Black Fungus ಔಷಧಿ ಟ್ಯಾಕ್ಸ್ ಫ್ರೀ, ಕೊರೊನಾ ವ್ಯಾಕ್ಸಿನ್ ಮೇಲಿನ ಶೇ.5 GST ಮುಂದುವರಿಕೆ

Public TV
1 Min Read

ನವದೆಹಲಿ: ಕೊರೊನಾಗೆ ಸಂಬಂಧಿಸಿದ ರಾಜ್ಯ ಸರ್ಕಾರಗಳ ಮನವಿಯನ್ನು ಜಿಎಸ್‍ಟಿ ಕೌನ್ಸಿಲ್ ಸ್ವೀಕರಿಸಿದೆ. ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಜಿಎಸ್‍ಟಿ ಕೌನ್ಸಿಲ್ ಸಭೆ ನಡೆಯಿತು. ಸಭೆಯಲ್ಲಿ ಬ್ಲ್ಯಾಕ್ ಫಂಗಸ್ ಮೇಲಿನ ತೆರಿಗೆಯನ್ನು ರದ್ದುಗೊಳಿಸಲಾಗಿದೆ. ಜೊತೆಗೆ ಕೊರೊನಾಗೆ ಸಂಬಂಧಿಸಿದ ಕೆಲ ಔಷಧಿ ಮತ್ತು ವೈದ್ಯಕೀಯ ಉಪಕರಣಗಳ ಮೇಲಿನ ತೆರಿಗೆಯನ್ನ ಕಡಿತಗೊಳಿಸಲಾಗಿದೆ.

ಕೊರೊನಾ ವ್ಯಾಕ್ಸಿನ್ ಮೇಲೆ ವಿಧಿಸಲಾಗುತ್ತಿರುವ ಶೇ.5ರಷ್ಟು ಜಿಎಸ್‍ಟಿಯನ್ನ ಮುಂದುವರಿಸಲಾಗಿದೆ. ಸಭೆಯ ಬಳಿಕ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ಶೇ.75ರಷ್ಟು ಕೊರೊನಾ ಲಸಿಕೆಯನ್ನು ಖರೀದಿಸುತ್ತಿದ್ದು, ಜಿಎಸ್‍ಟಿ ಸಹ ಪಾವತಿಸುತ್ತಿದೆ. ಸರ್ಕಾರಿ ಆಸ್ಪತ್ರೆಗಳ ಮೂಲಕ ಉಚಿತವಾಗಿ ಜನರಿಗೆ ಕೊರೊನಾಲಸಿಕೆ ತಲುಪಲಿದೆ ಎಂದರು.

Tocilizumab ಮತ್ತು Amphotericin B ಟ್ಯಾಕ್ಸ್ ಫ್ರೀ:
ದೇಶದಲ್ಲಿ ಬ್ಲ್ಯಾಕ್ ಫಂಗಸ್ ತೀವ್ರತೆ ಹೆಚ್ಚಾಗುತ್ತಿದೆ. ಹೀಗಾಗಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಯಲ್ಲಿ ಬಳಕೆಯಾಗುವ Tocilizumab ಮತ್ತು Amphotericin Bಮೇಲಿನ ಜಿಎಸ್‍ಟಿಯನ್ನ ಶೂನ್ಯಕ್ಕೆ ತರಲಾಗಿದೆ. ರೆಮ್‍ಡಿಸಿವರ್ ಮತ್ತು ಇತರೆ ಆ್ಯಂಟಿ-ಕಾಂಗ್ಲೆಟ್ ಔಷಧಿಗಳಾದ Heparin ಮೇಲಿನ ಜಿಎಸ್‍ಟಿಯನ್ನ ಶೇ.12 ರಿಂದ ಶೇ.5ಕ್ಕೆ ಇಳಿಸಲಾಗಿದೆ.

ತಾಪಮಾನ ಪರೀಕ್ಷಾ ಉಪಕರಣ ಹಾಗೂ ಶವಾಗಾರ ಗಳಿಗಾಗಿ ಬಳಕೆ ಆಗುವ ಗ್ಯಾಸ್, ಎಲೆಕ್ಟ್ರಿಕ್ ಫರ್ನೇಸ್ ಗಳಿಗೆ ಸಂಬಂಧಿಸಿದಂತೆ ಜಿಎಸ್‍ಟಿ ಯನ್ನು ಶೇ.18 ರಿಂದ 12ಕ್ಕೆ ಕಡಿತಗೊಳಿಸಲು ಶಿಫಾರಸು ಮಾಡಿದೆ. ಜಿಎಸ್‍ಟಿ ವ್ಯವಸ್ಥೆಯಲ್ಲಿ ಐಷಾರಾಮಿ ಮತ್ತು ವಾಹನಗಳ ಸರಕು ಮೇಲೆ ಶೇ.28 ತೆರಿಗೆ ಅನ್ವಯವಾಗುತ್ತೆ. ಆದ್ರೆ ಕೊರೊನಾ ಸಂಕಷ್ಟ ಹಿನ್ನೆಲೆ ಶೇ.28 ರಿಂದ ಶೇ.12ಕ್ಕೆ ತರಲಾಗಿದೆ. ಸೆಪ್ಟೆಂಬರ್ ವರೆಗೆ ಮಾತ್ರ ಈ ವಿನಾಯ್ತಿ ಅನ್ವಯವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *