ಬೆಂಗಳೂರು: ಶಾಲೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಬಾಲಕಿ, ಬಿಎಂಟಿಸಿ ಬಸ್ ಹರಿದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
9 ವರ್ಷದ ಭುವನಾ ಮೃತ ದುರ್ದೈವಿ. ರಾಜಾಜಿನಗರ 1ನೇ ಬ್ಲಾಕ್‌ನ ಸಿಗ್ನಲ್‌ನಲ್ಲಿ ನಿಂತಿದ್ದ ಮಗುವಿಗೆ ಬಿಎಂಟಿಸಿ ಬಸ್ ಬಂದು ಗುದ್ದಿದೆ.
ಮಗುವಿಗೆ ಡಿಕ್ಕಿ ಹೊಡೆದು ಬಿಎಂಟಿಸಿ ಬಸ್ ಚಾಲಕ ಪರಾರಿಯಾಗಿದ್ದಾನೆ. ಸದ್ಯ ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಮೃತದೇಹ ಇದೆ.