ಬೆಂಗಳೂರು: ಡಿಕೆಶಿ- ಮುನಿರತ್ನ ನಡುವೆ ಮುಗಿಯದ ರಾಜಕೀಯ ಕದನ. ಜೆ.ಪಿ.ಪಾರ್ಕ್‌ನಲ್ಲಿ (JP Park) ನಡೆದ ಕರಿಟೋಪಿ ಕಲಹಕ್ಕೆ ಬಿಜೆಪಿ ನಾಯಕರು ಕೆಂಡಕಾರಿದ್ದಾರೆ. ಡಿಕೆಶಿ ವಿರುದ್ಧ ಮುನಿರತ್ನ (Munirathna) ಆಕ್ರೋಶ ಹೊರಹಾಕಿದ್ರೆ, ಗಲಾಟೆ ಮಾಡಲು ಬಂದಿದ್ದಾರೆ ಎಂದು ಡಿಕೆಶಿ (DK Shivakumar) ಟಾಂಗ್ ಕೊಟ್ಟಿದ್ದಾರೆ.
ಜೆ.ಪಿ.ಪಾರ್ಕ್‌ನಲ್ಲಿ ನಡೆದ ಕರಿಟೋಪಿ ಕಲಹ ಘಟನೆಗೆ ಡಿಕೆಶಿ ಟಕ್ಕರ್ ಕೊಟ್ಟಿದ್ದಾರೆ. ವೇದಿಕೆಯಲ್ಲಿ ಡಿಕೆಶಿ ಕೈಯಿಂದಲೇ ಮೈಕ್ ಕಿತ್ತುಕೊಂಡು ಆಕ್ರೋಶ ಹೊರಹಾಕಿದ ಮುನಿರತ್ನ ವಿರುದ್ಧ ಡಿಕೆಶಿ ಮಾತನಾಡಿದ್ದಾರೆ. ಸ್ಥಳೀಯ ಎಂಎಲ್‌ಎಗೆ ತಾಳ್ಮೆ ಕಡಿಮೆ. ಈ ಕಾರ್ಯಕ್ರಮ ಹಾಳು ಮಾಡೋಕೆ ಬಂದಿದ್ದಾರೆ. ಇಂಥವರನ್ನ ಗೆಲ್ಲಿಸಿದ್ದೀರಲ್ಲ ನಿಮ್ಮ ತಪ್ಪು. ಮುಂದೆ ಹೀಗೆ ಮಾಡಬೇಡಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸರ್ಕಾರಿ ಸ್ಥಳಗಳು, ಮುಜರಾಯಿ ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್ ಎಲ್ಲಾ ಚಟುವಟಿಕೆ ಬ್ಯಾನ್?
ಇದೇ ವೇಳೆ ರಾಜರಾಜೇಶ್ವರಿನಗರದ ಪರಾಜಿತ ಅಭ್ಯರ್ಥಿ ಕುಸುಮಾ ಮಾತನಾಡಿ, ಕಾರ್ಯಕ್ರಮಕ್ಕೆ ಶಾಸಕರು ಗಲಾಟೆ ಮಾಡಲೆಂದೇ ಬಂದಿದ್ದಾರೆ. ಗಲಾಟೆ ಅನ್ನೋದು ಶಾಸಕರಿಗೆ ಅಭ್ಯಾಸ ಆಗಿದೆ. ಅವಮಾನ ಮಾಡೋ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಕಿಡಿಕಾರಿದರು. ರಾಯಚೂರಿನಲ್ಲಿ ಮಾತನಾಡಿದ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಡಿಕೆಶಿ ಪರ ಬ್ಯಾಟಿಂಗ್ ನಡೆಸಿದ್ದು, ಕರಿಟೋಪಿ ಎಂದು ಕರೆದಿರೋದು ಸಲಿಗೆ ಅಂತಾ ಟಾಂಗ್ ಕೊಟ್ಟರು. ಇದನ್ನೂ ಓದಿ: ಶಾಸಕರಿಗೆ ತಾಳ್ಮೆ ಇಲ್ಲ, ಕಾರ್ಯಕ್ರಮ ಹಾಳು ಮಾಡಲು ಬಂದಿದ್ದಾರೆ: ಮುನಿರತ್ನ ವಿರುದ್ಧ ಡಿಕೆಶಿ ಕಿಡಿ
ಇದೆಲ್ಲದರ ನಡುವೆ ಡಿಕೆಶಿ ವಿರುದ್ಧ ಆಕ್ರೋಶ ಹೊರಹಾಕಿ, ನನ್ನ ಕರಿ ಟೋಪಿಯನ್ನ ಕಿತ್ತುಕೊಂಡಿದ್ದಾರೆ, ಹಲ್ಲೆ ಮಾಡಿದ್ದಾರೆ. ಚನ್ನಪಟ್ಟಣ, ಕನಕಪುರದಿಂದ ರೌಡಿಶೀಟರ್‌ಗಳನ್ನು ಕರೆಸಿದ್ದಾರೆ ಎಂದು ಮುನಿರತ್ನ ಗಂಭೀರವಾಗಿ ಆರೋಪಿಸಿದರು. ಇದು ಕಾಂಗ್ರೆಸ್ ಫಂಕ್ಷನ್. ಏಯ್ ಟೋಪಿ ಬಾರೋ ಇಲ್ಲಿ ಅಂತಾ ಅವಮಾನ ಮಾಡಿದ್ದಾರೆ. ನಾನು ಇವತ್ತು ಬದುಕಿದ್ದೀನಿ ಅಂದ್ರೆ ಪೊಲೀಸರೇ ಕಾರಣ ಎಂದರು. ಡಿಕೆಶಿ ಹೊರಡುವ ತನಕ ಜೆ.ಪಿ.ಪಾರ್ಕ್‌ನಲ್ಲೇ ಇದ್ದ ಮುನಿರತ್ನ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ರೌಡಿಗಳನ್ನು ಕರೆಸಿ ಹಲ್ಲೆ, ಪೊಲೀಸರಿಂದ ನಾನು ಬದುಕಿದ್ದೇನೆ: ಡಿಕೆಶಿ ವಿರುದ್ಧ ಮುನಿರತ್ನ ಆಕ್ರೋಶ
ಇದೇ ವೇಳೆ ಮುನಿರತ್ನ ಬೆಂಬಲಕ್ಕೆ ಬಿಜೆಪಿ ನಾಯಕರು ನಿಂತಿದ್ದು, ಕರಿಟೋಪಿ ಕೂಗಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ. ಮುಸ್ಲಿಂ ಟೋಪಿಗೆ ಜಾಲರಿ ಟೋಪಿ ಅಂತಾ ಕರೀರಿ ಅಂತಾ ಜೋಷಿ ಟಕ್ಕರ್ ಕೊಟ್ರೆ, ಡಿಕೆಶಿಗೆ ಮದ ಅಂತಾ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ – ಆಹ್ವಾನ ನೀಡದ್ದಕ್ಕೆ ಮುನಿರತ್ನ ಆಕ್ರೋಶ
ಒಟ್ನಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ಪೊಲಿಟಿಕಲ್ ವಾರ್‌ಗೆ ಸಾರ್ವಜನಿಕ ಸಭೆ ವೇದಿಕೆಯಾಗಿದ್ದು, ವಿಪರ್ಯಾಸವೇ ಆಗಿದ್ದು, ಕರೆದು ಕೆಣಕಿದ್ರಾ ಡಿಕೆಶಿ? ಆರ್‌ಆರ್‌ನಗರ ವಾರ್ ಎಲೆಕ್ಷನ್‌ಗಷ್ಟೇ ಸೀಮಿತವಾಗದೇ ಆಗಾಗ್ಗೆ ಬೆಂಕಿ ಹೊತ್ತಿಕೊಳ್ಳುವ ರಾಜಕಾರಣ ಏಕೆ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಿದೆ. ಇದನ್ನೂ ಓದಿ: ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್ ಬಂದ್ರೆ 100% ಆರ್‌ಎಸ್‌ಎಸ್ ಬ್ಯಾನ್: ಎಂ. ಲಕ್ಷ್ಮಣ್