ವಿಧಾನಪರಿಷತ್‌ ಉಪಸಭಾಪತಿಯಾಗಿ ಎಂ.ಕೆ ಪ್ರಾಣೇಶ್ ಆಯ್ಕೆ

By
2 Min Read

ಬೆಳಗಾವಿ: ಜವಾಬ್ದಾರಿಯುತ ವ್ಯಕ್ತಿ, ಸಜ್ಜನ, ಪ್ರಗತಿಪರ ಚಿಂತನೆ ಇರುವ ರಾಜಕಾರಣಿಯಾದ ಎಂ.ಕೆ. ಪ್ರಾಣೇಶ್ (MK Pranesh) ಅವರಿಂದ ವಿಧಾನಪರಿಷತ್ ಉಪಸಭಾಪತಿ (Legislative Council Deputy Chairman) ಸ್ಥಾನಕ್ಕೆ ಬೆಲೆ ಸಿಗಲಿದೆ. ಆ ಮೂಲಕ ಕರ್ನಾಟಕದ ಜನರ ಸಮಸ್ಯೆಗಳಿಗೆ ಉತ್ತರ ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

ಕರ್ನಾಟಕ ವಿಧಾನ ಪರಿಷತ್ತಿನ ಉಪ ಸಭಾಪತಿಗಳಾಗಿ ಆಯ್ಕೆಯಾಗಿರುವ ಎಂ.ಕೆ. ಪ್ರಾಣೇಶ್ ಅವರರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಪ್ರಾಣೇಶ್ ಅವರು ಸರ್ವ ಸದಸ್ಯರ ವಿಶ್ವಾಸ ಮತ್ತು ಪ್ರೀತಿಯನ್ನು ಗಳಿಸುತ್ತಾರೆ. ಎಂ.ಕೆ.ಪ್ರಾಣೇಶ್ ಅವರು ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ಮಾಡಿ ಪರಿಹಾರವನ್ನು ಪಡೆಯುವ ಸಜ್ಜನ ರಾಜಕಾರಣಿ. ಅವರ ನಡೆ, ನುಡಿ ಎರಡೂ ಒಂದು. ಬಹಳ ಸೌಮ್ಯ ಸ್ವಾಭಾವದವರು. ಅವರ ಮಾತುಗಳು ಕೂಡ ಬಹಳ ಸೌಮ್ಯ. ಎಲ್ಲಾ ಪಕ್ಷ, ಪಂಗಡಗಳನ್ನು ಮೀರಿ ಅವರು ಸ್ನೇಹ ಬೆಳೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ತಮ್ಮದೇ ಪಾತ್ರ ವಹಿಸಿದರು. ಆ ಭಾಗದ ರೈತರ, ಕಾಡಂಚಿನ ಜನರು, ಬುಡ ಕಟ್ಟು ಜನಾಂಗದವರ, ಕಾಫಿ ಬೆಳೆಗಾರರ ಸಮಸ್ಯೆ ಇರಬಹುದು. ಚಿಕ್ಕಮಗಳೂರಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಒಡನಾಡಿಯಾಗಿ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಯಾಗಿ, ಒಂದು ದಶಕಕ್ಕೂ ಹೆಚ್ಚಿನ ಕಾಲ ಕೆಲಸ ಮಾಡಿದ್ದಾರೆ ಎಂದರು. ಇದನ್ನೂ ಓದಿ: ರಾಜ್ಯಾದ್ಯಂತ ಇಂದಿನಿಂದ 2,000ಕ್ಕೂ ಹೆಚ್ಚು ಕ್ರಷರ್, ಕ್ವಾರಿಗಳು ಬಂದ್

ಕಳೆದ ಬಾರಿ ಉಪಸಭಾಪತಿಯಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಉತ್ತಮ ಸಭಾಪತಿಗಳು ಪರಿಷತ್ತಿಗೆ ದೊರೆತಿದ್ದು, ಕೆಲಸದ ಭಾರವನ್ನು ನಿಭಾಯಿಸುವ ಶಕ್ತಿ, ಸಾಮಥ್ರ್ಯ ಅವರಲ್ಲಿದೆ. ಸದನವನ್ನು ಅತ್ಯಂತ ಸುಗಮವಾಗಿ ಮತ್ತು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಲಿದೆ. ಪ್ರಾಣೇಶ್ ಅವರು ತಮ್ಮ ಗಟ್ಟಿ ನಿಲುವನ್ನು ಹಲವಾರು ಬಾರಿ ಪ್ರದರ್ಶಿಸಿದ್ದಾರೆ. ಆ ನಿಲುವಿನಿಂದ ಇಡೀ ಸದನವನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ

ಪ್ರಜಾಪ್ರಭುತ್ವದಲ್ಲಿ ಹಲವಾರು ಬಾರಿ ಪಕ್ಷಗಳ ನಿಲುವಿನ ಬಗ್ಗೆ ಮಾತನಾಡುತ್ತೇವೆ. ಸಾರ್ವಜನಿಕ ಹಿತಾಸಕ್ತಿ, ನಾಡಿನ ನೆಲ, ಜಲದ ಪ್ರಶ್ನೆ ಇರಬಹುದು. ಅಥವಾ ನಾಡಿನ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಸಂದರ್ಭದಲ್ಲಿ ನಾವು ಎಲ್ಲವನ್ನೂ ಮೀರಿ, ಎತ್ತರದಲ್ಲಿ ನಿಂತು, ಪರಿಹಾರವನ್ನು ಕಂಡುಕೊಳ್ಳುವುದು ಅಗತ್ಯ. ಎಲ್ಲರಿಗೂ ಇದು ಅನ್ವಯಿಸುತ್ತದೆ. ವಿಶೇಷವಾಗಿ ದೊಡ್ಡ ಸ್ಥಾನದಲ್ಲಿ ಕುಳಿತುಕೊಳ್ಳುವವರ ಜವಾಬ್ದಾರಿ ಬಹಳ ದೊಡ್ಡದಿದೆ. ಸಾಮಾನ್ಯವಾಗಿ ಮೇಲ್ಮನೆಯಿಂದ ವಿಭಿನ್ನವಾದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಈ ಮನೆಯಲ್ಲಿ ಒಳ್ಳೆ ರೀತಿಯ, ಆಳವಾದ, ವಿಷಯಾಧಾರಿತ ಚರ್ಚೆಯಾಗುತ್ತದೆ ಮತ್ತು ಹಲವಾರು ಕಾನೂನು ರಚಿಸುವ ಸಂದರ್ಭದಲ್ಲಿ ಹೊಸ ಆಯಾಮ, ಬೆಳಕನ್ನು ಚೆಲ್ಲಲು ಈ ಸದನದಲ್ಲಿ ಅವಕಾಶವಿದೆ. ಅಧ್ಯಯನಶೀಲ ಚರ್ಚೆಗಳಾಗಬೇಕೆನ್ನುವುದು ಜನರ ನಿರೀಕ್ಷೆ. ಅದಕ್ಕೆ ತಾವು ಹೆಚ್ಚಿನ ಅವಕಾಶ ಮತ್ತು ಒತ್ತು ನೀಡುವ ಅಗತ್ಯವಿದೆ. ಹಿರಿಯ ವಿಧಾನ ಪರಿಷತ್ ಸದಸ್ಯರಾಗಿರುವ ಸಭಾಪತಿಗಳಿಗೆ ಅಪಾರ ಅನುಭವವಿದೆ. ಆ ಅನುಭವದ ಜೊತೆಗೆ ಕ್ರಿಯಾಶೀಲತೆಯನ್ನು ಜೊತೆಗೂಡಿಸಿ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು, ಸದನವನ್ನು ಅತ್ಯುತ್ತಮವಾಗಿ ನಡೆಸಲು ಸಾಧ್ಯ. ಈ ವಿಧಾನಮಂಡಲದ ಅಂತಿಮ ಘಟ್ಟದಲ್ಲಿದ್ದು, ಈ ಸಂದರ್ಭದಲ್ಲಿ ಹಲವಾರು ವಿಚಾರಗಳು ಬರಲಿವೆ. ಇವೆಲ್ಲವನ್ನೂ ಸೂಕ್ತವಾಗಿ ನಿಭಾಯಿಸುತ್ತಾರೆಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *