಾಗಿದೆ.

ಬಯೋಕಾನ್ ಹೆಬ್ಬಗೋಡಿ, ಬೆರೆಟೇನ ಅಗ್ರಹಾರ, ಸಿಂಗಸಂದ್ರ, ಹೊಂಗಸಂದ್ರ, ಸೆಂಟ್ರಲ್ ಸಿಲ್ಕ್ ಬೋರ್ಡ್, ಆ‌ರ್.ವಿ.ರಸ್ತೆಯಲ್ಲಿ ಹೊಸ ಬಸ್‌ ನಿಲ್ದಾಣಗಳನ್ನು ಸ್ಥಾಪನೆ ಮಾಡಲಾಗಿದೆ.  ಇದನ್ನೂ ಓದಿ:  ಜನವರಿಯಿಂದ ಭಾರತ್‌ ಟ್ಯಾಕ್ಸಿ ಆರಂಭ – ಚಾಲಕರಿಗೆ ನೇರವಾಗಿ ಹೋಗುತ್ತೆ 80% ಹಣ

 

ಎಲೆಕ್ಟ್ರಾನಿಕ್‌ ಸಿಟಿ, ಹೊಸ ರಸ್ತೆ ಮತ್ತು ರಾಗಿಗುಡ್ಡ ಬಸ್‌ ನಿಲ್ದಾಣಗಳನ್ನು ಮೆಟ್ರೋ ನಿಲ್ದಾಣ ಬಳಿ ಸ್ಥಳಾಂತರ ಮಾಡಲಾಗಿದೆ.  ಇದನ್ನೂ ಓದಿ: ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ; ಬೆಂಗಳೂರು ಟರ್ಫ್ ಕ್ಲಬ್‌ ಸುತ್ತಮುತ್ತ ಕುದುರೆ, ಕತ್ತೆ, ಹೇಸರಗತ್ತೆ ಚಲನವಲನಕ್ಕೆ ನಿರ್ಬಂಧ

ಜಯದೇವ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಕುಡ್ಲು ಗೇಟ್ ಹಾಗೂ ಇನ್ಫೋಸಿಸ್ ಫೌಂಡೇಶನ್ ಕೊನ್ನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣಗಳಲ್ಲಿ ಬಸ್ ನಿಲ್ದಾಣಗಳು ಈಗಾಗಲೇ 100 ಮೀಟರ್ ಒಳಗೆ ಲಭ್ಯವಿವೆ.

ಹಸ್ಕೂರು ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಲ್ಲಿ ಸ್ಥಳದ ಕೊರತೆಯಿಂದಾಗಿ ಬಸ್ ನಿಲ್ದಾಣಗಳನ್ನು ಸ್ಥಳಾಂತರಿಸಲು ಸಾಧ್ಯವಾಗಿಲ್ಲ.

Share This Article