– ಲಾಂಗ್ ಹಿಡಿದು ಬೆದರಿಕೆ ಹಾಕಿದ್ದ ಲೇಡಿ ಡಾನ್
ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಯ ವಿವಸ್ತ್ರ ಪ್ರಕರಣದ ತನಿಖೆ ಚುರುಕಾಗಿ ನಡೆಯುತ್ತಿದ್ದು, ಈ ಮಧ್ಯೆ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ನ್ಯಾಯಾಂಗ ಬಂಧನದಲ್ಲಿರುವ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಯ (BJP Worker Sujata Handi) ನಿಜಮುಖ ʻಪಬ್ಲಿಕ್ ಟಿವಿʼಯಲ್ಲಿ ಅನಾವರಣಗೊಂಡಿದೆ.
ಸುಜಾತಾ ಹಂಡಿ ವ್ಯಕ್ತಿಯೊಬ್ಬರ ಮೇಲೆ ಮೃಗೀಯ ವರ್ತನೆ ತೋರಿದ್ದ 3 ವರ್ಷಗಳ ಹಳೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಡಿಯೋ ನೋಡಿದ್ರೆ ಈಕೆ ಹೆಣ್ಣಾ ಹೆಮ್ಮಾರಿನಾ ಅನ್ನೋ ಪ್ರಶ್ನೆಯೂ ಮೂಡುತ್ತದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಅಮಾನುಷ ಕೃತ್ಯ – ಪೊಲೀಸರಿಂದಲೇ ಬಿಜೆಪಿ ಕಾರ್ಯಕರ್ತೆಗೆ ಬಟ್ಟೆಬಿಚ್ಚಿ ಥಳಿಸಿದ ಆರೋಪ!
ಹೌದು. ಈ ಹಿಂದೆ ಧಾರವಾಡ (Dharwad) ತಾಲೂಕಿನ ತುಕಾರಾಮ್ ಎಂಬ ವ್ಯಕ್ತಿಗೆ ಹನಿಟ್ರ್ಯಾಪ್ ಮಾಡಿದ್ದ ಸುಜಾತಾ ಹಂಡಿ ಹಣಕ್ಕೆ ಬೇಡಿಕೆಯಿಟ್ಟು ಹಿಗ್ಗಾಮುಗ್ಗಾ ಥಳಿಸಿದ್ದಳು. ಅಮ್ಮಾ, ತಾಯಿ ಅಕ್ಕಾ ಬಿಟ್ಟುಬಿಡು ಅಂತ ಆ ವ್ಯಕ್ತಿ ಗೋಳಾಡಿದ್ರೂ, ಕಾಲಿಗೆ ಬಿದ್ದು ಕಣ್ಣೀರು ಹಾಕಿದ್ರೂ ಬಿಡದೇ ನೈಲಾನ್ ಹಗ್ಗದಿಂದ ಮನಸೋ ಇಚ್ಛೆ ಥಳಿಸಿದ್ದಾಳೆ. ಲಾಂಗ್ ಹಿಡಿದು ಲೇಡಿ ಡಾನ್‌ನಂತೆ ಬೆದರಿಕೆಯೂ ಹಾಕಿದ್ದಾಳೆ ಇದೆಲ್ಲವೂ ವಿಡಿಯೋದಲ್ಲಿ (Video Viral) ಸೆರೆಯಾಗಿದೆ.
1.84 ಲಕ್ಷ ವಸೂಲಿ
ಹನಿಟ್ರ್ಯಾಪ್ ಮಾಡಿ ಕರೆದುಕೊಂಡು ಬಂದಿದ್ದ ವ್ಯಕ್ತಿಯನ್ನ ಕೂಡಿ ಹಾಕಿ 4 ದಿನ ಟಾರ್ಚರ್ ಮಾಡಿದ್ದಾಳೆ. ಕೆಲ ಸಹಚರರ ಜೊತೆ ಸೇರಿ ಸುಜಾತಾ ಹಂಡಿ 1.84 ಲಕ್ಷ ರೂ. ಹಣವನ್ನೂ ವಸೂಲಿ ಮಾಡಿದ್ದಳೆ. ಈ ಬಗ್ಗೆ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸುಜಾತಾ ಮತ್ತು ಆಕೆ ಸಹಚರರ ವಿರುದ್ಧ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ 2023 ರ ನವೆಂಬರ್ 12 ರಂದು ದೂರು ದಾಖಲಿಸಿದ್ದರು. ಇದನ್ನೂ ಓದಿ: ಮಹಿಳೆಯೇ ಬಟ್ಟೆ ಬಿಚ್ಚಿ ಸೀನ್ ಕ್ರಿಯೇಟ್ ಮಾಡಿದ್ದಾಳೆ, ಆಕೆ ವಿರುದ್ಧ 9 ಕೇಸ್ ಇದೆ: ಹು-ಧಾ ಆಯುಕ್ತ ಶಶಿಕುಮಾರ್
ಬಳಿಕ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಸುಜಾತಾ ಮತ್ತು ಆಕೆಯ ಸಹಚರರನ್ನ ಬಂಧಿಸಿದ್ದರು. ಬಳಿಕ ಸುಜಾತಾ ಹಂಡಿ ಜಾಮೀನಿನ ಮೇಲೆ ಹೊರ ಬಂದಿದ್ದಳು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯೇ ಬಟ್ಟೆ ಹರಿದುಕೊಂಡಿದ್ದಾಳೆ: ಸಂತೋಷ್ ಲಾಡ್


