ಬೆಂಗಳೂರು | ನಟಿಯ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ – ಸ್ನೇಹಿತೆಗೆ ಕಳಿಸಿ ಹಣಕ್ಕೆ ಡಿಮ್ಯಾಂಡ್‌

1 Min Read

ಟಿ (Actress), ರಿಯಾಲಿಟಿ ಶೋ ಸ್ಪರ್ಧಿಯೊಬ್ಬರ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿರುವ ಪ್ರಕರಣ ಬೆಂಗಳೂರಿಲ್ಲಿ (Bengaluru) ನಡೆದಿದೆ.

ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಮಹಿಳಾ ಸೆಲೆಬ್ರೆಟಿ ಕ್ರಿಕೆಟ್ (Women’s Celebrity Cricket )ಟೂರ್ನಿಯಲ್ಲಿ ಈ ವಿಡಿಯೋ ರೆಕಾರ್ಡ್‌ ಮಾಡಲಾಗಿದೆ. ನಟಿ ಬಾತ್‌ರೂಮ್‌ನಲ್ಲಿದ್ದಾಗ ಅಪರಿಚಿತ ಈ ವಿಡಿಯೋ ಮಾಡಿದ್ದಾನೆ. ಬಳಿಕ Swan.3704722 ಇನ್ಸ್ಟಾ ಅಕೌಂಟ್‌ನಿಂದ ಆಕೆಯ ಸ್ನೇಹಿತೆಯ ಅಕೌಂಟ್‌ಗೆ ನಾಲ್ಕಾರು ವೀಡಿಯೋಗಳನ್ನು ಕಳಿಸಿದ್ದ. ವಿಡೀಯೋ ಪಬ್ಲಿಕ್ ಮಾಡಬಾರದೆಂದರೆ ಇಂತಿಷ್ಟು ಹಣ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಪ್ರೇಯಸಿ ಜೊತೆಗೆ ಮನಸ್ತಾಪ – ಖಾಸಗಿ ವಿಡಿಯೋ ಹಂಚಿಕೊಂಡು ಯುವಕ‌ ಆತ್ಮಹತ್ಯೆ

ವಿಡಿಯೋ ಕಾಲ್ ಮಾಡುವ ಮೂಲಕ ಮೂರ್ನಾಲ್ಕು ಬಾರಿ ಬ್ಲಾಕ್‌ಮೇಲ್‌ ಮಾಡಿದ್ದಾನೆ. ಹಣ ನೀಡದೇ ಹೋದ್ರೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಸಿಟಿ ಸೆನ್ ಪೊಲೀಸ್‌ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾಳೆ.

ದೂರಿನ ಅನ್ವಯ ಆರೋಪಿ ವಿರುದ್ಧ ಐಟಿ ಆಕ್ಟ್ ಮತ್ತು ಬಿಎನ್‌ಎಸ್ 77, 351 ಮತ್ತು 308 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಖಾಸಗಿ ವಿಡಿಯೋ ತೋರಿಸಿ ಹೈಸ್ಕೂಲ್‌ ಗೆಳತಿಗೆ ಬ್ಲ್ಯಾಕ್‌ಮೇಲ್‌ – 2.57 ಕೋಟಿ ಸುಲಿಗೆ!

Share This Article