ಫೋಟೋ ಲೀಕ್- ಸಚಿವ ಜಮೀರ್‌ಗೆ ಸುರ್ಜೇವಾಲ ಕ್ಲಾಸ್

Public TV
1 Min Read

ಬೆಂಗಳೂರು: ಸಚಿವ ಜಮೀರ್ ಅಹಮ್ಮದ್‍ (Zameer ahmed Khan) ಗೆ ಕರೆ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ (Randeep Singh Surjewala) ತರಾಟೆಗೆ ತೆಗೆದುಕೊಂಡಿದ್ದಾರೆ.

ಹೌದು. ಇಂದು ನಗರದ ಖಾಸಗಿ ಹೋಟೆಲ್‍ನಲ್ಲಿ ಬಿಬಿಎಂಪಿ (BBMP) ಅಧಿಕಾರಿಗಳ ಜೊತೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಸಚಿವರಾದ ಕೆಜೆ ಜಾರ್ಜ್ (KJ George), ಜಮೀರ್ ಅಹ್ಮದ್ ಖಾನ್ ಸಭೆ ನಡೆಸಿದ್ರು. ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಪಾಲ್ಗೊಂಡಿದ್ದರು.

ಇದರ ಫೋಟೋವನ್ನು ಜಮೀರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಸಭೆಯಲ್ಲಿ ಸುರ್ಜೇವಾಲ ಇರುವುದನ್ನು ಕೂಡ ಉಲ್ಲೇಖಿಸಿದ್ದರು. ಈ ಫೋಟೋ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಬಿಜೆಪಿ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ವಿವಾದ ಆಗಬಹುದು ಎಂಬ ಕಾರಣಕ್ಕೆ ಗೌಪ್ಯತೆ ಕಾಪಾಡಿಕೊಂಡಿದ್ದ ಸಭೆಯ ಫೋಟೋ ಲೀಕ್ ಮಾಡಿದ್ದ ಜಮೀರ್ ವಿರುದ್ಧ ಸುರ್ಜೇವಾಲ ಆಕ್ರೋಶ ಹೊರಹಕಿದ್ದಾರೆ ಎನ್ನಲಾಗಿದ್ದು, ಸುರ್ಜೇವಾಲ ಕ್ಲಾಸ್‌ ಬೆನ್ನಲ್ಲೇ ಜಮೀರ್‌ ಟ್ವೀಟ್‌ ಡಿಲೀಟ್‌ ಮಾಡಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ- ಇದು 85 ಪರ್ಸೆಂಟ್ ಫಿಕ್ಸಿಂಗ್ ಸಭೆನಾ ಅಂತಾ ಬಿಜೆಪಿ ಪ್ರಶ್ನೆ

Share This Article